ಬಿಎಸ್ ಯಡಿಯೂರ​‍್ಪನವರ ಒಬ್ಬ ವ್ಯಕ್ತಿಯಲ್ಲ ರಾಷ್ಟ್ರೀಯ ನಾಯಕ : ಅರುಣಕುಮಾರ ಪೂಜಾರ

ಬಿಎಸ್ ಯಡಿಯೂರ​‍್ಪನವರ ಒಬ್ಬ ವ್ಯಕ್ತಿಯಲ್ಲ ರಾಷ್ಟ್ರೀಯ ನಾಯಕ : ಅರುಣಕುಮಾರ ಪೂಜಾರ BS Yeddyurappa is not a single individual but a national leader: Arun Kumar Pujara

ರಾಣೆಬೆನ್ನೂರು 7 : ಬಿಎಸ್ ಯಡಿಯೂರ​‍್ಪನವರ ಒಬ್ಬ ವ್ಯಕ್ತಿಯಲ್ಲ ರಾಷ್ಟ್ರೀಯ ನಾಯಕ ಜನ ಸಾಮಾನ್ಯರ ಜೀವನವನ್ನು ಭವಿಷ್ಯದಲ್ಲಿನ ಭದ್ರತೆಗೆ ಪಣತೊಟ್ಟ ನಾಯಕರು ಅಂಥವರ ಅಭಿನಂದನಾ ಕಾರ್ಯಕ್ರಮವು ಮಾಡಲು ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.  

ಅವರು ಗುರುವಾರ ಮಧ್ಯಾಹ್ನ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅಭಿನಂದನನೋತ್ಸವ ಕುರಿತು ಮಾತನಾಡಿದರು. ಶಿಕಾರಿಪುರದಿಂದ ಬೆಂಗಳೂರಿನ ರಾಜಧಾನಿಗೆ ಮತ್ತು ಬೀದರದಿಂದ ನಾಡಿನ ಆದ್ಯಂತ ಪಾದಯಾತ್ರೆ ಮಾಡಿ ಜನಸಾಮಾನ್ಯರ ಹಕ್ಕಿಗಾಗಿ ಹೋರಾಟ ಮಾಡಿದ ಮಹಾನ್ ನಾಯಕ ಅವರಾಗಿದ್ದಾರೆ ಅಂತವರ ಸೇವೆ ಮಾಡುವುದು ವ್ಯಕ್ತಿ ಪೂಜೆಯಲ್ಲ ಅವರ ವ್ಯಕ್ತಿತ್ವದ ಪೂಜೆ ಹೊರತು ಬೇರೆ ಏನೂ ಅಲ್ಲ ಎಂದು ಸ್ಪಷ್ಟಪಡಿಸಿದರು.  

ಮೇ 9, 2026 ರಂದು ಚಿತ್ರದುರ್ಗದ ಮಹಾನಗರದಲ್ಲಿ ಅಭಿನಂದನೋತ್ಸವ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಲಕ್ಷಕ್ಕೂ ಹೆಚ್ಚು ನಾಗರಿಕರು, ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಇದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು. ರಾಣೆಬೆನ್ನೂರು ನಗರ ಮತ್ತು ತಾಲೂಕಿನಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 175 ಹೆಚ್ಚು ವಾಹನಗಳ ವ್ಯವಸ್ಥೆ ಮಾಡಲಾಗಿದೆ ಅಲ್ಲದೆ, ಜೊತೆಗೆ ಅವರವರ ವಾಹನಗಳ ಮೂಲಕವೂ ಪಾಲ್ಗೊಳ್ಳಲಿದ್ದಾರೆ ಎಂದರು.  

ಸಭೆಯ ಅಧ್ಯಕ್ಷತೆ ವಹಿಸಿದ್ದ ನಗರ ಮಂಡಲ ದ ಅಧ್ಯಕ್ಷ ಮಂಜುನಾಥ ಕಾಟಿ ಅವರು, ಭಾರತೀಯ ಜನತಾ ಪಕ್ಷವು ಕರ್ನಾಟಕದಲ್ಲಿ ನೆಲ್ಲಿಸಲು ಸಾಕಷ್ಟು ಶ್ರಮಿಸಿದ ಧಿಮಂತ ನಾಯಕ ಯಡಿಯೂರ​‍್ಪನವರು. ಈ ದೇಶ, ನಾಡು ಕಂಡ ಅಪರೂಪದ ರಾಜಕಾರಣಿ ಅವರಾಗಿದ್ದಾರೆ. ಕಾರ್ಯಕ್ರಮದ ಯಶಸ್ವಿಗೆ ಈಗಾಗಲೇ ಪಕ್ಷದ ಮುಖಂಡರು ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇಲ್ಲಿಂದ ಚಿತ್ರದುರ್ಗಕ್ಕೆ ತೆರಳಲು 20 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಸಿದ್ದರಾಗಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದೇ ನಮ್ಮೆಲ್ಲರ ಅದೃಷ್ಟವೆಂದು ಭಾವಿಸಿದ್ದೇವೆ ಎಂದರು.  

ಮಾಧ್ಯಮಗೋಷ್ಠಿಯಲ್ಲಿ, ಪಕ್ಷದ ಮುಖಂಡರಾದ ಸುಭಾಶ ಸಿರಿಗೇರಿ, ಮಂಜುನಾಥ ಓಲೆಕಾರ, ನಿಂಗರಾಜ ಕೋಡಿಹಳ್ಳಿ, ಸಿದ್ದಣ್ಣ ಚಿಕ್ಕಬಿದರಿ, ಮಲ್ಲಣ್ಣ ಅಂಗಡಿ, ಪರಮೇಶ್ ಗೌಳಿ, ಪ್ರಕಾಶ್ ಪೂಜಾರ, ಅಮೋಘ ಬಾದಾಮಿ, ಸೇರಿದಂತೆ ಮತ್ತಿತರರು ಇದ್ದರು.