ಸರ್ಕಾರಿ ಸಭೆ ಸಮಾರಂಭಗಳಲ್ಲಿ ಸಿರಿಧಾನ್ಯ ಖಾದ್ಯಗಳ ಬಳಕೆ ಮಾಡಿ: ಸಿಇಓ ರಾಹುಲ್ ರತ್ನಂ ಪಾಂಡೇಯ

Use cereal dishes in government meeting functions: CEO Rahul Ratnam Pandey

ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ

ಕೊಪ್ಪಳ  04 : ಸರ್ಕಾರದಿಂದ ನೆಡೆಯುವ ಸಭೆ ಸಮಾರಂಭಗಳಲ್ಲಿ ಸಿರಿಧಾನ್ಯ ಖಾದ್ಯಗಳನ್ನು ಬಳಕೆ ಮಾಡುವಂತೆ ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಹೇಳಿದರು. 

ಅವರು ಬುಧವಾರ ನಗರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಕೃಷಿ ಇಲಾಖೆ ಹಾಗೂ ಐ ಸಿ ಎ ಆರ್ ಕೃಷಿ ವಿಜ್ಞಾನ ಕೇಂದ್ರ ಕೊಪ್ಪಳ ವತಿಯಿಂದ ಆಯೋಜಿಸಲಾಗಿದ್ದ “ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ'' ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.ಸಿರಿಧಾನ್ಯದ ಉತ್ಪನ್ನಗಳನ್ನು ಅಂಗನವಾಡಿ ಮತ್ತು ಶಾಲೆಗಳ ಆಹಾರದ ಮೆನುಗಳಲ್ಲಿ ಸೇರಿಸಬೇಕು ಸಿರಿಧಾನ್ಯ ಬಳಕೆಯಿಂದ ಮಕ್ಕಳಿಗೆ ಮತ್ತು ತಾಯಂದಿರ ಆರೋಗ್ಯ ವೃದ್ಧಿಯಾಗುತ್ತದೆ. ಸಿರಿಧಾನ್ಯಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಹೃದಯ ಆರೋಗ್ಯ, ಮೆದುಮೇಹ ನಿಯಂತ್ರಣ ಮತ್ತು ತೂಕ ಸಮತೋಲನಕ್ಕೆ ಸಹಾಯ ಮಾಡುತ್ತವೆ. ಈ ಆಹಾರಗಳ ಉಪಯುಕ್ತತೆ ಬಗ್ಗೆ ರೀತಿಯ ಸ್ಪರ್ಧೆಗಳು ನಮ್ಮ ಪಾರಂಪರಿಕ ಆಹಾರ ಪದ್ಧತಿಗಳನ್ನು ಮತ್ತೆ ಜನಪ್ರಿಯಗೊಳಿಸಲು ಸಹಾಯ ಮಾಡುತ್ತವೆ. ಈ ಕಾರ್ಯಕ್ರಮದಿಂದ ಜನರು ತಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹವಾಗುತ್ತದೆ. ಈ ಆಹಾರಗಳ ಉಪಯಕ್ತತೆ ಬಗ್ಗೆ ಸಾರ್ವಜನಿಕರಿಗೆ ತಿಳಿಸುವುದು ಅತೀ ಅವಶ್ಯಕವಾಗಿದೆ ಎಂದು ತಿಳಿಸಿದರು.ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್ ಅವರು, ಸಿರಿಧಾನ್ಯಗಳ ಸಂಸ್ಕರಣೆ, ಬ್ರಾಂಡಿಂಗ್, ಪ್ಯಾಕಿಂಗ್ಗಳನ್ನು ಎಸ್‌.ಹೆಚ್‌.ಜಿ ಹಾಗೂ ಎಫ್‌.ಪಿ.ಓ.ಗಳ ಮೂಲಕ ಬೆಳೆಸುವುದು ಮತ್ತು ಮಾಡಿಸುವುದರ ಬಗ್ಗೆ ತಿಳಿಸಿದರು. 

ಸ್ಪರ್ಧೆಯಲ್ಲಿ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕಾರಟಗಿ ಹಾಗೂ ಗಂಗಾವತಿಯ ವಿವಿಧ ಗ್ರಾಮಗಳಿಂದ ಒಟ್ಟು 50 ಜನ ಮಹಿಳೆಯರು ಭಾಗವಹಿಸಿ ನವಣೆ, ಸಜ್ಜೆ, ಹಾರಕ, ಬರಗು, ಸಾಮೆ, ಕುಸುಬೆ, ಅಗಸೆ ಮುಂತಾದ ಧಾನ್ಯಗಳಿಂದ ಒಟ್ಟು 106 ತರಹದ ಖಾದ್ಯಗಳನ್ನು ಪ್ರದರ್ಶಿಸಿದರು. ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ತಿನಿಸುಗಳ ತೀರ​‍್ುಗಾರರಾಗಿ ಡಾ. ಕವಿತಾ, ಡಾ. ರಾಧಾ, ಡಾ. ರೇವತಿ, ಡಾ.ರಾಘವೇಂದ್ರ ಎಲಿಗಾರ ವಿಜ್ಞಾನಿಗಳು ಭಾಗವಹಿಸಿದರು.ಫಲಿತಾಂಶ: ಸಿರಿಧಾನ್ಯ ಖಾರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸುಖಿರಾಣಿ ಕೊಪ್ಪಳ, ದ್ವೀತಿಯ ಸ್ಥಾನವನ್ನು ಸಹನಾ ಮೇವುಂಡಿ, ತೃತೀಯ ಸ್ಥಾನವನ್ನು ಹುಲಿಗೆಮ್ಮ ಕಾಂಬಳೆ ಮುನಿರಾಬಾದ್ ಇವರು ಪಡೆದರು. ಸಿರಿಧಾನ್ಯ ಸಿಹಿ ವಿಭಾಗದಲ್ಲಿ ಪ್ರಥಮ ಸ್ಥಾನ ಸೌಮ್ಯ ಪಾಟೀಲ್ ಯತ್ನಟ್ಟಿ, ದ್ವೀತಿಯ ಸ್ಥಾನ ಕೊಟ್ರಮ್ಮ ಹಿಡಿಕಿಮಠ ಮೈನಳ್ಳಿ ಹಾಗೂ ತೃತೀಯ ಸ್ಥಾನವನ್ನು ಜಯಶ್ರೀ ಶಶಿಮಠ ಸಿದ್ದಾಪೂರ ಪಡೆದರು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ದೆಯ ವಿಭಾಗದಲ್ಲಿ ಪ್ರಥಮ ಸ್ಥಾನ ಸುಮಂಗಲಾ ಬಂಡಿ ಹೊಸಲಿಂಗಪುರ, ದ್ವೀತಿಯ ಸ್ಥಾನ ವಿಜಯಲಕ್ಷ್ಮೀ ಮುದುಗಲ್ ಕೊಪ್ಪಳ ಹಾಗೂ ತೃತೀಯ ಸ್ಥಾನ ಶಿವಲಿಲಾ ಹುರಕಡ್ಲಿ ಕಾರಟಗಿ ಇವರು ಪಡೆದುಕೊಂಡರು. 

ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಶಶಿಕಲಾ, ಸಹಾಯಕ ಕೃಷಿ ನಿರ್ದೇಶಕ ಜೀವನಸಾಬ ಹಾಗೂ ಅಜ್ಮೀರ ಅಲಿ, ಎಇಸಿ ವಾಮನಮೂರ್ತಿ, ಕೃಷಿ ಅಧಿಕಾರಿಗಳಾದ ಯೋಗೇಶ, ಪ್ರಕಾಶ ಚವಡಿ, ಎಂ.ಎಂ ಹಸನ್, ಮೊಹ್ಮದ್ ಗೇಸುದರಾಜ, ಸ್ಮೀತಾ ಹಾಗೂ ಜ್ಯೋತಿ ಸೇರಿದಂತೆ ಇಲಾಖೆ ಸಿಬ್ಬಂದಿ ಮತ್ತಿತರರಿದ್ದರು.