ವರದಾ ಯಾತ ನೀರಾವರಿ ಸಹಕಾರಿ ಸಂಘದಿಂದ ರೈತರಿಗೆ ಅನುಕೂಲ: ಮಹೇಶಾನಂದ ಶ್ರೀ

ವರದಾ ಯಾತ ನೀರಾವರಿ ಸಹಕಾರಿ ಸಂಘದಿಂದ ರೈತರಿಗೆ ಅನುಕೂಲ: ಮಹೇಶಾನಂದ ಶ್ರೀ Varada Yata Irrigation Cooperative Society Benefits Farmers: Maheshananda Shri

 ಕಾಗವಾಡ, ಜು.15: ಯುವ ಮುಖಂಡ ರಮೇಶ್ ಚೌಗುಲೆ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ವರದಾ ಯಾತ ನೀರಾವರಿ ಸಹಕಾರಿ ಸಂಘ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವ ಮೂಲಕ ಕೃಷಿ ಉತ್ಪಾದನೆ ಹೆಚ್ಚಿಸಲು ಮಹತ್ವದ ಪಾತ್ರ ವಹಿಸಲಿದೆ ಎಂದು ಹಂಚಿನಾಳ ಪಪೂ ಮಹೇಶಾನಂದ ಶ್ರೀ ಹೇಳಿದರು.  

ಬುಧವಾರ ಕಾಗವಾಡ ಮತ್ತು ಶೇಡಬಾಳ ಭಾಗದ ರೈತರ ಸಹಯೋಗದೊಂದಿಗೆ ಸ್ಥಾಪಿತವಾದ ಸಂಘದ ನೀರಾವರಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.  "ಮನುಷ್ಯ ಎಷ್ಟು ವರ್ಷ ಬದುಕಿದ್ದಾನೆ ಎನ್ನುವುದಕ್ಕಿಂತ, ಸಮಾಜಕ್ಕೆ ಎಷ್ಟು ಉಪಯೋಗವಾಗುವ ಕೆಲಸಗಳನ್ನು ಮಾಡಿದ್ದಾನೆ ಎಂಬುದೇ ಮುಖ್ಯ. ಯುವ ಮುಖಂಡ ರಮೇಶ್ ಚೌಗುಲೆ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ರೈತರಿಗೆ ಅನುಕೂಲವಾಗುವ ಈ ಯೋಜನೆ ಆರಂಭಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ" ಎಂದು ಹೇಳಿದರು.  

ಸಹಕಾರ ತತ್ವದಡಿ ಸಣ್ಣ ಮತ್ತು ಅತಿಸಣ್ಣ ರೈತರನ್ನು ಒಗ್ಗೂಡಿಸಿ, ನೀರಾವರಿ ಸೌಲಭ್ಯ ಕಲ್ಪಿಸುವ ಮೂಲಕ ಕೃಷಿ ಅಭಿವೃದ್ಧಿಗೆ ಈ ಯೋಜನೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.  ಈ ಸಂದರ್ಭದಲ್ಲಿ ಶಿವಗೌಡ ಕಾಗೆ, ಅರುಣ ಫರಾಂಡೆ, ವೀರೇಂದ್ರ ಜಾಧವ, ಜ್ಯೋತಿಕುಮಾರ ಪಾಟೀಲ, ಅಜಿತ್ ಚೌಗುಲೆ, ರವಿ ಪೂಜಾರಿ, ಉತ್ಕರ್ಷ ಪಾಟೀಲ, ಚಿದಾನಂದ ಅವಟಿ, ಪ್ರಕಾಶ ಪಾಟೀಲ, ಸುಭಾಷ್ ಕಟಾರೆ ಸೇರಿದಂತೆ ಹಲವರು ಹಾಗೂ ಕಾಗವಾಡ ಮತ್ತು ಶೇಡಬಾಳ ಭಾಗದ ರೈತರು ಉಪಸ್ಥಿತರಿದ್ದರು.