ವಿ. ಭ. ದರಬಾರ ಶಾಲಾ ಸಂಸತ್ ಚುನಾವಣೆ
V. B. Darbar School Parliament Election
ವಿಜಯಪುರ 24: ವಿ. ಭ. ದರಬಾರ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆ ವಿಜಯಪುರದಲ್ಲಿ 2025-26 ನೇ ಸಾಲಿನ ಶಾಲಾ ಸಂಸತ್ತಿನ ಚುನಾವಣೆ ದಿ. 23ರಂದು ಜರುಗಿತು. ಮಕ್ಕಳಲ್ಲಿ ಮತದಾನದ ಜಾಗೃತಿ ಮೂಡಿಸುವ ದಿಸೆಯಲ್ಲಿ ನಾಮಪತ್ರ ಸಲ್ಲಿಕೆ, ನಾಮಪತ್ರ ಪರೀಶೀಲನೆ, ನಾಮಪತ್ರ ಹಿಂಪಡೆಯುವಿಕೆ, ಮತದಾನ, ಮತಗಳ ಏಣಿಕೆ, ಚುನಾವಣಾಧಿಕಾರಿಗಳ ನೇಮಕ ಹೇಗೆ, ಪ್ರಜಾಪ್ರಭುತ್ವದ ನಿಯಮಾನುಸಾರವಾಗಿ ಚುನಾವಣೆ ಜರುಗಿತು. ಚುನಾವಣೆೆ ಹಾಗೂ ಮತ ಚಲಾವಣೆಯ ಜಾಗೃತಿಯ ಪರಿಣಾಮವಾಗಿ ಯಾವುದೇ ಮತ ಹಾಳಾಗದಂತೆ ಮತ ಚಲಾವನೆಯಾಗಿದ್ದು ವಿಶೇಷವಾಗಿತ್ತು.
ಚುನಾವಣೆಯಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿಭಾಗಗಳಿಂದ ಕ್ರಮವಾಗಿ ಭವ್ಯಾ ಮಠ ಹಾಗೂ ಮೇಘಾ ಪವಾರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರೆ ಪ್ರತೀಕ್ಷಾ ನಾಗಠಾಣ ಮತ್ತು ಸೌಬಿಯಾ ಜಮಖಂಡಿ ಇವರು ಉಪ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾದರು.
ಉಪಪ್ರಾಚಾರ್ಯ ವ್ಹಿ. ಆರ್. ಕುಲಕರ್ಣಿ ಹಾಗೂ ಎಲ್ಲ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 