ಶೈಕ್ಷಣಿಗ ಗುಣಮಟ್ಟ ಸುಧಾರಣೆ, ರಸ್ತೆಗಳ ಅಭಿವೃದ್ಧಿ ನಾನಾ ಯೋಜನೆಗಳಿಗೆ ಚಾಲನೆ
Various projects for improving the quality of education and developing roads launched
ವಿಜಯಪುರ 03 : ಅಭಿವೃದ್ಧಿಯ ಮೂಲಕ ಗ್ರಾಮೀಣ ಭಾಗದ ರಸ್ತೆಗಳಿಗೆ ಹೊಸ ಮೆರಗು ನೀಡಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ. ಇಂದು ರವಿವಾರ ಬಬಲೇಶ್ವರ ತಾಲೂಕಿನ ಯಕ್ಕುಂಡಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರೂ. 300 ಲಕ್ಷ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 34ರ ಯಕ್ಕುಂಡಿ, ಸಂಗಾಪುರ, ಶೇಗುಣಸಿ, ಕಾಖಂಡಕಿ ವ್ಹಾಯಾ ಹರಳಯ್ಯನ ಗುಂಡ 0 ಕಿ. ಮೀ. ಯಿಂದ 3 ಕಿ. ಮೀ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಭಾಗದ ಜನತೆಯ ಬಹುದಿನಗಳ ನೀರೀಕ್ಷೆಯಾಗಿದ್ದ ರಾಷ್ಟ್ರೀಯ ಹೆದ್ದಾರಿ 34ರಿಂದ ಹರಳಯ್ಯನಗುಂಡ ರಸ್ತೆಯವರೆಗೆ ಈ ಕಾಮಗಾರಿ ನಡೆಯಲಿದೆ. ಇದರಿಂದ ಯಕ್ಕುಂಡಿ, ಸಂಗಾಪುರ, ಶೇಗುಣಸಿ ಹಾಗೂ ಕಾಖಂಡಕಿ ಜನರಿಗೆ ಹಾಗೂ ಸುಕ್ಷೇತ್ರ ಹರಳಯ್ಯನಗುಂಡಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗಲಿದೆ. ಅಷ್ಟೇ ಅಲ್ಲ, ಈ ಕಾಮಗಾರಿ ಪೂರ್ಣಗೊಂಡ ನಂತರ ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ರಸ್ತೆ ಸಂಚಾರ ಮತ್ತಷ್ಡು ಸುಲಭವಾಗಲಿದೆ ಎಂದು ಅವರು ತಿಳಿಸಿದರು. ಬಬಲೇಶ್ವರ ಮತಕ್ಷೇತ್ರದಲ್ಲಿ ಕೆರೆ ತುಂಬಿಸುವ ಯೋಜನೆಗೆ ಪೂರಕವಾಗಿ ಈಗ ಹಳ್ಳಗಳನ್ನು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಮತಕ್ಷೇತ್ರದಲ್ಲಿ, ನೀರಾವರಿಗೆ ಪೂರಕವಾಗಿ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಒತ್ತು ನೀಡಲಾಗಿದೆ.
ಶೈಕ್ಷಣಿಗ ಗುಣಮಟ್ಟ ಸುಧಾರಣೆ, ರಸ್ತೆಗಳ ಅಭಿವೃದ್ಧಿ, ಹೈನುಗಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಲು ನಾನಾ ಯೋಜನೆಗಳಿವೆ ಚಾಲನೆ ನೀಡಲಾಗಿದೆ. ರೈತರು ಖುಷಿಯಾಗಿದ್ದರೆ ನಾಡು ಸಮೃದ್ಧಿಯಿಂದ ಕೂಡಿರುತ್ತದೆ ಎಂಬ ತತ್ವದಡಿ ಕಾಯಕ ನಿರತರಾಗಿರುವುದಾಗಿ ಸಚಿವ ಎಂ. ಬಿ. ಪಾಟೀಲ ಹೇಳಿದರು. ಮುಖಂಡ ಚನ್ನಪ್ಪ ಕೊಪ್ಪದ ಮಾತನಾಡಿ, ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿದ್ದರಿಂದ ಈ ಭಾಗದ ಜನರು ಸುತ್ತುಬಳಸಿ ಬೇರೆ ಮಾರ್ಗಗಳ ಮೂಲ ಸಂಚಿರಿಸುವುದು ತಪ್ಪಲಿದೆ. ಸಮಯ ಉಳಿತಾಯದ ಜೊತೆ ವಾಹನಗಳ ತೈಲ ವೆಚ್ಚವೂ ಕಡಿಮೆಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಕ್ಕುಂಡಿಯ ವೀರೇಶ್ವರ ಶರಣರು, ಮುಖಂಡರಾದ ವಿ. ಎಸ್. ಪಾಟೀಲ, ಮಲ್ಲು ದಳವಾಯಿ, ರಮೇಶ ದೇಸಾಯಿ, ಬಾಬುಗೌಡ ಪಾಟೀಲ, ನಾಗರಾಜ ಕುಲಕರ್ಣಿ, ಪ್ರಭುಗೌಡ ಪಾಟೀಲ, ಶೇಖಪ್ಪ ಕೊಪ್ಪದ, ಮಲ್ಲಪ್ಪ ಕೆಂಪವಾಡ, ಮಹೇಶ ಮಾಳಿ, ರಫೀಕ್ ಸೋನಾರ, ಜಾಫರ್ ನಿಡೋಣಿ, ವಿದ್ಯಾ ರಾಣಿ ತುಂಗಳ, ದಾನಮ್ಮ ಜಿರಲಿ, ಕಾವ್ಯ ಪಡತಾರೆ, ರಂಗಪ್ಪ ಪೂಜಾರಿ, ಮಾದೇವಪ್ಪ ಮಂಡೆಗಾರ, ಬುಡ್ಡಸಾಬ್ ಜಮಾದಾರ, ಇಸಾಕಸಾಬ್ ಜಮಾದಾರ, ಮುತ್ತಪ್ಪ ಪೂಜಾರಿ, ರಾಜಸಾಬ ಜಮಾದಾರ, ಪರಶುರಾಮ ಪಡಗಾರ, ರಾಜೇಸಾಬ್ಲ ಗಲಗಲಿ, ಅಬ್ಬಾ ಸಲಿ ಕಮತೆ, ಸವಿತಾ ವಗ್ಗರ,ಸುರೇಶ ಪೂಜಾರಿ, ರಮೇಶ ತಂಬಾಕೆ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಉಪಸ್ಥಿತರಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 