ಮೇಡ್ ಇನ್ ಇಂಡಿಯಾ ವಸ್ತುಗಳನ್ನು ಬಳಸಿ: ಶಾಸಕ ಸಿದ್ದು ಸವದಿ
Use Made in India products: MLA Siddu Savadi
ಮೇಡ್ ಇನ್ ಇಂಡಿಯಾ ವಸ್ತುಗಳನ್ನು ಬಳಸಿ: ಶಾಸಕ ಸಿದ್ದು ಸವದಿ
ರಬಕವಿ-ಬನಹಟ್ಟಿ 14: ದೇಶದ ನಾಗರಿಕರು ಭಾರತ ದೇಶದಲ್ಲಿ ತಯಾರಾದ ಉತ್ಪನ್ನಗಳನ್ನು ಬಳಸಿ, ಭಾರತೀಯ ಉತ್ಪಾದಕರಿಗೆ ಪ್ರೋತ್ಸಾಹ ನೀಡಬೇಕೆಂದು ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ಬನಹಟ್ಟಿಯ ಬಿಜೆಪಿ ಕಾರ್ಯಾಲಯದಲ್ಲಿ ಆತ್ಮ ನಿರ್ಭರ ಭಾರತ- ಸಂಕಲ್ಪ ಅಭಿಯಾನ ಕುರಿತು ಮಾತನಾಡಿ, ಸ್ಥಳೀಯರೇ ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವುದರ ಮೂಲಕ ದೇಶದ ಆರ್ಥಿಕ ಸ್ಥಿತಿ ಮತ್ತು ಸಾಂಸ್ಕೃತಿಕತೆಗೆ ಶಕ್ತಿ ತುಂಬುತ್ತದೆ ಮತ್ತು ಸ್ವದೇಶಿ ಹಾಗೂ ನಮ್ಮಲ್ಲಿಯ ಉತ್ಪನ್ನ ಎಂಬ ಭಾವ ಬರುತ್ತದೆ. ವಿದೇಶದಲ್ಲಿ ಉತ್ಪನ್ನವಾದಂತಹ ವಸ್ತುಗಳನ್ನು ಬಹಿಸ್ಕರಿಸಿ. ನಮ್ಮ ದೇಶದಲ್ಲಿ ತಯಾರಾದ ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ವಸ್ತುಗಳನ್ನು ಮಾತ್ರ ಕೊಂಡುಕೊಳ್ಳುವುದರ ಬಗ್ಗೆ ಜಾಗೃತ ಮೂಡಿಸಬೇಕು ಎಂದರು.
ಬಿಜೆಪಿ ನಗರ ಘಟಕ ಅಧ್ಯಕ್ಷ ಶ್ರೀಶೈಲ ಬೀಳಗಿ, ಗ್ರಾಮೀಣ ಘಟಕದ ಸುರೇಶ ಅಕಿವಾಟ, ಪಿಕೆಪಿಎಸ್ ನಿರ್ದೇಶಕ ಆನಂದ ಕಂಪು, ಶಂಕರ ಹುನ್ನೂರ, ರವಿ ಕೋರ್ತಿ, ನಿಂಗರಾಜ ನಾಯಕ, ಪ್ರವೀಣ ಧಬಾಡಿ ಸೇರಿದಂತೆ ಅನೇಕರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 