ವಣ್ಣೂರ ಕೃಷಿ ಪತ್ತಿನ ಸಂಘಕ್ಕೆ ಚುನಾವಣೆ: ದೊಡ್ಡಗೌಡರ ಬೆಂಬಲಿತ ಅಭ್ಯರ್ಥಿಗಳು ಜಯ
ನೇಸರಗಿ 23: ಸಮೀಪದ ವಣ್ಣೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಗಳಾಗಿದ್ದಾರೆ.
ಬಾಳಾಸಾಹೇಬ ದೇಸಾಯಿ, ಈರ್ಪ ಶೆಬನ್ನವರ, ನಾಗಪ್ಪ ಬಶೆಟ್ಟಿ, ಬಾಳಪ್ಪ ಅಂಗಡಿ, ಸನ್ನಿಂಗಪ್ಪ ಅಡವೇರ, ಗಂಗಪ್ಪ ಆಡಿನವರ, ನಿಂಗಪ್ಪ ಇಂಚಲ, ಚನ್ನಪ್ಪ ಮ್ಯಾಗೇರಿ, ಸದೆಪ್ಪ ಕಿಲಾರಿ, ಲಕ್ಷ್ಮವ್ವ ಪಾಟೀಲ, ಮಹಾದೇವಿ ಹುಡೇದ, ಬಾಬಾಸಾಹೇಬ ದೇಸಾಯಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ರಾಘವೇಂದ್ರ ಪಾಟೀಲ ಕಾರ್ಯ ನಿರ್ವಹಿಸಿದರು. ಮಲ್ಲಯ್ಯ ಯರಗಟ್ಟಿ ಮಠ, ಬಸವರಾಜ ಅಂಗಡಿ, ನಾಗಪ್ಪ ಬಶೆಟ್ಟಿ, ಹಣಮಂತ ದೊಡ್ಡನ್ನವರ, ಬಸಲಿಂಗಪ್ಪ ಬಶೆಟ್ಟಿ, ರಾಮಪ್ಪ ಕೊಳವಿ, ಉಮೇಶ ಕಡಬಿ, ಬಾಬು ಶೆಬನ್ನವರ, ಆನಂದ ಕಿರಗಿ, ಬಸವರಾಜ ಅರವಳ್ಳಿ, ಇನ್ನಿತರರು ಇದ್ದರು.