ಸಾವಳಗಿ ಜಗದ್ಗುರು ಶಿವಲಿಂಗೇಶ್ವರ ಜಾತ್ರಾ ನಿಮಿತ್ತ ವಿವಿಧ ಕಾರ್ಯಕ್ರಮ

ಸಾವಳಗಿ ಜಗದ್ಗುರು ಶಿವಲಿಂಗೇಶ್ವರ ಜಾತ್ರಾ ನಿಮಿತ್ತ ವಿವಿಧ ಕಾರ್ಯಕ್ರಮ Various programs on the occasion of the Savalagi Jagadguru Shivalingeshwara Jatra

ಗೋಕಾಕ 06:  ಸಿಂಹಾಸನಾಧೀಶ, ಸಾವಳಗಿ ಸಿದ್ಧ ಸಂಸ್ಥಾನ ಪೀಠದ ಶೂನ್ಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮಿಗಳ ಉಪಸ್ಥಿತಿ ಯಲ್ಲಿ ಏ. 4ರಿಂದ ಜಾತ್ರಾ  ಮಹೋತ್ಸವ ಪ್ರಾರಂಭಗೊಂಡಿದ್ದು, 13 ರವರೆಗೆ ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯ ಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಜಾತ್ರಾ ಮಹೋತ್ಸವದ ಮುಖ್ಯ ಸಂಚಾಲಕ ಹಾಗೂ ನಿಡಸೋಸಿ ಹಿರಾಶುಗರ್ ತಾಂತ್ರಿಕ ಮಹಾವಿದ್ಯಾಲ ಯದ ಪ್ರಾಚಾರ್ಯ ಡಾ. ಸಣ್ಣಪ್ಪ ಕಮತೆ ತಿಳಿಸಿದ್ದಾರೆ."ಏ.4 ಮತ್ತು 5 ರಂದು ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರೆತಿದೆ. ಚಿಪ್ಪಲಕಟ್ಟಿ ಸಾಲಹಳ್ಳಿ ಬೃಹನ್ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಂದ ಲಿಂಗದೀಕ್ಷೆ ಕಾರ್ಯಕ್ರಮ ಹಾಗೂ ತಾವರೆಗೆರೆಯ ಪಂ. ಶಿವರಾಜ ಶಾಸ್ತ್ರಿಗಳಿಂದ ಪ್ರವಚನ ಕಾರ್ಯಕ್ರಮಗಳು ನೆರವೇರಿವೆ,” ಎಂದು ಅವರು ತಿಳಿಸಿದರು.

ಏ. 6ರಂದು ಆಧ್ಯಾತ್ಮಿಕ ಚಿಂತಕ ಮಂಜುನಾಥ ನೇಗಿನಹಾಳ ಅವರು ’ವಚನದಲ್ಲಿ ಆರೋಗ್ಯ ಸಿದ್ಧಾಂತ’ ಕುರಿತು ಉಪನ್ಯಾಸ ನೀಡಲಿದ್ದಾರೆ. ಏ. 7ರಂದು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕುಲಪತಿ ಡಾ. ಸಿ.ಎಂ. ತ್ಯಾಗರಾಜ, ಅವರು ’ಸಾಮಾಜಿಕ ಸಾಮರಸ್ಯ ಹಾಗೂ ಮಠಗಳ ಮಾತನಾಡಲಿದ್ದು, ಯುಪಿಎಸ್ಸಿ ಟಾಪರ್ ಕಿರಣ ಕಮತೆ ’ಸಾಧಕರ ನುಡಿ’ ಪಾತ್ರ’ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ,” ಎಂದರು."ಏ.10 ರಂದು ಚಿಕ್ಕೋಡಿಯ ವೈದ್ಯ ರಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಆಲೂರ ಅವರು ’ವಚನದಲ್ಲಿ ವೈಚಾರಿಕತೆ’, ಬೆಲ್ಲದ ಬಾಗೇವಾಡಿಯ ಪ್ರಗತಿಪರ ರೈತ ಸುಧೀರ ಕತ್ತಿ ’ಕಬ್ಬು ಬೆಳೆಯಲ್ಲಿ ಆಧುನಿಕ ಕ್ರಮಗಳು’ ಕುರಿತು ಉಪನ್ಯಾಸ ಬೇಸಾಯ ನೀಡಲಿದ್ದಾರೆ.  

9 ರಂದು ಹಾರೂಗೇರಿಯ ವಿಶ್ರಾಂತ ಪ್ರಾಂಶುಪಾಲ ಡಾ. ವಿ.ಎಸ್‌. ಮಾಳಿ ’ಭಾರತೀಯ ಭಾವೈಕ್ಯತೆ’ ವಿಷಯವಾಗಿ ಮಾತನಾಡಲಿದ್ದಾರೆ,” ಎಂದರು.ಡಾ. ದಯಾನಂದ ನೂಲಿ ’ಇಷ್ಟಲಿಂಗದ ವೈಜ್ಞಾನಿಕ ಪರಿಕಲ್ಪನೆ’ ಕುರಿತು, 11ರಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ವೀರೇಶ ಪಾಟೀಲ ’ವಚನಗಳಲ್ಲಿ ಜೀವನಮೌಲ್ಯ’ ಕುರಿತು ಹಾಗೂ 12ರಂದು ಕಾಗವಾಡದ ಎಂದರು. "ಜಾತ್ರೆಯ ಸಮಾರೋಪದ ಸಾಹಿತಿ ಡಾ. ಎಂ.ಬಿ. ಹೂಗಾರ್ ’ವರ್ತಮಾನಕ್ಕೆ ಶಿವಶರಣರ ವಚನಗಳು’ ವಿಷಯವಾಗಿ ಮಾತನಾಡಲಿದ್ದಾರೆ,” ಅಂಗವಾಗಿ ಏ.13 ರಂದು ಅಡ್ಡಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದ್ದು, ನಾನಾ ಕ್ಷೇತ್ರಗಳ ಸಾಧಕರಿಗೆ ಸತ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗಾವಿಯ ರೋಹಿಣಿ ಬಂಗಾರಿ ಹಾಗೂ ಯಶೋದಾ ಅಂಕಲಿ ನಿರೂಪಿಸಲಿದ್ದಾರೆ,” ಎಂದು ಅವರು ತಿಳಿಸಿದರು.