ಸಂಭ್ರಮದ ಉರುಸ್ ; ಹಿಂದೂ-ಮುಸ್ಲಿಂ ರಿಂದ ಪ್ರಾರ್ಥನೆ

ಸಂಭ್ರಮದ ಉರುಸ್ ; ಹಿಂದೂ-ಮುಸ್ಲಿಂ ರಿಂದ ಪ್ರಾರ್ಥನೆ Urus of celebration; prayers from Hindu-Muslims

ಲೋಕದರ್ಶನ ವರದಿ 

ಹೂವಿನಹಡಗಲಿ 8:   ಹಿಂದೂ-ಮುಸ್ಲಿಂ ಭಾವೈಕ್ಯತ ಸಂಕೇತವಾಗಿರುವ ವಿಜಯನಗರ ಜಿಲ್ಲೆ ಹೂವಿನಹಡಗಲಿಪಟ್ಟಣದ ಹಜರತ್ ರಾಜಾಬಾಗ್ ಸವಾರ್ (ಯಮನೂರು ಸ್ವಾಮಿ) ದರ್ಗಾದಲ್ಲಿ ಭಾನುವಾರ ವಿಜೃಂಭಣೆಯ ಉರುಸ್ ಕಾರ್ಯಕ್ರಮ ಜರುಗಿತು.ವಂಶಪಾರಂಪರ್ಯ ಮುಜಾವರರು ಬೆಳಗಿನಜಾವ ದರ್ಗಾ ಕಟ್ಟೆಯ ಮೇಲೆ ನೀರಿನಲ್ಲಿ ದೀಪ ಬೆಳಗಿಸಿದರು. ಪವಾಡ ರೀತಿಯಲ್ಲಿ ನಡೆದ ಗಂಧ ಮಹೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಬಳಿಕ ಉರುಸು ಆಚರಣೆ ಪ್ರಾರಂಭವಾಯಿತು. ಬೆಳಿಗ್ಗೆಯಿಂದಲೇ ಹಿಂದೂ ಮುಸ್ಲಿಮರು ಪಾದಯಾತ್ರೆ ಮೂಲಕ ಏಕಕಾಲಕ್ಕೆ ದರ್ಗಾಕ್ಕೆ ತೆರಳಿ ಪೂಜೆ, ಪ್ರಾರ್ಥನೆ ಸಲ್ಲಿಸಿ ಭಾವೈಕ್ಯ ಮೆರೆದರು.

ವಿಜಯನಗರ,  ಬಳ್ಳಾರಿ ಜಿಲ್ಲೆ ಸೇರಿದಂತೆ ನೆರೆಯ ದಾವಣಗೆರೆ, ಮುಂಡರಗಿ, ಗದಗ, ಹಾವೇರಿ ಜಿಲ್ಲೆಗಳ ಅಪಾರ ಭಕ್ತರು ಪಾಲ್ಗೊಂಡಿದ್ದರು. ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿ ಭಕ್ತರು ದೀಡು ನಮಸ್ಕಾರ, ಕೊಬ್ಬರಿ ಉಪ್ಪು ಸುಡುವುದು, ಸಕ್ಕರೆ ಅರ​‍್ಿಸುವ ಹರಕೆಗಳನ್ನು ತೀರಿಸಿದರು.ಶನಿವಾರ ರಾತ್ರಿ ಬಸವಕಲ್ಯಾಣದ ಹಜರತ್ ಉಲ್  ಹಸನ್ ಜಹಗೀರ್ದಾರ್,ಬೆಳಗಟ್ಟಿ ಸೈಹದ್ ಶಾಹ ಅನ್ವರ್ ಭಾಷ, ಗವಿಮಠದ ಹಿರಿಶಾಂತವೀರ ಸ್ವಾಮೀಜಿ,  ಕೊಂಬಳಿ ಚೌಕಿಮಠದ ಗಾಡಿ ತಾತಾ, ಶ್ರೀರಾಮ ದೇವಸ್ಥಾನದ ಧರ್ಮದರ್ಶಿ ರಾಕೇಶಯ್ಯ  ಸಾನ್ನಿಧ್ಯದಲ್ಲಿ ಶಾಸಕ ಎಲ್‌.ಕೃಷ್ಣನಾಯಕ ಗಂಧ ಮಹೋತ್ಸವ ಮೆರವಣಿಗೆಗೆ ಚಾಲನೆ ನೀಡಿದರು. 

ಪುರಸಭೆ ಅಧ್ಯಕ್ಷೆ ಜಮಾಲಬಿ, ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ , ಉರುಸು ಕಮಿಟಿ ಅಧ್ಯಕ್ಷ ಶಫಿವುಲ್ಲಾ , ಅಂಜುಮಾನ್ ಕಮಿಟಿ ಸದಸ್ಯರಾದಕಡ್ಲಿಗೌಸ್ ಮೊಹಿದ್ದೀನ್, ಮುಲ್ಲಾ ಖಾಜಾ ಹುಸೇನ್, ಎಂ.ಗೂಡು ಸಾಬ್, ಬಾವಜಿ ಫಪುರ ಸಾಬ್, ನಾಧಪ್ ಕಮಿಟಿ ಅದ್ಯಕ್ಷ ಕೊಂಬಳಿ ಹುಸೇನ್ ಸಾಬ್, ವಾರದಗೌಸ ಮೊಹಿದ್ದೀನ್‌. ಮಂಜುನಾಥ ಜೈನ್, ಬಿಚ್ಚುಗತಿ ಬುಡೇನ್, ಶಿವರಾಜ, ಕೆ.ಪುತ್ರೇಶ, ನಜೀರ್ ಅಹಮದ್ ಇತರರಿದ್ದರು.ಹಜರತ್ ತಾಜುದ್ದೀನ್ ಬಾಬಾ (ಯಮನೂರು ಸ್ವಾಮಿ) ಅವರು ಹಿಂದೆ ಹುಲಿ ಸವಾರಿ ಮಾಡುತ್ತಾ ನಾಡಿನಲ್ಲಿ ’ಸೌಹಾರ್ದ ಯಾತ್ರೆ’ ಕೈಗೊಂಡಿದ್ದ ವೇಳೆ ಹೂವಿನಹಡಗಲಿಗೆ ಬಂದು ತಂಗಿದ್ದರು ಎಂಬ ಪ್ರತೀತಿ ಇದೆ. ಆ ಸಂತರ ಸ್ಮರಣೆಗಾಗಿ ನೂರಾರು ವರ್ಷಗಳಿಂದ ಇಲ್ಲಿ ಉರುಸ್ ಆಚರಿಸಿಕೊಂಡು ಬರಲಾಗುತ್ತಿದೆ