‘ಶುದ್ಧೀಕರಣ’ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

‘ಶುದ್ಧೀಕರಣ’ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ Congress President Mallikarjun Kharge for the ‘purification’ programme


ಗದಗ 02:  ಉತ್ತರಾಖಂಡದ ಹಾಲ್ದ್ವನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯಕ್ರಮದ ಬಳಿಕ ನಡೆದಿದೆ ಎನ್ನಲಾದ ‘ಶುದ್ಧೀಕರಣ’ ವಿವಾದಕ್ಕೆ ಸಂಬಂಧಿಸಿದೆ ಖರ್ಗೆ ಅವರು ಭಾಗವಹಿಸಿದ್ದ ರಾಮಲೀಲಾ ಮೈದಾನದಲ್ಲಿ ನಂತರ ‘ಶುದ್ಧೀಕರಣ’ ಕಾರ್ಯಕ್ರಮ ನಡೆಸಿದ್ದು ರಾಹುಲ್ ಗಾಂಧಿ ಇದನ್ನು ಅಸ್ಪೃಶ್ಯತೆ ಮತ್ತು ಜಾತಿ ಆಧಾರಿತ ತಾರತಮ್ಯದ ಪ್ರತೀಕ ಎಂದು ಖಂಡಿಸಿದರು.ಈ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಎಸ್ ಸಿ ಮತ್ತು ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್ ಐ ಆರ್ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು ಎಂದು ಕಾಂಗ್ರೆಸ್ ಯುವ ಘಟಕದ ಗದಗ ಜಿಲ್ಲಾಧ್ಯಕ್ಷ ಕೆ ಎಚ್ ಪಾಟೀಲ ತಿಳಿಸಿದರು.    ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಂತರ, ರಾಹುಲ್ ಗಾಂಧಿಯವರು ಈ ಘಟನೆಯನ್ನು ಜಾತಿವಾದಿ ರೀತಿಯಲ್ಲಿ ಬಿಂಬಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧವೇ ಉತ್ತರಾಖಂಡದಲ್ಲಿ ಎಫ್ ಐ ಆರ್ ದಾಖಲಿಸಲಾಯಿತು. ಕಾಂಗ್ರೆಸ್ ಇದನ್ನು ತೀವ್ರವಾಗಿ ಖಂಡಿಸಿದ್ದು, ರಾಹುಲ್ ಗಾಂಧಿ ಇದರ ವಿರುದ್ಧ  ದ್ವನಿ ಎತ್ತಿದ್ದು, ಅದರ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲಾಗಿದ್ದು ಯಾರ ವಿರುದ್ಧ ಕೇಸ್ ದಾಖಲಿಸಬೇಕಿತ್ತು ಅದನ್ನ ಬಿಟ್ಟು ಹೋರಾಟ ಮಾಡುವವರ ವಿರುದ್ದ ಕೇಸ್ ದಾಖಲಿಸಿದ್ದನ್ನ ಖಂಡಿಸಿ ಸಪ್ಟೆಂಬರ್‌-07 ರಂದು ಸಂಜೆ 4 ಗಂಟೆಗೆ ಗದಗ ನಗರದ ಟಿಪ್ಪು ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಮೆರೆಗೆ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.