ಮೆಡಿಕಲ್ ಕಾಲೇಜು ಆಸ್ಪತ್ರೆ ಆರಂಭಿಸಿ ವೈದ್ಯ ಬಸವರಾಜ ಕ್ಯಾವಟರ್ ಆಗ್ರಹ ಇಎಸ್ ಐ ಆಸ್ಪತ್ರೆಗೆ ಬಲ ನೀಡಿ

ಮೆಡಿಕಲ್ ಕಾಲೇಜು ಆಸ್ಪತ್ರೆ ಆರಂಭಿಸಿ ವೈದ್ಯ ಬಸವರಾಜ ಕ್ಯಾವಟರ್ ಆಗ್ರಹ ಇಎಸ್ ಐ ಆಸ್ಪತ್ರೆಗೆ ಬಲ ನೀಡಿ  Vaidya Basavaraj Cavatar demands to start a medical college hospital, ESI gives strength to the hosp

ಮೆಡಿಕಲ್ ಕಾಲೇಜು ಆಸ್ಪತ್ರೆ ಆರಂಭಿಸಿ ವೈದ್ಯ ಬಸವರಾಜ ಕ್ಯಾವಟರ್ ಆಗ್ರಹ ಇಎಸ್ ಐ ಆಸ್ಪತ್ರೆಗೆ ಬಲ ನೀಡಿ   

ಕೊಪ್ಪಳ 05:  ಜಿಲ್ಲೆಗೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ರಾಜ್ಯ ಸರಕಾರ, ಆಡಳಿತಾತ್ಮಕ ಅನುಮೋದನೆ  ನೀಡಿರುವುದು ಸ್ವಾಗತಾರ್ಹ. ಇದರ ಜತೆಗೆ ಮೊದಲು ಕೊಪ್ಪಳ ಮೆಡಿಕಲ್ ಕಾಲೇಜಿನ ಆಸ್ಪತ್ರೆ ಉದ್ಘಾಟಿಸಿ, ಜನರಿಗೆ ಅನುಕೂಲ ಕಲ್ಪಿಸಿ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ವೈದ್ಯ ಬಸವರಾಜ ಕ್ಯಾವಟರ್ ಅವರು ಒತ್ತಾಯಿಸಿದ್ದಾರೆ.ಈ ಕುರಿತು ಶುಕ್ರವಾರ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಮೆಡಿಕಲ್ ಕಾಲೇಜು ಆಸ್ಪತ್ರೆ ನಿರ್ಮಾಣವಾಗಿ ಹಲವು ತಿಂಗಳು ಕಳೆದಿದ್ದರೂ ಈವರೆಗೂ ಉದ್ಘಾಟನೆ ಮಾಡಿಲ್ಲ. ಈಗಿರುವ ಕಾಲೇಜು ಆಸ್ಪತ್ರೆ 700 ಬೆಡ್ ಹೊಂದಿದೆ. ನಿರ್ಮಾಣ ಕಾರ್ಯ ಆರಂಭವಾಗಿ ಹಲವು ದಿನಗಳೇ ಕಳೆದಿದ್ದರೂ ಇನ್ನೂ ಕಾಮಗಾರಿ ಸಂಪೂರ್ಣ ಮುಗಿಸಿ, ಜನರಿಗೆ ಅನುಕೂಲ ಕಲ್ಪಿಸದಿರುವುದು ಸರಿಯಾದ ಕ್ರಮವಲ್ಲ.ಕೊಪ್ಪಳ ವೈದ್ಯಕೀಯ ಕಾಲೇಜು ಆರಂಭವಾಗಿ ದಶಕ ಕಳೆದಿದ್ದರೂ ಇದಕ್ಕೆ ಬೇಕಾದ ಆಸ್ಪತ್ರೆ ಈವರೆಗೆ ಉದ್ಘಾಟನೆಯಾಗದಿರುವುದು ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ.ಕೊಪ್ಪಳ ಮೆಡಿಕಲ್ ಕಾಲೇಜು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸುಪರ್ದಿಯಲ್ಲಿದ್ದ ಜಿಲ್ಲಾಸ್ಪತ್ರೆಯ ಮೇಲೆ  ಅವಲಂಬಿತವಾಗಿದೆ.ಹೀಗಾಗಿ ಮೊದಲು ಕೊಪ್ಪಳ ಮೆಡಿಕಲ್ ಕಾಲೇಜಿನ ಆಸ್ಪತ್ರೆ ತ್ವರಿತವಾಗಿ ಉದ್ಘಾಟಿಸಿ, ಜನತೆಗೆ ಅನುಕೂಲ ಕಲ್ಪಿಸಿ ಎಂದು ಒತ್ತಾಯಿಸಿದ್ದಾರೆ.ಇನ್ನೂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಬಳಿ ಅವಶ್ಯಕವಾಗಿರುವ ಮೇಲ್ಸುತುವೆ ಕಾಮಗಾರಿಗೆ ಕೇಂದ್ರ ಸರಕಾರ ಅನುಮೋದನೆ ಕೊಟ್ಟಿದ್ದರೂ ರಾಜ್ಯ ಸರಕಾರ, ಆರಂಭಿಸದೇ ಇರುವುದು ಸರಿಯಾದ ಕ್ರಮವಲ್ಲ.ಇದರಿಂದ ರೋಗಿಗಳಿಗೆ ಸಮಸ್ಯೆಯಾಗಲಿದೆ. ಈ ನಿಟ್ಟಿನಲ್ಲಿವೂ ರಾಜ್ಯ ಸರಕಾರ ತುರ್ತಾಗಿ ಕ್ರಮ ವಹಿಸಲಿ ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ.*ಬಾಕ್ಸ್‌..**ಇಎಸ್ ಐ ಆಸ್ಪತ್ರೆಗೆ ಬಲ ತುಂಬಿ: ಕೇಂದ್ರ ಸರಕಾರ ಜಿಲ್ಲೆಗೆ ಇಎಸ್ ಐ ಆಸ್ಪತ್ರೆ ಆರಂಭಿಸಿ, ಕಾರ್ಮಿಕರಿಗೆ ಅನುಕೂಲ ಮಾಡಿಕೊಟ್ಟಿದ್ದರೂ ಅದಕ್ಕೊಂದು ಶಾಶ್ವತ ನೆಲೆ ಹಾಗೂ ಬಲವರ್ಧನೆ ಮಾಡುವ ಕೆಲಸ ಸಂಸದ ರಾಜಶೇಖರ ಹಿಟ್ನಾಳ್ ಅವರಿಂದ ಈವರೆಗೆ ಜರುಗದೇ ಇರುವುದು ದುರದೃಷ್ಟಕರದಢ ಸಂಗತಿಯಾಗಿದೆ.**ಈ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ ಆರಂಭ ಮಾಡಲಾಗಿತ್ತು.  ಆದರೆ, ಇಎಸ್ ಐ ಆಸ್ಪತ್ರೆಯ ಅಭಿವೃದ್ಧಿಯ ಕಡೆಗೆ ಲಕ್ಷ್ಯ ವಹಿಸದೇ ಇದ್ದುದ್ದರಿಂದ  ವೈದ್ಯರಿಲ್ಲದ ಪರಿಸ್ಥಿತಿಗೆ ಬಂದು ನಿಂತಿದೆ. ಬಸಾಪೂರದ ಬಳಿ ಜಾಗ ಮೀಸಲಿಟ್ಟರೂ ಆಸ್ಪತ್ರೆ ಆರಂಭಿಸುವ ಕಾರ್ಯ ಆರಂಭವಾಗಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೇ ಇಎಸ್ ಐ ಆಸ್ಪತ್ರೆ ಮುಚ್ಚುವ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ. ಇದರಿಂದ ಜಿಲ್ಲೆಯ ಲಕ್ಷಾಂತರ ಕಾರ್ಮಿಕರಿಗೆ ಅನಾನುಕೂಲವಾಗಲಿದೆ. ಹೀಗಾಗಿ ಇಎಸ್ ಐ ಆಸ್ಪತ್ರೆ ಬಲವರ್ಧನಗೆ ಸಂಸದರು ತುರ್ತು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.**ಡಾ. ಬಸವರಾಜ್ ಎಸ್ ಕ್ಯಾವಟರ್*ರಾಜ್ಯ ಕರ್ಯಕಾರಿಣಿ ಸದಸ್ಯರು, ಕೊಪ್ಪಳ