ವಾಜಪೇಯಿ ಅವರ ಜನ್ಮದಿನ ಆಚರಣೆ

Vajpayee's birthday celebration

ವಾಜಪೇಯಿ ಅವರ ಜನ್ಮದಿನ ಆಚರಣೆ

ಬ್ಯಾಡಗಿ 25: ಜನಮಾನಸದಲ್ಲಿ ನೆನಪಾಗಿರುವ ದೇಶಕಂಡ ಧೀಮಂತ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಬಿಜೆಪಿ ಸುಶಾಸನ ದಿನವನ್ನಾಗಿ ಆಚರಿಸುತ್ತಿದೆ ಎಂದು ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ  ಹೇಳಿದರು. 

ಅವರು ಪಟ್ಟಣದ ಬಿಜೆಪಿ ತಾಲೂಕಾ ಕಚೇರಿಯಲ್ಲಿ ನಡೆದ ವಾಜಪೇಯಿ ಅವರ 100 ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ  ಮಾತನಾಡಿದರು.ಜನಸಂಘದ ಕಾಲದಿಂದಲೂ ರಾಜಕೀಯದಲ್ಲಿದ್ದು, ಸಾರ್ವಜನಿಕವಾಗಿ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲದೇ ಸೇವೆ ಸಲ್ಲಿಸಿದ ಕೀರ್ತಿ ಅಟಲ್ ಬಿಹಾರಿ ವಾಜಪೇಯಿ ಅವರದ್ದಾಗಿದೆ ಎಂದರು. 

ತಾಲೂಕಾ ಬಿಜೆಪಿ ಅಧ್ಯಕ್ಷ ಶಿವಯೋಗಿ ಶಿರೂರ ಮಾತನಾಡಿ ಬಿಜೆಪಿ ಮೊದಲ ಹೀನಾಯವಾಗಿ ಪರಾಭವ ಹೊಂದಿದಾಗ  ಪಲಾಯನಂ ಎಂಬ ಧ್ಯೆಯ ವಾಕ್ಯದೊಂದಿಗೆ ಪಕ್ಷ ಕಟ್ಟಿ ಅಧಿಕಾರಕ್ಕೆ ತಂದು ಪ್ರಧಾನಿಯಾಗಿ ಅತ್ಯುತ್ತಮ ಆಡಳಿತ ನೀಡಿದರು. ಅತೀ ಸರಳ ಸಜ್ಜನ ರಾಜಕಾರಣಿಯಾಗಿದ್ದ ವಾಜಪೇಯಿಯವರು ಪತ್ರಕರ್ತರು, ಕವಿಗಳೂ ಆಗಿದ್ದರು ಎಂದರು.  

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಹಿರೇಮಠ, ಸುರೇಶ್ ಯತ್ನಳ್ಳಿ, ಚಂದ್ರಣ್ಣ ಶೆಟ್ಟರ,  ಸರೋಜಾ ಉಳ್ಳಾಗಡ್ಡಿ, ವಿಷ್ಣು ಬೆನ್ನೂರ, ಸುರೇಶ್ ಉದ್ಯೋಗಣ್ಣನವರ ಸೇರಿದಂತೆ ಇತರರಿದ್ದರು.