ಹೊಸಪೇಟೆ ಜು.2 : ಹೊಸಪೇಟೆ ನಗರಾಭಿವೃದ್ಧಿ ಪ್ರಾದಿಕಾರದ ಸೀಮಿತ ಸಂಪನ್ಮೂಲ, ದಾನಿಗಳು, ಗಣಿ ಮಾಲಿಕರು, ವಾಣಿಜ್ಯೋಧ್ಯಮಿಗಳು, ಸ್ಥಳೀಯ ಸಂಸ್ಥೆಗಳ ಸಹಕಾರ ಸೇರಿದಂತೆ ಪ್ರತಿಯೊಬ್ಬರ ಸಹಕಾರ ದಿಂದ ಹೊಸಪೇಟೆ ಮಾದರಿ ನಗರವಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ ಹೇಳಿದರು.
ಗುರುವಾರ ಸ್ಥಳೀಯ ಪ್ರಾಧಿಕಾರದ ಕಚೇರಿಯಲ್ಲಿ ಹೊಸಪೇಟೆ ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಗಳು ಹಾಗೂ ಸದಸ್ಯರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಸ್ವಚ್ಛತೆ, ಹಸಿರೀಕರಣ ಅತ್ಯಂತ ತುತರ್ು ಅಗತ್ಯವಾಗಿದ್ದು ಜೊತೆ ಜೊತೆಯಲ್ಲಿ ಸಮಗ್ರ ದೃಷ್ಟಿಕೋನದಲ್ಲಿ ಅಭಿವೃದ್ಧಿ ಪಡಿಸಬೇಕಾಗಿದೆ, ವಾಹನ ನಿಲುಗಡೆ, ಮುಖ್ಯ ರಸ್ತೆಗಳ ಅಭಿವೃದ್ಧಿ, ಬೀದಿ ಬದಿ ವ್ಯಾಪಾರ ಸೇರಿದಂತೆ ಪ್ರಮುಖ ಆದ್ಯತೆಯಲ್ಲಿ ಕಾರ್ಯನಿರ್ವಹಿಸಬೇಕಾಗಿದ್ದು ಪ್ರಾಧಿಕಾರದಲ್ಲಿ ಸಂಪನ್ಮೂಲಗಳನ್ನು ನೋಡಿಕೊಂಡು ದಾನಿಗಳು, ಗಣಿ ಮಾಲಿಕರು ಸಚಿವರಾದ ಆನಂದಸಿಂಗ ಹಾಗೂ ಸಾರ್ವಜನಿಕ ವಲಯದ ಸಲಹೆಯಂತೆ ಕಾರ್ಯನಿರ್ವಹಿಸುವ ಮೂಲಕ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಆಯಾಮ ನೀಡಲು ಶ್ರಮಿಸುವುದಾಗಿ ಅಲ್ಲದೆ ಈ ನಿಟ್ಟಿನಲ್ಲಿ ಜನಾಭಿಪ್ರಾಯ ಸಂಗ್ರಹಣೆಯೊಂದಿಗೆ ಕಾಯರ್ೋನ್ಮಖವಾಗುವುದಾಗಿ ತಿಳಿಸಿದರು.
ವೇದಿಕೆಯ ಪ್ರಧಾನ ಕಾರ್ಯದಶರ್ಿ ರಮೇಶ ದೇಶಪಾಂಡೆ ಹೊಸಪೇಟೆ ನಗರಾಭಿವೃದ್ಧಿಯಲ್ಲಿ ವೇದಿಕೆಯ ಅನಿಸಿಕೆಯ ಸಂಗ್ರಹಹೊತ್ತಿಗೆ ನೀಡಿ ಮಾತನಾಡಿ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದವರಿಗೆ ಗೌರವ ದೊರೆಯುತ್ತದೆ ಎಂಬುವುದಕ್ಕೆ ಅಶೋಕ ಜೀರೆಯವರು ಉತ್ತಮ ಉದಾಹರಣೆ ಎಂದು ಅವರ ಕಾರ್ಯ ಸುಲಲಿತವಾಗಲು ಅನುಕೂಲವಾಗಲೇಂದು ಸದಸ್ಯರುಗಳ ಅಭಿಪ್ರಾಯ ಸಂಗ್ರಹ ನೀಡಿರುವುದಾಗಿ ತಿಳಿಸಿದರು.
ಬ್ರಿಷ್ಠೇಶ್ಭಟ್ ಅಭಿನಂಧನಾ ಪತ್ರ ನೀಡಿದರು, ಅನಂತ ಜೋಶಿ ಸದಸ್ಯರುಗಳ ಅಭಿಪ್ರಾಯ ಸಂಗ್ರಹ ನೂತನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ತಿಳಿಸಿದರು. ಸಭೆಯಲ್ಲಿ ಸತೀಶ್ರಾವ್ ಪಾವನಜೆ, ಸತ್ಯನಾರಾಯಣ, ಶ್ರೀಮತಿ ಪ್ರಮೀಳಾ, ಶಂಕರಾಚಾರಿ, ನರಸಿಂಹ ಶಮರ್ಾ, ಬಸವರಾಜ್. ದಶರಥರಾಮ್ ರಾಮಚಂದ್ರ ಪ್ರಸಾದ್ ಮತ್ತು ಸಂಸ್ಕೃತ ಗುರುಗಳಾದ ಗಂಗೂರು ರಂಗನಾಥ ಆಚಾರ್ಯ ಇದ್ದರು