ಲೋಕದರ್ಶನ ವರದಿ
ವಾಯ್ ಎಮ್ ಡಿ 01 25-03-2025 ಸೇವಾ ಮನೋಭಾವದೊಂದಿಗೆ ಶಿಕ್ಷಣ ಪಡೆಯಿರಿ : ಡಾ:ಆನಂದ ಗೋಸಾವಿ
ಯಮಕನಮರಡಿ, 25 : ವಿದ್ಯಾರ್ಥಿ ಜಿವನದಲ್ಲರುವ ಸಮಸ್ಯೆಗಳನ್ನು ತಿಳಿದುಕೊಂಡು ಸಾಮಾಜಿಕ ಕಳಕಳಿಯೊಂದಿಗೆ ಜನರ ಸೇವೆ ಮಾಡಬೇಕು ಎಂದು ಹತ್ತರಗಿ ಹರಿಮಂದಿರದ ಡಾಽಽ ಆನಂದ ಗೋಸಾವಿ ಮಹಾರಾಜರು ಹೇಳಿದರು ಅವರು ಸೋಮವಾರ ದಿ 24 ರಂದು ಸಮೀಪದ ಹಂಚಿನಾಳ ಗ್ರಾಮದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ಯಮಕನಮರಡಿ ವಿದ್ಯಾವರ್ದಕ ಸಂಘದ ಕಲಾ ಮಹಾವಿದ್ಯಾಲಯ ಇದರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೆಷ ಶಿಬಿರ ಉದ್ಘಾಟನೆ ಮಾಡಿ ಮಾತನಾಡಿದರು. ವಿವಿಧತೆಯಲ್ಲಿ ಏಕತೆಯುಳ್ಳ ಭಾರತೀಯ ಸಂಸ್ರೃತೀಯ ಸೇವಾ ಮನೋಭಾವದೊಂದಿಗೆ ಶಿಕ್ಷಣ ಪಡೆಯಬೆಕೆಂದು ಡಾಽಽ ಆನಂದ ಗೋಸಾವಿ ಮಹಾರಾಜರು ಹೆಳಿದರು.
ಯಮಕನಮರಡಿ ಯ ವಿ ಸಂಘದ ಕಾರ್ಯದರ್ಶಿ ಜೆ ಎನ್ ಅವಾಡೆ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆ ಸೇವಾ ಮನೋಭಾವನೆ ನಾಯಕತ್ವ ಗುಣ ಬೆಳಗಿಸಿಕೊಳ್ಳಲು ಸಹಕಾರಿ ಯಾಗುತ್ತದೆ. ರಾಷ್ಟ್ರೀಯ ಸೇವಾಯೋಜನೆ ಮೂಲಕ ಗ್ರಾಮದಲ್ಲಿ ಬದಲಾವಣೆ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ ಪಂ ಸದಸ್ಯ ರಾಜು ರೇವಣ್ಣವರ ವಹಿಸಿದರು ಕಾರ್ಯಕ್ರಮದಲ್ಲಿ ಗ್ರಾಮದ ಗಣ್ಯರಾದ ಮಲ್ಲಪ್ಪಾ ಮುಗಳಿ, ಪ್ರಾಚಾರ್ಯರಾದ ಎ ಎಸ್ ಗುತ್ತಿ ಪತ್ರಕರ್ತರಾದ ಗೋಪಾಲ ಚಪಣಿ ಎ ಎಂ ಕರ್ನಾಚಿ, ಗ್ರಾ ಪಂ ಸಿಬ್ಬಂದಿ ಯಲ್ಲಪ್ಪಾ ನಾಯಿಕ ಇದ್ದರು ಎನ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ವಿಜಯ ಮೇದಾರ ಸ್ವಾಗತಿಸಿದರು.