ಕುರುಬಗೊಂಡ ಗ್ರಾ.ಪಂ.ನಲ್ಲಿ ವಿಬಿ-ಜಿ ರಾಮ್ ಜಿ ಅರಿವು ಕಾರ್ಯಕ್ರಮ

ಕುರುಬಗೊಂಡ ಗ್ರಾ.ಪಂ.ನಲ್ಲಿ ವಿಬಿ-ಜಿ ರಾಮ್ ಜಿ ಅರಿವು ಕಾರ್ಯಕ್ರಮ VB-G Ram Ji Awareness Program at Kurubagonda Gram

ಲೋಕದರ್ಶನ ವರದಿ 

ಹಾವೇರಿ  17:  ಗ್ರಾಮೀಣ ಕುಟುಂಬಗಳಿಗೆ ವಾರ್ಷಿಕ ಉದ್ಯೋಗ ಖಾತ್ರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸುವ ಮೂಲಕ ಆರ್ಥಿಕ ಭದ್ರತೆ ಬಲಪಡಿಸುತ್ತದೆ. ವಿಬಿ-ಜಿ ರಾಮ್ ಜಿ ಯೋಜನೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ನಾಗಯ್ಯ ಬುರಡಿಕಟ್ಟಿಮಠ ಮಾತನಾಡಿದರು ಹಾವೇರಿ ತಾಲೂಕ ಕುರುಬಗೊಂಡ ಗ್ರಾಮ ಪಂಚಾಯಿತಿಯಲ್ಲಿ ವಿಬಿ-ಜಿ ರಾಮ್ ಜಿ ಅರಿವು ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದರು.  ತಾಪಂ ಐಇಸಿ ಸಂಯೋಜಕ ಗೀರೀಶ ಬೆನ್ನೂರ ಮಾತನಾಡಿ, ಕುರುಬಗೊಂಡ ಗ್ರಾಪಂದಲ್ಲಿ ಹಮ್ಮಿಕೊಂಡ ವಿಬಿ-ಜಿ ರಾಮ್ ಜಿ ಯೋಜನೆಯ ಅರಿವು ಕಾರ್ಯಕ್ರಮದಲ್ಲಿ "ರೋಜ್‌ಗಾರ ಮತ್ತು ಅಜೀವಿಕಾ ಮಿಷನ್ ಗ್ರಾಮೀಣ ಯೋಜನೆಯು ನರೇಗಾ ಬದಲಿಗೆ ಜಾರಿಗೆ ತರಲಾದ ಅತ್ಯಾಧುನಿಕ ಯೋಜನೆ ಆಗಿದೆ.

ಗ್ರಾಮೀಣ ಕುಟುಂಬಗಳಿಗೆ ವಾರ್ಷಿಕ ಕನಿಷ್ಠ 125 ದಿನಗಳ ಉದ್ಯೋಗ ಖಾತ್ರಿ, ಹೆಚ್ಚಿನ ಕೂಲಿ ಮತ್ತು ಗ್ರಾಮೀಣ ಮೂಲಸೌಕರ್ಯಗಳ ನಿರ್ಮಾಣವೇ ಇದರ ಉದ್ದೇಶ. ಈ ಯೋಜನೆಯು ಈಗ ಕೇಂದ್ರ ಪುರಸ್ಕೃತ ಮಾದರಿ ಯಲ್ಲಿದ್ದು (60:40 ಅನುಪಾತದ ವೆಚ್ಚ ಹಂಚಿಕೆ), ಕೇವಲ ಕೂಲಿ ನೀಡುವುದಕ್ಕೆ ಸೀಮಿತವಾಗದೆ ಜಲ ಭದ್ರತೆ, ಗ್ರಾಮೀಣ ರಸ್ತೆಗಳು ಮತ್ತು ಜೀವನೋಪಾಯಕ್ಕೆ ಅಗತ್ಯವಾದ ಗೋದಾಮುಗಳಂತಹ ಶಾಶ್ವತ ಆಸ್ತಿಗಳ ಸೃಜನೆಗೆ ಹೆಚ್ಚಿನ ಒತ್ತು ನೀಡುತ್ತದೆ. ಈ ಕುರಿತು ಅನುಷ್ಠಾನ ಇಲಾಖೆಗಳಿಗೆ ಆದ್ಯತೆ ನೀಡಲಾಗಿದೆ ಎಂದರು.  ಕಾರ್ಯಕ್ರಮದಲ್ಲಿ ಕಾಯಕ ಮಿತ್ರ, ಸ್ವಚ್ಛ ವಾಹಿನಿ ಚಾಲಕರು, ಪಶು ಸಖಿ ಮೇಟಿಗಳು ಪಂಚಾಯತಿ ಸಿಬ್ಬಂದಿಗಳು ಭಾಗವಹಿಸಿದ್ದರು.