ಡಿ ಎ ಪಿ ಮತ್ತು ಯೂರಿಯಾ ಗೊಬ್ಬರಗಳಿಗೆ ಸಿಮಿತಗೋಳಿಸದೆ ಕಾಂಪ್ಲೇಕ್ಸ್‌ ಗೊಬ್ಬರಗಳನ್ನು ಉಪಯೋಗಿಸಿ - ಚೇತನಾ ಪಾಟೀಲ್‌

ಡಿ ಎ ಪಿ ಮತ್ತು ಯೂರಿಯಾ ಗೊಬ್ಬರಗಳಿಗೆ ಸಿಮಿತಗೋಳಿಸದೆ ಕಾಂಪ್ಲೇಕ್ಸ್‌ ಗೊಬ್ಬರಗಳನ್ನು ಉಪಯೋಗಿಸಿ - ಚೇತನಾ ಪಾಟೀಲ್‌ Use complex fertilizers, not just DAP and urea - Chetana Patil

ಶಿರಹಟ್ಟಿ 07 : ತಾಲೂಕಿನ ರಣತೂರ ಗ್ರಾಮ ಪಂಚಾಯತದಲ್ಲಿ ಕೃಷಿ ಇಲಾಖೆಯಿಂದ ಭೂಮಿ ತಾಯಿ ರಕ್ಷಣೆ ಕಣ್ಗಾವಲು ಸಮಿತಿ ಸಭೆ ಮೂಲಕ ನೈಸರ್ಗಿಕ ಕೃಷಿ ಹಾಗೂ ಸಾವಯವ ಕೃಷಿ ಕುರಿತು ಸಮಗ್ರವಾಗಿ  ಬಸವರಾಜ ನಾವಿ ಇವರಿಂದ ಸುದೀರ್ಘವಾಗಿ ಮಾಹಿತಿ ನೀಡಿದರು.ಈ ಸಭೆಯನ್ನು ಉದ್ದೇಶಿಸಿ ಮಾನ್ಯ ಜಂಟಿ ಕೃಷಿ ನಿರ್ದೇಶಕರು ಗದಗ ಶ್ರೀಮತಿ ಚೇತನಾ ಪಾಟೀಲ್ ಇವರು ಸಮತೋಲವಾಗಿ ಗೊಬ್ಬರಗಳನ್ನು ಬಳಸಲು ರೈತರಿಗೆ ತಿಳಿಸಿದರು. ಕೇವಲ ಡಿ ಎ ಪಿ ಮತ್ತು ಯೂರಿಯಾ ಗೊಬ್ಬರಗಳಿಗೆ ಸಿಮಿತಗೋಳಿಸದೆ ಕಾಂಪ್ಲೇಕ್ಸ್‌ ಗೊಬ್ಬರಗಳನ್ನು ಉಪಯೋಗಿಸಿಕೊಳ್ಳಬೇಕು.

ಹಾಗೂ ಸಾವಯವ ಗೊಬ್ಬರಗಳನ್ನು ಉಪಯೋಗಿಸಲು ತಿಳಿಸಿದರುಸಭೆಯಲ್ಲಿ ಉಪಸ್ಥಿತಿಯಲ್ಲಿದ್ದ ಮಾನ್ಯ ಉಪ ಕೃಷಿ ನಿರ್ದೇಶಕರು ಗದಗ ಶ್ರೀಮತಿ ಸ್ಫೂರ್ತಿ ಇವರು ಪ್ರಾತ್ಯಕ್ಷಿತ ಮುಖಾಂತರ ಬೀಜೋಪಚಾರ ಮಾಡುವ ವಿಧಾನ ಮತ್ತು ಬೀಜೋಪಚಾರ ಮಾಡುವುದರಿಂದ ಹೆಸರು ಕಡಲೆ ತೊಗರಿ ಬೆಳೆಗಳಲ್ಲಿ ಬೇರು ಕೊಳೆಯುವ ರೋಗವನ್ನು ತಡೆಗಟ್ಟಬಹುದೆಂದು ತಿಳಿಸಿದರು.ಈ ಸಭೆಯಲ್ಲಿ ಮಾನ್ಯ ಸಹಾಯಕ ಕೃಷಿ ನಿರ್ದೇಶಕರಾದ ಶಿವಕುಮಾರ ಕಾಶಪ್ಪನವರ ಭೂಮಿ ತಾಯಿ ರಕ್ಷಣೆ ಕಣ್ಣಾವಲು ಸಮಿತಿ ಸಭೆಯ ಪ್ರಸ್ತಾವಿಕ ಮಾತನಾಡಿ ಅದರ ಬಗ್ಗೆ ವಿವರಿಸಿದರು.ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಆರ್ ಸಿ ಚಾಕಲಬ್ಬಿ ಹಾಗೂ ಸಿಬ್ಬಂದಿ ವರ್ಗದವರು, ಗ್ರಾಮದ ಎಲ್ಲಾ ರೈತ/ರೈತ ಮಹಿಳೆಯರು ಉಪಸ್ಥಿತರಿದ್ದರು.