ಕೊರೊನಾ ವೈರಾಣು ಸೋಂಕಿಗೆ 2021-22 ರ ವೇಳೆಗೆ ಲಸಿಕೆ

ವಾಷಿಂಗ್ಟನ್, ಮಾರ್ಚ್ 24, ಇತ್ತೀಚೆಗೆ ಕಾಣಿಸಿಕೊಂಡು ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಾಣು ಸೋಂಕು ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಲಿಸಿಕೆ ತಯಾರಿಕೆಗೆ ಸಂಶೋಧನೆ ಪ್ರಗತಿಯಲ್ಲಿದೆ. ಈ ಲಸಿಕೆ 2021-21 ರ ವೇಳೆಗೆ ಲಭ್ಯವಾಗಲಿದೆ ಎಂದು ಶ್ವೇತಭವನದ ಕೊರೊನಾ ವೈರಾಣು ಪ್ರತಿಕ್ರಿಯಾ ಸಹಯೋಜಕಿ ದಿಬೊರಾಹ್ ಬ್ರಿಕ್ಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2021-22 ರ ವೇಳೆಗೆ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ ಮತ್ತು ಅದರ ಚಿಕಿತ್ಸೆಗೂ ಔಷಧ ಸಿಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.ಸತತವಾಗಿ ಮೂರು ವಾರ್ಷ ಈ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಸೋಂಕಿನಿಂದ ಶೇ 70 ರಷ್ಟು ಮಾನವರು ಬಳಲುವ ಸಾಧ್ಯತೆ ಇದೆ ಎಂದು ಅವರು ವಿವರಿಸಿದರು. ಈಗಾಗಲೇ ಈ ಸೋಂಕು ಜಾಗತಿಕವಾಗಿ 3,78,000 ಜನರಲ್ಲಿ ಕಾಣಿಸಿಕೊಂಡಿದ್ದು 16,500 ಕ್ಕೂ ಹೆಚ್ಚು ಜನರು ಈ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.