ನಾಳೆ ಕೊಪ್ಪಳದಲ್ಲಿ ಉರ್ದು ಸಹಪಾಠಿಗಳ ಸ್ನೇಹ ಮಿಲನ ಹಾಗೂ ಗುರು ವಂದನ ಕಾರ್ಯಕ್ರಮ
Urdu classmates' friendly get-together and Guru Vandana program in Koppal tomorrow
ನಾಳೆ ಕೊಪ್ಪಳದಲ್ಲಿ ಉರ್ದು ಸಹಪಾಠಿಗಳ ಸ್ನೇಹ ಮಿಲನ ಹಾಗೂ ಗುರು ವಂದನ ಕಾರ್ಯಕ್ರಮ
ಕೊಪ್ಪಳ 12 : ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಉರ್ದು ಪ್ರೌಢ ಶಾಲಾ ವಿಭಾಗದ 1980-81ರ ಸಾಲಿನ ಉರ್ದು ಎಸ್.ಎಸ್.ಎಲ್.ಸಿ ಬ್ಯಾಚ್ ಸಹಪಾಠಿಗಳ ಸ್ನೇಹ ಮಿಲನ ಹಾಗೂ ವಿದ್ಯಾಭ್ಯಾಸ ಕಲಿಸಿದ ಗುರುಗಳಿಗೆ ಗುರು ವಂದನಾ ಕಾರ್ಯಕ್ರಮ ನಗರದ ಜಿಲ್ಲಾ ಸರಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ದಿ. 14ರ ರವಿವಾರ ಬೆಳಿಗ್ಗೆ 10.30 ಗಂಟೆಗೆ ಜರುಗಲಿದೆ. ಕಾರ್ಯಕ್ರಮದಲ್ಲಿ ಅಂದಿನ ಗುರುಗಳಾದ ಹಾಲಿ ಮೈಸೂರು ನಿವಾಸಿ ನಿವೃತ್ತ ಗಣಿತ ಶಿಕ್ಷಕರಾದ ರಹಮತುಲ್ಲಾ ಷರೀಫ್ ಹಾಗೂ ಹಾಲಿ ಚಿತ್ರದುರ್ಗದ ನಿವಾಸಿ ನೀವೃತ್ತ ವಿಜ್ಞಾನ ಶಿಕ್ಷಕ ಸೈಯದ್ ಸಾದತುಲ್ಲ ರವರಿಗೆ ಗುರು ವಂದನಾ ಹಾಗೂ ವಿಶೇಷ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.ಸದ್ರಿ ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತ ಅತಿಥಿಗಳಾಗಿ ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್, ಸರ್ಕಾರಿ ಉರ್ದು ಪ್ರೌಢಶಾಲೆಯ ಉಪ ಪ್ರಚಾರ್ಯರಾದ ಎಂ.ಎ. ಖೈಯುಮ್, ಕೊಪ್ಪಳದ ಉರ್ದು ಸಾಹಿತಿ ನಿವೃತ್ತ ಪ್ರಾಧ್ಯಾಪಕ ಅನ್ವರ್ ಹುಸೇನ್, ವಿಜಯನಗರ ಜಿಲ್ಲೆಯ ಹಿರಿಯ ಸಮಾಜ ಸೇವಕ ಉರ್ದು ಸಾಹಿತಿ ಶಬ್ಬೀರ್ ಅಹ್ಮದ್, ಕೊಪ್ಪಳದ ಹಿರಿಯ ಸಮಾಜ ಸೇವಕ ಎಂ.ಎ. ಮಾಜಿದ ಸಿದ್ದೀಕಿ, ಕಾನೂನು ಮಾಪನ ಇಲಾಖೆಯ ನೀರೀಕ್ಷಕ ಎಂ.ಬದಿಯುದ್ದೀನ್ ಅಹಮದ್ ನವೀದ, ಉರ್ದು ಸಾಹಿತಿ ಪ್ರಾಧ್ಯಾಪಕ ಮೌಲಾನ ಮೊಹಮ್ಮದ್ ಅಲಿ ಹಿಮಾಹಿತಿ, ಉರ್ದು ಕವಿ ಎಂ.ವಿಜಾರತ್ ಅಲಿ, ಉದ್ಯಮಿಗಳಾದ ರಿಯಾಜುದ್ದೀನ್ ಅಹಮದ್ ಖಲ್ಲೆದಾರ್, ಜಾಕಿರ್ ಹುಸೇನ್ ಕುಷ್ಟಗಿ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ.
1980-81ರ ಸಾಲಿನ ಉರ್ದು ಸಹಪಾಠಿಗಳಾದ ಈಗಿನ ಕರ್ನಾಟಕ ಕುಡಿಯುವ ನೀರು ಸರಬರಾಜು ಇಲಾಖೆಯ ಮುಖ್ಯ ಅಭಿಯಂತರಾದ ಏಜಾಜ ಹುಸೇನ್, ಉದ್ಯಮಿ ಮೈಸೂರಿನ ಸಮಾಜ ಸೇವಕರಾದ ಎಂ.ತಾಹಿರ್ ಅಲಿ, ಐಟಿಐ ಕಾಲೇಜು ಮೈಸೂರಿನ ನಿವೃತ್ತ ಪ್ರಾಚಾರ್ಯರಾದ ರಫೀಕ್ ಅಹಮದ್ ಬಿಜಾಪುರ್, ವಿಜಯಪುರದ ನಿವೃತ್ತ ಉಪನ್ಯಾಸಕಿ ರುಕ್ಸಾನಾ ಬೇಗಮ್ ಮನಿಯಾರ್, ಕಲಬುರ್ಗಿಯ ಪ್ರೌಢಶಾಲೆಯ ನಿವೃತ್ತ ಶಿಕ್ಷಕಿ ಜೈಬುನ್ನಿಸಾ ಪಟೇಲ್, ನಿವೃತ್ತ ಶಿಕ್ಷಕರಾದ ಶಮೀಮುನ್ನಿಸಾ ಬೇಗಂ ಹನಗುಂದ್, ಸೈಯದ್ ಗೌಸ್ ಪಾಷಾ ಖಾಜಿ, ಜೀನತ್ ಬೇಗಮ್, ಸಿ.ಆರಿ್ಪ.ಎಫ್ ನಿವೃತ್ತ ನೀರೀಕ್ಷಕ ಸೈಯದ್ ಸಲೀಮುದ್ದೀನ್, ಇರಕಲ್ಗಡ ಪ್ರೌಢಶಾಲೆಯ ಸಹಶಿಕ್ಷಕಿ ಸಲ್ಮಾ ಜಹಾನ್, ಸಾರಿಗೆ ಸಂಸ್ಥೆಯ ನಿವೃತ್ತ ನೌಕರ ಅಬ್ದುಲ್ ರಜಾಕ್ ಸೌದಾಗರ್, ಕೊಪ್ಪಳದ ಖಲೀಲ ಅಹ್ಮದ್, ಯೂಸೂಫ್ ಅಹಮದ್ ಮನಿಯಾರ್, ಶೇಕ್ ಅಬ್ದುಲ್ಲಾ, ರಾಯಚೂರಿನ ಅಬ್ದುಲ್ ಲತೀಫ್, ಬೆಂಗಳೂರಿನ ಅಫೀಫಾ ಕೀಲ್ಲೇದಾರ್, ಧಾರವಾಡದ ಜಕೀಯಾ ಸುಲ್ತಾನ, ಕೊಪ್ಪಳದ ಬದ್ರುನ್ನಿಸಾ ಬೇಗಠ, ನಫೀಸ್ ಫಾತಿಮಾ, ಸಿಂಧನೂರಿನ ಖಮರ್ ಸುಲ್ತಾನ, ಷಮ್ಸ್ ಬೇಗಂ, ಗಂಗಾವತಿಯ ಮುನವರ್ ಹುಸೇನ್, ಕೊಪ್ಪಳದ ಸಲ್ಮಾ ಸುಲ್ತಾನ ಸಿದ್ದಿಕೀ ರವರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾರ್ಯಕ್ರಮ ಸಂಘಟಕ ಸಹಪಾಠಿ ಹಾಗೂ ಹಿರಿಯ ಪತ್ರಕರ್ತ ಎಂ.ಸಾಧಿಕ್ ಅಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 