ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ; ಅಭಿವೃದ್ಧಿ ಕಾಮಗಾರಿಗೆ ಅನುದಾನದ ಕೊರೆತೆ ಇಲ್ಲಾ: ರಾಜು ಕಾಗೆ
ಕಾಗವಾಡ, 26; ಕೇತ್ರದ ಅಭಿವೃದ್ಧಿಗೆ ಅನುದಾನದ ಕೊರತೆ ಇಲ್ಲಾ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆಯೆಂದು ಶಾಸಕ ರಾಜು ಕಾಗೆ ತಿಳಿಸಿದ್ದಾರೆ. ಅವರು ಬುಧವಾರ ದಿ. 26 ರಂದು ಕಾಗವಾಡ ಮತಕ್ಷೇತ್ರದಲ್ಲಿ ಒಟ್ಟು 15.70 ಕೋಟಿ ಅನುದಾನದಲ್ಲಿ ಜುಗೂಳ-ಶಿರುಗುಪ್ಪಿ ರಸ್ತೆ, ಕಾಗವಾಡ-ಗಣೇಶವಾಡಿ, ಮಂಗಸೂಳಿ-ಶಿಂದೆವಾಡಿ ರಸ್ತೆ ಹಾಗೂ ಐನಾಪೂರ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ ಎಂದು ವಿರೋಧ ಪಕ್ಷದವರ ಆರೋಪ ಸತ್ಯಕ್ಕೆ ದೂರವಾಗಿದ್ದು, ಈ ಆರೋಪದಲ್ಲಿ ಯಾವುದೇ ಹುರಳಿಲ್ಲಾ. ಈಗಾಗಲೇ ಮತಕ್ಷೇತ್ರದಲ್ಲಿ ಸಾಕಷ್ಟು ಅನುದಾನ ತಂದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಕಾಗವಾಟ ಪಟ್ಟಣದಲ್ಲಿ ಪ್ರಸಾಸೌಧ ನಿರ್ಮಾಣ, ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಸ್ಥಳ ನಿಗಧಿ, ಕ್ಷೇತ್ರದ 11 ಕೆರೆ ತುಂಬುವ ಯೋಜನೆಗೆ ಚಾಲನೆ, ಬಸವೇಶ್ವರ ಏತ ನೀರಾವರಿ ಯೋಜನೆ ಮುಕ್ತಾಯದ ಹಂತದಲ್ಲಿದ್ದು, ಅನುದಾನದ ಯಾವುದೇ ಕೊರತೆ ಇಲ್ಲ ಎಂದರು. ಜೊತೆಗೆ ಗುತ್ತಿಗೆದಾರರು ಗಣಮಟ್ಟದ ಕಾಮಗಾರಿ ಮಾಡಬೇಕು ಎಂದು ಖಡಕ್ಕಾಗಿ ಸೂಚನೆ ನೀಡಿದರು. ಈ ಸಮಯದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಜಯಾನಂದ ಹಿರೇಮಠ, ಮಲ್ಲಿಕಾರ್ಜುನ ಮಗದುಮ್ಮ, ಗುತ್ತಿಗೆದಾರರಾದ ಎಂ.ಎಸ್. ಬೆನ್ನಳ್ಳಿ, ಪ್ರವೀಣ ಪಾಟೀಲ, ಅಮಸಿದ್ಧ ಮಂಗರೂಳ, ಶಿವಪುತ್ರ ನಾಯಿಕ, ತಮ್ಮಣ್ಣ ಭಜಂತ್ರಿ, ಶಂಕರ ಮಾದನ್ನವರ ಮತ್ತು ಮುಖಂಡರಾದ ಅಣ್ಣಾಸಾಬ ಪಾಟೀಲ, ಕಾಕಾಸಾಬ ಪಾಟೀಲ, ಉಮೇಶ ಪಾಟೀಲ, ಅನೀಲ ಕಡೋಲೆ, ವಿಜಯ ಅಕಿವಾಟೆ, ಸೌರಭ ಪಾಟೀಲ, ಕಾಕಾ ಪಾಟೀಲ, ರಮೇಶ ಚೌಗುಲಾ, ಸಂಜಯ ತಳವಳಕರ ಸೇರಿದಂತೆ ಜುಗೂಳ, ಶಿರಗುಪ್ಪಿ, ಕಾಗವಾಡ, ಮಂಗಸೂಳಿ ಮತ್ತು ಐನಾಪುರ ಪಟ್ಟಣದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು