ರಾಜಾಬಾಗ್ ಸವಾರ ದರ್ಗಾದ ಉರುಸ್ ಆಚರಣೆ ಯಶಸ್ವಿ
ಕೊಪ್ಪಳ 20: ನಗರದ ಪ್ರಮುಖ ಜವಾಹರ್ ರಸ್ತೆಯಲ್ಲಿರುವ ಹಳೆಯ ಪುರಾತನ ಕಾಲದ ಐತಿಹಾಸಿಕ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಪ್ರತೀಕ ಹಜರತ್ ರಾಜಾ ಬಾಗ್ ಸವಾರ್ ದರ್ಗಾ ದ ಉರಸ್ ಆಚರಣೆ ಬುಧವಾರದಂದು ಸಡಗರ ಸಂಭ್ರಮದಿಂದ ಧಾರ್ಮಿಕ ವಿಧಿ ವಿಧಾನ ದೊಂದಿಗೆ ಯಶಸ್ವಿಯಾಗಿ ದರ್ಗಾ ಆಡಳಿತ ಮಂಡಳಿ ಅಧ್ಯಕ್ಷರಾದ ಮೌಲಾ ಹುಸೇನ್ ಜಮೆದಾರ್ ರವರ ನೇತೃತ್ವದಲ್ಲಿ ಆಚರಣೆಗೊಂಡಿತು, ಈ ಸಂದರ್ಭ ದರ್ಗಾದ ಮುಜಾವರ್ ಮರದಾನ್ ಅಲಿ ಮುನ್ನ ರವರು ಭಕ್ತ ಸಮೂಹಗಳ ಪರವಾಗಿ ದರ್ಗಾಕ್ಕೆ ಆಗಮಿಸಿದ ಭಕ್ತಾದಿಗಳಿಗೆ ವಿಶೇಷ ಪ್ರಾರ್ಥನೆ ನಡೆಸಿಕೊಟ್ಟರು