ನಿಮ್ಮ ಹಣ ತೆಗೆದುಕೊಳ್ಳಿ ಬ್ಯಾಂಕುಗಳಿಗೆ ಉದ್ಯಮಿ ವಿಜಯ್ ಮಲ್ಯ ಅಲವತು

ಲಂಡನ್, ಫೆ 14, ನನಗೆ ನಿಮ್ಮ ಹಣ ಬೇಡ  ಸಾಲ ಕಟ್ಟದೆ ಮೊಸ ಮಾಡುವ ವ್ಯಕ್ತಿ ನಾನಲ್ಲ ಅದೂ ನನ್ನ  ಜಾಯಮಾನವೂ ಅಲ್ಲ ನಾನು ಪಿಎಂಎಲ್ಎ ಕಾನೂನು ಅಡಿಯಲ್ಲಿ ಯಾವುದೇ ತಪ್ಪು , ಪ್ರಮಾದ ಎಸಗಿಲ್ಲ  ಬ್ಯಾಂಕ್ಗಳೇ, ನಿಮಗೆ ಕೊಡಬೇಕಿರುವ,  ಬಾಕಿ ಇರುವ, ನೀವು ನೀಡಿದ ಮೂಲ ಹಣವನ್ನು  ವಾಪಾಸ್  ತೆಗೆದುಕೊಳ್ಳಿ  ಎಂದು ಬೆಂಗಳೂರು  ಮೂಲದ ಅಬಕಾರಿ ಉದ್ಯಮಿ  ವಿಜಯ್ ಮಲ್ಯ ಅಲವತು ಕೊಂಡಿದ್ದಾರೆ. ಭಾರತಕ್ಕೆ ಗಡೀಪಾರು ಮಾಡುವ ಆದೇಶದ ವಿರುದ್ಧ ಬ್ರಿಟನ್ ಹೈಕೋರ್ಟ್ನಲ್ಲಿ ಸಲ್ಲಿಸಿದ ಮೇಲ್ಮನವಿಯ ಮೂರು ದಿನಗಳ ವಿಚಾರಣೆಯ ನಂತರ ಈ ಕೋರಿಕೆ ಮುಂದಿಟ್ಟಿದ್ದಾರೆ. ಬ್ಯಾಂಕ್ ಗಳಿಂದ  ಪಡೆದ 9ಸಾವಿರ ಕೋಟಿ ರೂಪಾಯಿ  ವಾಪಾಸು ಮಾಡದೇ ವಂಚಿಸಿದ ಆರೋಪ ಎದುರಿಸುತ್ತಿರುವ ಕಿಂಗ್ಫಿಶರ್ಸ್ ಸಮೂಹದ ಮುಖ್ಯಸ್ಥ, "ಕಾನೂನು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಒಂದೇ ಆಸ್ತಿಗಾಗಿ ಜಗಳವಾಡುತ್ತಿವೆ. ಆದರೆ ಈ ಪ್ರಕ್ರಿಯೆಯಲ್ಲಿ ನನ್ನನ್ನು ವಿವೇಚನಾಯುಕ್ತವಾಗಿ, ಗೌರವಯುತವಾಗಿ  ನಡೆಸಿಕೊಳ್ಳುತ್ತಿಲ್ಲ  ಎಂದೂ ಮಲ್ಯ   ಆಪಾದಿಸಿದ್ದಾರೆ. ಬ್ಯಾಂಕುಗಳು  ನೀಡಿದ ಸಾಲದ ಹಣವನ್ನು  ವಾಪಾಸು ತೆಗೆದುಕೊಳ್ಳುವಂತೆ ನಾನು ಕೈಮುಗಿದು ಮನವಿ ಮಾಡುತ್ತೇನೆ ಎಂದು ಲಂಡನ್ನಲ್ಲಿರುವ ರಾಯಲ್ ಕೋರ್ಟ್ ಆಫ್ ಜೆಸ್ಟೀಸ್ನ ಹೊರಗೆ ಅವರು ಸ್ಪಷ್ಟಪಡಿಸಿದ್ದಾರೆ.  ನಾನು ಹಣ ಮರುಪಾವತಿ ಮಾಡಿಲ್ಲ ಎಂಬ ಬ್ಯಾಂಕ್ಗಳ ದೂರಿನ ಆಧಾರದಲ್ಲಿ ಜಾರಿ ನಿರ್ದೇಶನಾಲಯ ನನ್ನ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಆದರೆ ಇಡಿ  ಸ್ವಯಂಪ್ರೇರಿತವಾಗಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ನಾನು ಪಿಎಂಎಲ್ಎ ಕಾನೂನು ಅಡಿಯಲ್ಲಿ ಯಾವುದೇ ತಪ್ಪು , ಅಪರಾದ  ಮಾಡಿಲ್ಲ  ಎಂದೂ  ಸಮರ್ಥಿಸಿಕೊಂಡಿದ್ದಾರೆ