ಮಂಗಳೂರು, ಡಿ 24- ಬಂದರು ನಗರಿ ಮಂಗಳೂರಿನಲ್ಲಿ ಡಿಸೆಂಬರ್ 19 ರಂದು ನಡೆದ ಹಿಂಸಾಚಾರ ಹಾಗೂ ಪೊಲೀಸರು ಹಾರಿಸಿ ಗುಂಡಿಗೆ ಇಬ್ಬರ ಸಾವನ್ನಪ್ಪಲು ಕಾರಣವಾದ ನೈಜ ಅಂಶಗಳ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ- ಎನ್ ಐಎ ತನಿಖೆ ನಡೆಯಬೇಕು ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಸಂಚಾಲಕ ಶರಣ್ ಪಂಪವೆಲ್ ಮಂಗಳವಾರ ಆಗ್ರಹಿಸಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮುಖವನ್ನು ಮುಚ್ಚಿಕೊಂಡಿದ್ದ ಪ್ರತಿಭಟನಾಕಾರು ಕಾಶ್ಮೀರದಲ್ಲಿ ಸರ್ವವನ್ನು ಸರ್ವನಾಶ ಮಾಡಿದ್ದರು. ಪೊಲೀಸರ ಮೇಲೆ ದಾಳಿ ನಡೆಸಿದ್ದರು. ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿದ್ದರು. ಆದರೆ ಡಿಸೆಂಬರ್ 19 ಮಂಗಳೂರಿನಲ್ಲಿ ಮುಖ ಮುಚ್ಚಿಕೊಂಡ ಪ್ರತಿಭಟನಾ ಕಾರರು ಕಾಣಿಸಿಕೊಂಡಿದ್ದು, ಇದು ಅಪಾಯದ ಮುನ್ಸೂಚನೆ ಈ ಜನರಿಗೆ ಭಯೋತ್ಪಾದಕರೊಂದಿಗೆ ಸಂಬಂಧ ಇದೆ ಎಂದು ದೂರಿದರು
ಮುಖ ಮುಚ್ಚಿಕೊಂಡಿದ್ದ ಪ್ರತಿಭಟನಾಕಾರರು ಕಲ್ಲು ತೂರುವುದು ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ನಾವು ಟಿವಿಯಲ್ಲಿ ವೀಕ್ಷಿಸಿದ್ದೇವೆ. ಈ ಪ್ರತಿಭಟನಾಕಾರರು ಕೇರಳದಿಂದ ಬಂದವರು ಎಂದು ತಿಳಿದುಬಂದಿದೆ. ಈ ಕೃತ್ಯಗಳ ಹಿಂದೆ ಯಾರಿದ್ದಾರೆ ಎಂಬುದರ ಪತ್ತೆಗೆ ಕೂಡಲೇ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಘಟನೆ ನಂತರ ವಿವಿಧ ರಾಜಕೀಯ ಪಕ್ಷಗಳ ನಾಯಕರು ಮಂಗಳೂರಿಗೆ ಭೇಟಿ ನೀಡಿದ್ದಾರೆ. ಗೋಲಿಬಾರ್ ನಲ್ಲಿ ಮೃತಪಟ್ಟ ವ್ಯಕ್ತಿಗಳ ಮನೆಗಳಿಗೂ ಭೇಟಿ ನೀಡಿದ್ದಾರೆ. ಆದರೆ, ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಯಾವುದೇ ನಾಯಕರು ಭೇಟಿಯಾಗಲಿಲ್ಲ. ರಾಜಕಾರಣಿಗಳು ಕೇವಲ ಒಂದು ನಿರ್ಧಿಷ್ಟ ಸಮುದಾಯದ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಪಂಪವೆಲ್ ಆರೋಪಿಸಿದರು
ಜಗತ್ತಿನ ವಿವಿಧ ಭಾಗಗಳಿಂದ ಮಂಗಳೂರು ಪೊಲೀಸರಿಗೆ ಜೀವ ಬೆದರಿಕೆ ಎದುರಿಸುತ್ತಿದ್ದಾರೆ. ಪೊಲೀಸರಿಗೆ ಜೀವ ಬೆದರಿಕೆ ಹಾಕುತ್ತಿರುವವರನ್ನು ಶಿಕ್ಷಿಸಬೇಕು. ಈ ಹಿಂಸಾಚಾರವನ್ನು ಆರಂಭಿಸಿದ್ದು ಯಾರು?. ಗಲಭೆಗಳ ಹಿಂದೆ ಇರುವವರು ಯಾರು? ಎಂಬುದು ಜನರಿಗೆ ಗೊತ್ತಾಗಬೇಕು. ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳಿದ್ದು, ಈ ವಿಷಯವನ್ನು ಅವರ ಗಮನಕ್ಕೆ ತರುವುದಾಗಿ ಪಂಪ್ ವೆಲ್ ಹೇಳಿದರು.