ಕಾರವಾರ 09: ಉತ್ತರ ಕನ್ನಡದಲ್ಲಿ ಕೋವಿಡ್ 19 ಪಾಜಿಟಿವ್ ಇರುವ 8 ಪ್ರಕರಣ ಪತ್ತೆಯಾಗಿದ್ದು, ಇವರಲ್ಲಿ ಈರ್ವರು ಪುಟ್ಟ ಮಕ್ಕಳು ಸೇರಿದ್ದಾರೆ. ಹಾಗಂತ ಸಂಖ್ಯೆ ಹೆಚ್ಚಾಯಿತು ಎಂಬ ಆತಂಕ ಬೇಡ ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಜನರಲ್ಲಿ ವಿಶ್ವಾಸ ತುಂಬಿದ್ದಾರೆ. ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಮಾಡಿದ ಅವರು ಶುಕ್ರವಾರ ಪತ್ತೆಯಾದ 12 ಜನರು ಕೋವಿಡ್ ಪಾಜಿಟಿವ್ ಬಂದಿದ್ದ ಯುವತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರು. ಕೋವಿಡ್ ಬಂದ ಮೂಲ ಪತ್ತೆಯಾದ ಕಾರಣ ಆತಂಕಪಡುವ ಅವಶ್ಯಕತೆಯಿಲ್ಲ. ಕಾರವಾರ ಮೆಡಿಕಲ್ ಕಾಲೇಜಿನ ಕೋವಿಡ್ ವಿಶೇಷ ವಾರ್ಡ ನೆಲ ಮಾಳಿಗೆಯಲ್ಲಿದ್ದು, ಅಲ್ಲಿ ಬಿಗಿ ಬಂದೋಬಸ್ತ ಇದೆ. ಅಲ್ಲಿ ಚಿಕಿತ್ಸೆ ಕೊಡುವ ವೈದ್ಯರು, ನರ್ಸ ಹೊರತಾಗಿ ಯಾರಿಗೂ ಪ್ರವೇಶವಿಲ್ಲ. ಗಾಳಿಯ ಮೂಲಕ ಕೋವಿಡ್ ಹರಡುವುದಿಲ್ಲ ಎಂದು ಜನರಲ್ಲಿ ವಿಶ್ವಾಸ ತುಂಬಿದರು. ಜನರು ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು.
ಭಟ್ಕಳದ ನಿರ್ಬಂಧಿತ ವಲಯದಲ್ಲಿ, ಕ್ವಾರೆಂಟೇನ್ ಪ್ರದೇಶದಲ್ಲಿ ಜನ ಇದ್ದ ಕಾರಣ ಅದು ಸಮುದಾಯಕ್ಕೆ ವ್ಯಾಪಿಸುವುದಿಲ್ಲ ಎಂದರು. ಮಗುವಿನ ಚಿಕಿತ್ಸೆಗೆಂದು, ಮಗುವಿನ ತಂದೆ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಹೋದಾಗ, ಅಲ್ಲಿದ್ದ ಕೋವಿಡ್ ಪಾಜಿಟಿವ್ ಪ್ರಕರಣದಿಂದ ಭಟ್ಕಳದ ಕುಟುಂಬಕ್ಕೆ ಕೋವಿಡ್ ಬಂದಿದೆ. ಇದನ್ನು ನಿಯಂತ್ರಿಸಲು ಉತ್ತಮ ಚಿಕಿತ್ಸಾ ವ್ಯವಸ್ಥೆ ಕಾರವಾರದ ಮೆಡಿಕಲ್ ಕಾಲೇಜಿನಲ್ಲಿದೆ. ಅಲ್ಲದೇ ಶನಿವಾರ ಪತ್ತೆಯಾದ 7 ಜನ ಸೆಕೆಂಡರಿ(ಎರಡನೇ ಹಂತದ ಸಂಪರ್ಕದಿಂದ) ಕಾಂಟ್ಯಾಕ್ಟನಿಂದ ಕೋವಿಡ್ ಪಾಜಿಟಿವ್ ಕಾಣಿಸಿಕೊಂಡಿದೆ. ಇದರಲ್ಲಿ ಎರಡು ಜನ ಮಕ್ಕಳು ಇದ್ದಾರೆ. ಇಬ್ಬರು ವಯೋವೃದ್ಧರು ಇದ್ದಾರೆ. 50 ವರ್ಷದ ಒಬ್ಬ ಮಹಿಳೆ, 23 ವರ್ಷದ ಇಬ್ಬರು ಯುವತಿಯರು ಹಾಗೂ 18 ವರ್ಷದ ಯುವಕನಿದ್ದಾನೆ. 17 ವರ್ಷದ ಯುವತಿಯೂ ಇದ್ದಾಳೆ.
ಇವರಲ್ಲಿ ಗುರುವಾರ ಪತ್ತೆಯಾದ ಯುವತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದ ಆಕೆಯ ಗೆಳತಿಯ ತಂದೆಯೂ ಕೋವಿಡ್ ಪಾಜಿಟಿವ್ ಬಂದಿದೆ. ಒಟ್ಟಾರೆ 3 ಮಕ್ಕಳೂ ಸೇರಿದಂತೆ 21 ಜನರು ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕ ಹೊಂದಿದವರೇ ಆಗಿದ್ದಾರೆ. ಭಟ್ಕಳದಲ್ಲಿ ಬಿಗಿ ಬಂದೋಬಸ್ತ ಮಾಡಲಾಗಿದೆ. ಕಂಟೋನ್ಮೆಂಟ್ ಏರಿಯಾದಲ್ಲಿ ನಿಯಮ ಹೆಚ್ಚಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಸ್ವಲ್ಪ ತೊಂದರೆಯಾಗುತ್ತದೆ. ಆದರೆ ಕೋವಿಡ್ 19 ನಿಯಂತ್ರಿಸಲು ಇದು ಅನಿವಾರ್ಯ ಕ್ರಮವಾಗಿದೆ ಎಂದು ಜಿಲ್ಲಾಧಿಕಾರಿ ಹರೀಶ್ ಕುಮಾರ್ ವಿವರಿಸಿದರು.
ಮೆಡಿಕಲ್ ಕಾಲೇಜಿನ ಕೋವಿಡ್ ವಾರ್ಡ :
ಮೆಡಿಕಲ್ ಕಾಲೇಜಿನ ಕೋವಿಡ್ ವಾರ್ಡನಲ್ಲಿ ಭಟ್ಕಳದ ಕೋವಿಡ್ ಪೇಶಂಟ್ಗಳನ್ನು ಇಡಬಾರದಾಗಿತ್ತು. ಅದು ಕಾರವಾರದವರಿಗೆ ಹರಡುತ್ತದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಗಾಳಿಯಲ್ಲಿ ಕೋವಿಡ್ ಹರಡುವುದಿಲ್ಲ. ರೋಗಿಗಳು ಕಿಟಕಿ ಮೂಲಕ ಉಗುಳುವ ಪ್ರಶ್ನೆಯೇ ಇಲ್ಲ. ಊಹಾತ್ಮಕ ಸಂಶಯಗಳನ್ನು ಜನರು ಕಿವಿಗೆ ಹಾಕಿಕೊಳ್ಳಬಾರದು. ಕೋವಿಡ್ ಎದುರಿಸಬೇಕು. ಅದು ಯುದ್ಧ. ಕೋವಿಡ್ ಹೊಂದಿದ ರೋಗಿಯನ್ನು ನಾವು ನಿರಾಕರಿಸುವಂತಿಲ್ಲ. ಪ್ರಜೆಗಳಿಗೆ ಚಿಕಿತ್ಸೆ ಕೊಡಬೇಕು. ಕೋಡುತ್ತಿದ್ದೇವೆ. ನಮ್ಮ ವೈದ್ಯರು ಸಮರ್ಥರಿದ್ದಾರೆ ಎಂದು ಜಿಲ್ಲಾಧಿಕಾರಿ ಕಾರವಾರ ಕಿಮ್ಸನ ಕೋವಿಡ್ ಘಟಕದ ಸಾಮಥ್ರ್ಯವನ್ನು ಸಮಥರ್ಿಸಿಕೊಂಡರು. ನೇವಿ ವಿಶೇಷ ಪ್ರಕರಣದಲ್ಲಿ ಪತಂಜಲಿ ಆಸ್ಪತ್ರೆಯನ್ನು ನಮಗೆ ಕೊಟ್ಟಿತ್ತು.
ರಕ್ಷಣಾ ಇಲಾಖೆಯ ಪ್ರದೇಶದಲ್ಲಿ ಪದೇ ಪದೇ ಪ್ರವೇಶಿಸುವುದು ಸರಿಯಾದ ಕ್ರಮವಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು. ಜನರು ವದಂತಿಗಳಿಂದ ದೂರ ಇರಬೇಕು. ಕೋವಿಡ್ ಚಿಕಿತ್ಸಾ ಸಾಮಥ್ರ್ಯ ಕಾರವಾರಕ್ಕೆ ಇದೆ ಎಂಬುದು ಪ್ರಮುಖ ಸಂಗತಿ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ 1800 ರೋಗಿಗಳಿಗೆ ಚಿಕಿತ್ಸೆ ಕೊಡುತ್ತದೆ. ಅಲ್ಲೇ ಕೋವಿಡ್ ಘಟಕ ಸಹ ಇದೆ ಎಂದ ಜಿಲ್ಲಾಧಿಕಾರಿಗಳು, ಕಾರವಾರ ಕೋವಿಡ್ ಚಿಕಿತ್ಸಾ ವಿಶೇಷ ಘಟಕ ಸ್ಥಾಪನೆ ಅವಶ್ಯವಾಗಿತ್ತು. ಅದು ಯುದ್ಧ ಕಾಲದ ಅನಿವಾರ್ಯತೆಯಂತೆ ಎಂದರು.
ಕೋವಿಡ್ ಟೆಸ್ಟ್ ಘಟಕ ಮೇ.12ಕ್ಕೆ :
ಕೋವಿಡ್ ವೈರಲ್ ಪರೀಕ್ಷಾ ಘಟಕ ಮೇ.12 ರಿಂದ ಕಾಯರ್ಾರಂಭ ಮಾಡಲಿದೆ ಎಂದು ಸಿಇಓ ರೋಶನ್ ತಿಳಿಸಿದರು. ಯಂತ್ರ ಕಾರವಾರಕ್ಕೆ ಬಂದಿದೆ. ಸಿವಿಲ್ ಕೆಲಸ ಮುಗಿದಿವೆ. ಹಾಗಾಗಿ ಮೇ.12 ರಿಂದ ಕೋವಿಡ್ ವೈರಸ್ ಪರೀಕ್ಷಾ ಘಟಕ ಕೆಲಸ ಪ್ರಾರಂಭಿಸಲಿದೆ ಎಂದರು. ಶುಕ್ರವಾರ ಕೋವಿಡ್ ಘಟಕಕ್ಕೆ ಚಿಕಿತ್ಸೆಗೆಂದು ಹಾಜರಾದ 12 ಕೋವಿಡ್ ಪಾಜಿಟಿವ್ ಹೊಂದಿದವರಲ್ಲಿ ಯುವಕನ ಮನವೊಲಿಸಿ, ರೋಜಾ ಬಿಡಿಸಲಾಗಿದೆ.
ಕಾಯಿಲೆ ಮೊದಲು ವಾಸಿ ಮಾಡಿಕೊಳ್ಳಿ. ಅನಾರೋಗ್ಯದ ಸಂದರ್ಭದಲ್ಲಿ ಉಪವಾಸ ಬಿಡುವುದು ಧರ್ಮ ವಿರೋಧಿಯಾಗುವುದಿಲ್ಲ ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನವರಿಕೆ ಮಾಡಿದ ಮೇಲೆ, ಕರೋನಾ ಪೀಡಿತ ವಯಸ್ಕರು ಆಹಾರ ಸೇವಿಸಲು ಸಮ್ಮಿತಿಸಿದ ಸಂಗತಿಯನ್ನು ಸಹ ಸುದ್ದಿಗೋಷ್ಠಿಯಲ್ಲಿ ವಿವರಿಸಲಾಯಿತು.