2022ರ ಉತ್ತರಪ್ರದೇಶ ವಿಧಾನಸಭೆ ಚುನಾವಣೆ; ಪ್ರಿಯಾಂಕಾ ಗಾಂಧಿಯದ್ದೇ ನೇತೃತ್ವ; ಕಾಂಗ್ರೆಸ್

ಪ್ರಯಾಗ್ ರಾಜ್,  ಅ 26:        ಉತ್ತರ ಪ್ರದೇಶ  ರಾಜ್ಯ ವಿಧಾನಸಭೆಗೆ  2022ರಲ್ಲಿ ನಡೆಯಲಿರುವ  ಚುನಾವಣೆಯಲ್ಲಿ   ಕಾಂಗ್ರೆಸ್  ಪಕ್ಷದ  ನೇತೃತ್ವವನ್ನು  ಪಕ್ಷದ  ಪ್ರಧಾನ ಕಾರ್ಯದರ್ಶಿ  ಪ್ರಿಯಾಂಕಾ ಗಾಂಧಿ  ವಾದ್ರಾ ವಹಿಸಲಿದ್ದಾರೆ  ಎಂದು ರಾಜ್ಯ ಕಾಂಗ್ರೆಸ್  ಘಟಕ ಹೇಳಿದೆ.

ಪ್ರಿಯಾಂಕಾ ಗಾಂಧಿ  ವಾದ್ರಾ ನೇತೃತ್ವದಲ್ಲಿ   ಕಾಂಗ್ರೆಸ್  ಉತ್ತರ ಪ್ರದೇಶದಲ್ಲಿ  ಚುನಾವಣೆಗಳನ್ನು ಎದುರಿಸಲಿದೆ.   ರಾಜ್ಯ ಮೇಲ್ಮನೆಯಲ್ಲಿ ಪಕ್ಷದ ಏಕೈಕ  ವಿಧಾನಪರಿಷತ್  ಸದಸ್ಯರಾಗಿರುವ   ದೀಪಕ್ ಸಿಂಗ್  ಹೇಳಿದ್ದಾರೆ.

2022ರಲ್ಲಿ ನಡೆಯಲಿರುವ  ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ,   ಕಾಂಗ್ರೆಸ್   ಪ್ರಿಯಾಂಕಾ ಗಾಂಧಿ ಅವರ ನಾಯಕತ್ವದಲ್ಲಿ  ಅಧಿಕಾರಕ್ಕೇರಲಿದೆ ಎಂಬ  ವಿಶ್ವಾಸ ವ್ಯಕ್ತಪಡಿಸಿರುವ ಅವರು,  ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ  ಯಾರನ್ನು  ಬಿಂಬಿಸಲಾಗುವುದು ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

ಚುನಾವಣೆಗೆ ಮುನ್ನ  ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಸುವ  ಪರಿಪಾಠ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ,  ಚುನಾವಣೆಯ ನಂತರ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸಲಾಗುವುದು  ಎಂದರು.

ಇತ್ತೀಚಿಗೆ ನಡೆದ  11 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ  ಕಾಂಗ್ರೆಸ್  ಪಡೆದುಕೊಂಡಿರುವ  ಮತಗಳ ಪ್ರಮಾಣ  ಹೆಚ್ಚಳಗೊಂಡಿದ್ದು,  ಈಗ ಜನರು  2022 ಚುನಾವಣೆಗಾಗಿ ಎದುರು ನೋಡುತ್ತಿದ್ದಾರೆ  ಸಿಂಗ್ ಹೇಳಿದರು. 

  ನರೇಂದ್ರ ಮೋದಿ  ಸರ್ಕಾರದ ಆಡಳಿತದಿಂದ ದೇಶದ ಜನರು ಬೇಸತ್ತಿದ್ದು,  ಕಾಂಗ್ರೆಸ್  ಪಕ್ಷ  ದೇಶದಲ್ಲಿ ಪರ್ಯಾಯ ರಾಜಕೀಯ ಪಕ್ಷವಾಗಿದೆ  ಎಂದು ಹೇಳಿದರು 

ಉತ್ತರ ಪ್ರದೇಶದಲ್ಲಿ ವಿದ್ಯಾರ್ಥಿ ಸಂಘಟನೆಗಳನ್ನು  ಪುನರಾಂಭಿಸಬೇಕು ಎಂಬ ಬೇಡಿಕೆ ಇರಿಸಿ  ಪ್ರತಿಭಟನೆ ನಡೆಸಿದ್ದ  ಎನ್ ಎಸ್ ಯು ಐ  ಸಂಘಟನೆ  ಸದಸ್ಯರ  ವಿರುದ್ದ  ರಾಜ್ಯ ಸರ್ಕಾರ  ಪ್ರಕರಣ ದಾಖಲಿಸಿ ಜೈಲಿಗೆದಬ್ಬಿದೆ ಎಂದು ಅವರು ಆರೋಫಿಸಿದರು.    ವಿದ್ಯಾರ್ಥಿ  ಕಾಂಗ್ರೆಸ್  ಸಂಘಟನೆಯ ನಾಯಕರನ್ನು  ಭೇಟಿ ಮಾಡಲು  ದೀಪಕ್ ಸಿಂಗ್,ನೈನಿ  ಸೆಂಟ್ರಲ್  ಜೈಲಿಗೆ  ಭೇಟಿ ನೀಡಿದರು.