ಸಂಸ್ಕೃತ ಭಾಷೆಯ ಮೊದಲ ಕಾವ್ಯದ ರಚನೆಯಿಂದಾಗಿ ವಾಲ್ಮೀಕಿ ಅವರನ್ನು ಅದಿಕವಿಯಂದು ಕರೆಯುತ್ತಾರೆ

ಹಾವೇರಿ 17: ಮಹರ್ಷಿ ವಾಲ್ಮೀಕಿ ಅವರು ಸಂಸ್ಕೃತ ಭಾಷೆಯಲ್ಲಿ ಬರೆದ ರಾಮಾಯಣ ಕಾವ್ಯವು ಅತ್ಯಂತ ಹಳೆಯದಾಗಿದ್ದು, ಸಂಸ್ಕೃತ ಭಾಷೆಯ ಮೊದಲ ಕಾವ್ಯದ ರಚನೆಯಿಂದಾಗಿ ವಾಲ್ಮೀಕಿ ಅವರನ್ನು ಅದಿಕವಿಯಂದು ಕರೆಯುತ್ತಾರೆ.

ಅವರ ಬದುಕಿನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಸ್ವಾತಂತ್ರ್ಯ ಯೋಧ ವೀರ​‍್ಪ ಸಣ್ಣಂಗಿ ಅವರ ಮೊಮ್ಮಗ ಬಸವರಾಜ ಸಣ್ಣಂಗಿ ಹೇಳಿದರು. ತಾಲ್ಲೂಕಿನ ಕರ್ಜಗಿ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ದೇಶಾದ್ಯಂತ ಸರಕಾರಿ ಶಾಲಾ ಕಾಲೇಜುಗಳಲ್ಲಿ,ಕಛೇರಿಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡುವುದಾಗಿದೆ. ಈ ಮೂಲಕ ಅವರ ಬಗ್ಗೆ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದರು.ಎಸ್‌.ಡಿ.ಎಂ.ಸಿ ಸದಸ್ಯರಾದ ಜಕಣಾಚಾರಿ ಬಡಿಗೇರ ಮಾತನಾಡಿ ಭಾರತದ ಉದ್ದಗಲಕ್ಕೂ ವಾಲ್ಮೀಕಿ ಅವರ ಆಚರಣೆ ಕೇವಲ ಆಚರಣೆ ಆಗದೇ ಅವರ ವಿಚಾರಗಳ ಚಿಂತನ ಮಂಥನ ನಡೆಯಬೇಕು.

ರಾಮಾಯಣದ ಕಾವ್ಯದ ಕುರಿತು ತಾರ್ಕಿಕ ವಿಶ್ಲೇಷಣೆ ಆಗಬೇಕೆಂದರು. ಶಿಕ್ಷಕಿ ಎಸ್‌.ಎಂ. ಹೆಬ್ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿರೆ, ಮುಖ್ಯ ಅತಿಥಿಗಳಾಗಿ ಜಯಶ್ರೀ ಕೊರಗರ, ಶಿವಲೀಲಾ ಅಗಡಿ, ಸುಮಂಗಲಾ ಅಜ್ಜಿ ಉಪಸ್ಥಿತರಿದ್ದರು.ಸ್ವಾಗತವನ್ನು ಕುಮಾರಿ ನೇಹಾ ಮಾಡಿದರೆ,ಶಿಕ್ಷಕರಾದ ಜಿ.ಎಂ.ಓಂಕಾರಣ್ಣನವರ  ಅವರು ಕಾರ್ಯಕ್ರಮದ ನಿರೂಪಣೆ ಮಾಡಿ,ವಂದಿಸಿದರು.