ರಾಜಣ್ಣ, ನಾಗೇಂದ್ರರಿಗೆ ಮತ್ತೆ ಸಚಿವ ಸ್ಥಾನ ನೀಡಲುವಾಲ್ಮೀಕಿ ಸಮಾಜದ ಮುಖಂಡರ ಆಗ್ರಹ
Valmiki Samaj leaders demand that Rajanna and Nagendra be given ministerial positions again
ಬಳ್ಳಾರಿ 14: ರಂದು ನಗರದ ನೇರ, ನಿಷ್ಟುರ, ಕಳಂಕ ರಹಿತ ರಾಜಕಾರಣಿ ಕೆ.ಎನ್.ರಾಜಣ್ಣ ಮತ್ತು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ಕಲ್ಪಿಸಿಕೊಡಬೇಕೆಂದು ಜಿಲ್ಲೆಯ ವಾಕ್ಮೀಕಿ ಸಮಾಜದ ಮುಖಂಡರು ಕಾಂಗ್ರೆಸ್ ಹೈ ಕಮಾಂಡಿಗೆ ಒತ್ತಾಯಿಸಿದ್ದಾರೆ.
ಜೆಡಿಎಸ್ ಜಿಲ್ಲಾಧ್ಯಕ್ಷ, ವಾಲ್ಮೀಕಿ ಸಮಾಜದ ಮುಖಂಡ ಮೀನಳ್ಳಿ ತಾಯಣ್ಣ ಮೊದಲಾದವರು ನಿನ್ನೆ ಸಂಜೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ. ರಾಜಣ್ಣಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದು ಖಂಡನೀಯ, ಅದೇರೀತಿ ಸುಳ್ಳು ಹಗರಣಗಳನ್ನು ಹೊರೆಸಿ ಒತ್ತಾಯದ ಮೂಲಕ ರಾಜೀನಾಮೆಯನ್ನು ಪಡೆದ ಬಿ.ನಾಗೇಂದ್ರ ಇವರಿಬ್ಬರಿಗೂ ಕೂಡಲೇ ಯಾವುದೇ ನೆಪ ಹೇಳದೇ ಮತ್ತೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿಕುಮಾರ್ ಹಾಗೂ ಹೈಕಮಾಂಡ್ ನಿರ್ಲಕ್ಷ್ಯ ವಹಿಸಿದರೆ ರಾಜ್ಯಾದ್ಯಂತ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.ರಾಜಣ್ಣ ಅವರನ್ನ ವಜಾ ಮಾಡಿ ವಾಲ್ಮೀಕಿ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ. ಮಾಜಿ ಸಚಿವ ಬಿ.ನಾಗೇಂದ್ರ ಅವರು ಏನೂ ತಪ್ಪು ಮಾಡದಿದ್ದರೂ ಅವರನ್ನು ಒತ್ತಾಯದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಪಡೆದರು. 178 ಕೋಟಿ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣ ಅಂದ್ರೆ, ಹಣಕಾಸು ಇಲಾಖೆ ಸಿ.ಎಂ.ಸಿದ್ದರಾಮಯ್ಯ ಅವರ ಬಳಿಯೇ ಇದೆ, ಇವರ ಗಮನಕ್ಕೆ ಬಾರದೇ ಎಲ್ಲವನ್ನೂ ಬಿ.ನಾಗೇಂದ್ರ ಅವರ ಮೇಲೆ ಹೊರೆಸಿ ಅವರಿಂದಲೂ ರಾಜ್ಯ ಕಾಂಗ್ರೆಸ್ ಸರ್ಕಾರದ ಸಿ.ಎಂ.ಸಿದ್ದರಾಮಯ್ಯ ಅವರು ಒತ್ತಾಯದ ಮೂಲಕ ರಾಜೀನಾಮೆ ಪಡೆದರು, ಇದು ಅತ್ಯಂತ ಖಂಡನೀಯ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಇದೆ ರೀತಿ ಮಾಡಿ ರಾಜಕೀಯ ಭವಿಷ್ಯ ಹಾಳು ಮಾಡಿದ್ರು, ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಡಿಸಿಎಂ ಮಾಡಲಾಗುವುದು ಎಂದು ಈ ಹಿಂದೆ ಬಿಜೆಪಿ ಅವರು ಭರವಸೆ ನೀಡಿ, ಪುಕ್ಕಟೆ ಪ್ರಚಾರ ಪಡೆದರು.ಎಲ್ಲ ಪಕ್ಷಗಳೂ ನಮ್ಮ ವಾಲ್ಮೀಕಿ ಸಮಾಜದ ನಾಯಕರನ್ನು ಪರೋಕ್ಷವಾಗಿ ಬೆಳೆಯಲು ಬಿಡುತ್ತಿಲ್ಲ, ಇದೆ ರೀತಿ ಮುಂದುವರೆದರೆ ಸಮಾಜ ಇಡಿ ರಾಜ್ಯಾದ್ಯಂತ ಸಿಡಿದೇಳಲಿದೆ ಎಂದು ಎಚ್ಚರಿಸಿದರು. ಯುವ ಮುಖಂಡ ಜೋಳದರಾಶಿ ತಿಮ್ಮಪ್ಪ, ನ್ಯಾಯವಾದಿ ಜಯರಾಂ, ಪಾಲಿಕೆ ಸದಸ್ಯ ಕೆ.ಹನುಮಂತಪ್ಪ ಮೊದಲಾದವರು ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 