ರಮೇಶ ಕತ್ತಿ ಬಂಧನಕ್ಕೆ ಆಗ್ರಹಿಸಿ ಬೀದಿಗಿಳಿದ ವಾಲ್ಮೀಕಿ ಸಮುದಾಯ

 ರಮೇಶ ಕತ್ತಿ ಬಂಧನಕ್ಕೆ ಆಗ್ರಹಿಸಿ ಬೀದಿಗಿಳಿದ ವಾಲ್ಮೀಕಿ ಸಮುದಾಯ Valmiki community takes to the streets demanding the arrest of Ramesh Katti

ಲೋಕದರ್ಶನ ವರದಿ 

ರಮೇಶ ಕತ್ತಿ ಬಂಧನಕ್ಕೆ ಆಗ್ರಹಿಸಿ ಬೀದಿಗಿಳಿದ ವಾಲ್ಮೀಕಿ ಸಮುದಾಯ 

ಯಮಕನಮರಡಿ 21: ರಮೇಶ ಕತ್ತಿ ವಾಲ್ಮೀಕಿ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ಸೋಮವಾರ ದಿ 20 ರಂದು ಯಮಕನಮರಡಿಯಲ್ಲಿ ಪ್ರತಿಭಟನೆ ನಡೆಸಿ ಅವರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸುವಂತೆ ಮಹರ್ಷಿ ವಾಲ್ಮೀಕಿ ಸಮಾಜದವರು ಒತ್ತಾಯಿಸಿದರು.  

  ದಾದಬಾನಹಟ್ಟಿ ಬಳಿ ಜಮಾಯಿಸಿದ ವಾಲ್ಮೀಕಿ ಸಮಾಜದ ಬಾಂಧವರು ರಮೇಶ ಕತ್ತಿಯವರಿಗೆ ಧಿಕ್ಕಾರ ಕೂಗುತ್ತಾ ಯಮಕನಮರಡಿ ಪೊಲೀಸ ಠಾಣೆಗೆ ಹೋಗಿ ರಮೇಶ ಕತ್ತಿ ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವಂತೆ ಮನವಿ ಮಾಡಿಕೊಂಡರು.  

  ಬೆಳಗಾವಿ ಜಿಲ್ಲಾ ಎಸ್‌ಸಿ, ಎಸ್‌ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಕರೆಪ್ಪ ಗುಡೇನವರ ಮಾತನಾಡಿ ರಮೇಶ ಕತ್ತಿ ಎಂಬುವವರು ಮತ್ತು ಅವರ ಸಂಗಡಿಗರು ಜಾತಿ ಸೂಚಕ ಪದ ಬಳಸಿ ನಿಂದನೆ ಮಾಡಿದ್ದಲ್ಲದೇ ಕೇಕೆ ನಕ್ಕು ಎಸ್ ಟಿ ಸಮುದಾಯದ ಜನರ ಅಸ್ಮಿತೆಗೆ ಧಕ್ಕೆ ತಂದು ಒಂದು ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ತಂದಿರುತ್ತಾರೆ. ಅವರ ಮೇಲೆ ಜಾತಿ ನಿಂದನೇ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು. ನಂತರ ಎಲ್ಲರೂ ಕೂಡಿಕೊಂಡು ರಾಷ್ಟ್ರೀಯ ಹೆದ್ದಾರಿ ನಂಬರ 4ಕ್ಕೆ ಹೋಗಿ ವಾಹನಗಳನ್ನು ತಡೆದು ಪ್ರತಿಭಟಿಸಿ ಟೈರ್ ಸುಟ್ಟು ಹಾಕಿದರು. ಯಮಕನಮರಡಿ ಸಿಪಿಐ ಜಾವಿದ ಮುಶಾಪುರಿ ಅವರಿಗೆ ಮನವಿ ಅರ​‍್ಿಸಿದರು.  

 ಯುವ ಧುರೀಣ ಕಿರಣಸಿಂಗ ರಜಪೂತ, ದೇವಪ್ಪ ಹುನ್ನೂರಿ, ಬಸವರಾಜ ನಾಯಕ, ಲಗಮಣ್ಣ ಪನಗುದ್ದಿ, ರಾಮಚಂದ್ರ ನಾಯಕ, ವಿಠ್ಠಲ ಕಡಗಾವಿ, ನಾಗರಾಜ ದುಂದುರ, ಪ್ರದೀಪ ಮಾಂಗ, ಆನಂದ ಪಾಟೀಲ ಮತ್ತು ವಿವಿಧ ದಲಿತಪರ ಹಾಗೂ ಮಹರ್ಷಿ ವಾಲ್ಮೀಕಿ ಯುವ ಸಂಘಟನೆಗಳ ಒಕ್ಕೂಟದ ಮುಖಂಡರುಗಳು ಹಾಗೂ ಜಿಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯರು ವಾಲ್ಮೀಕಿ ಸಮಾಜದ ಬಾಂಧವರು ಇದ್ದರು.