ವಿದ್ಯಾರ್ಥಿಗಳು,ಯುವಕರಿಗೆ ಅರ್ಬನ್ ನಕ್ಸಲೈಟ್ ಎಂಬ ಪಟ್ಟ ಕಟ್ಟಿದ್ದೀರಿ : ಡಿ.ಕೆ.ಶಿವಕುಮಾರ್ ಲೇವಡಿ

ಬೆಂಗಳೂರು,ಡಿ 28, ಸಣ್ಣ ರಾಜ್ಯವಾದ ಜಾರ್ಖಂಡ್ 5 ಹಂತಗಳಲ್ಲಿ ಚುನಾವಣೆ ನಡೆಸಿದರು.ಪ್ರಧಾನಿ ಹಾಗೂ ಬಿಜೆಪಿ ಘಟನಾನುಘಟಿ ನಾಯಕರು ಆರೇಳು ಪ್ರಚಾರ ಸಭೆ ನಡೆಸಿದರು.ಆದರೆ ಜನ ಬಿಜೆಪಿಯನ್ನು ಬೆಂಬಲಿಸಲಿಲ್ಲ. ಬಿಜೆಪಿಯ ಅಂತ್ಯದ ಆರಂಭವಾಗಿದೆ.ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಜನ ಮನ್ನಣೆ ನೀಡಲಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ. ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಾಂಗ್ರೆಸ್ ಪಕ್ಷದ 134ನೇ ಸಂಸ್ಥಾಪ ನಾ ದಿನಾಚರಣೆಯಲ್ಲಿ ಹಾಗೂ ಸದ್ಬಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ಯುವಕರು, ವಿದ್ಯಾರ್ಥಿಗಳಿಗೆ ಅರ್ಬನ್ ನಕ್ಸಲೈಟ್ಸ್ ಎಂದು ಹಣೆಪಟ್ಟಿಕಟ್ಟಿದ್ದೀರಿ. ನಮ್ಮ ಹೋರಾಟ ನಾವು ಮಾಡುತ್ತೇವೆ.ಬಿಜೆಪಿಗೆ ಲೋಕಸಭಾ ಚುನಾವಣೆ ಯಲ್ಲಿ 300 ಸ್ಥಾನ ಗೆಲ್ಲಿಸಿದರೆಂದು ಕಾಂಗ್ರೆಸ್ ಪಕ್ಷದವರು ಹೆದರಬೇಕಿಲ್ಲ.ನಮ್ಮ ಶಕ್ತಿ ತೋರಿಸ ಬೇಕಾಗಿದೆ. ಜಾರ್ಖಂಡ್ ನಂತಹ ಚಿಕ್ಕ ರಾಜ್ಯವನ್ನು ಐದು ಹಂತ ದಲ್ಲಿ ಚುನಾವಣೆ ನಡೆಸಿದರು.ಪ್ರಧಾನಿ ಮೋದಿ ಅವರು ಆರೇಳು ಪ್ರಚಾರ ಸಭೆ ನಡೆಸಿದರು.ಆದರೆ ಜನ ಬೆಂಬಲಿಸಲಿಲ್ಲ.ಬಿಜೆಪಿಯ ಅಂತ್ಯದ ಆರಂಭವಾಗಿದೆ. ನಮಗೆ ಮತ್ತೆ ಜನ ಮನ್ನಣೆ ಸಿಗಲಿದೆ.ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರು ಕಟ್ಟಿದ ದೇಶ ಇದು.ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಜಾರಿಗೆ ತಂದಿರುವ ಕೆಲ ಯೋಜನೆಗಳ ಹೆಸರನ್ನು ಬದಲಿಸುವ ಕೆಲಸ ಮಾಡಿದ್ದಾರೆ.ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನಿನ ವಿರುದ್ಧ ಯುವಕರು,ನಾಗರಿಕರು ಹೋರಾಟಮಾಡುತ್ತಿದ್ದಾರೆ.ಅವರ ಕೈ ಬಲಪಡಿಸುವ ಕಾರ್ಯ ಮಾಡೋಣ,ನಿಮ್ಮೆಲ್ಲರ ಆಶೀರ್ವಾದ ನಮಗೆ ಎಂದು ಅವರು ಕಾರ್ಯಕರ್ತರಿಗೆ ಮನವಿ ಮಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಪಕ್ಷ 135ನೇ ವರ್ಷಕ್ಕೆ ಕಾಲಿಡುತ್ತಿದೆ.ಈ ಸಂದರ್ಭ ನಾವೆಲ್ಲಾ ಇದರ ಉದ್ದೇಶ ಆಶಯ ಈಡೇರಿಸುವ ಸಂಕಲ್ಪ ಮಾಡಬೇಕು.ದೇಶದಲ್ಲಿ ಇಷ್ಟೊಂದು ದೊಡ್ಡ ಪಕ್ಷ ಇನ್ನೊಂದಿಲ್ಲ.ಆರ್ ಎಸ್ ಎಸ್,ಬಿಜೆಪಿ,ಜನಸಂಘ ಗಿರಾಕಿಗಳು ಸ್ವಾತಂತ್ರ್ಯ ಹೋರಾಟದಲ್ಲಿ ಇರಲೇ ಇಲ್ಲ.ದೇಶದಲ್ಲಿ ಸಾಮಾಜಿಕ,ಆರ್ಥಿಕ ಬೆಳವ ಣಿಗೆ ಆಗಿದ್ದರೆ. ಭದ್ರ ಬುನಾದಿ ಹಾಕಿದ್ದರೆ,ರಾಷ್ಟ್ರ ಬಲಿಷ್ಠವಾಗಿದ್ದರೆ ಅದಕ್ಕೆ ಕಾಂಗ್ರೆಸ್ ಪಕ್ಷ ಕಾರಣ ಹೊರತು ಬೇರಾರೂ ಅಲ್ಲ. ನೆಹರು ಅವರ ಮಿಶ್ರ ಆರ್ಥಿಕ ನೀತಿಗೆ ಒತ್ತು ಕೊಟ್ಟಿದ್ದರು ಆದರೆ ಬಿಜೆಪಿ ಅಧಿಕಾರಕ್ಕೆ ಬಂದು ಎಲ್ಲಾ ಸಂಸ್ಥೆಯನ್ನು ಖಾಸಗಿ ಯವರಿಗೆ ಮಾರಾಟ ಮಾಡಿ, ಸಾಮಾಜಿಕ ನ್ಯಾಯಕ್ಕೆ ದೊಡ್ಡ ಕೊಡಲಿ ಪೆಟ್ಟು ಕೊಡುತ್ತಿದ್ದಾರೆ.ಸಂವಿಧಾನವನ್ನು ಶಕ್ತಿಹೀನ ಮಾಡುತ್ತಿದ್ದಾರೆ.ಜಾತ್ಯತೀತ ಶಕ್ತಿ ನಾಶವಾಗುತ್ತಿದೆ.ನಮ್ಮ ದೇಶ ಜಾತ್ಯಾತೀತ ರಾಷ್ಟ್ರವಾಗಬೇಕು.ವೈವಿಧ್ಯತೆಯಲ್ಲಿ ಏಕತೆ ಇರಬೇಕು.ಆದರೆ ಬಿಜೆಪಿಯವರು ಧರ್ಮ, ಜಾತಿ ಹೆಸರಲ್ಲಿ ಒಡೆಯುತ್ತಿದ್ದಾರೆ.ಇದರ ವಿರುದ್ಧ ಕಾಂಗ್ರೆಸ್ ಹೋರಾಡಬೇಕಿದೆ. ಸಂವಿಧಾನದ ರಕ್ಷಣೆ ಆಗಬೇಕು.ಹಿಂದುರಾಷ್ಟ್ರ ಮಾಡಲು ಹೊರಟಿದ್ದಾರೆ.ಇತಿಹಾಸ ತಿರುಚುವುದೇ ಬಿಜೆಪಿ ಕೆಲಸ.ಹೀಗಾಗಿ ದೇಶದ ಯುವಕರಿಗೆ ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿದೆ.ಮೋದಿ ಚೌಕಿದಾರ ಎಂದು ಹೇಳುತ್ತಾರೆ.     ಉಪಚುನಾವಣೆಯಲ್ಲಿ ಯಡಿಯೂರಪ್ಪ 30 ಕೋಟಿ ರೂ.ತಲಾ ಒಂದೊಂದು ಅಭ್ಯರ್ಥಿಗಳಿಗೆ ನೀಡಿದಾಗ ಮೋದಿ ಏಕೆ ಚೌಕಿದಾರಿಕೆ ಮಾಡಿಲ್ಲ.ಇದನ್ನು ನಾವೇ ಪ್ರಶ್ನಿಸಬೇಕಿದೆ.ಬೇರ್ಯಾರೂ ಕೇಳಲ್ಲ.ದೇಶದ ಜನರ ದಾರಿ ತಪ್ಪಿಸುವ ಕಾರ್ಯ ಬಿಜೆಪಿ ನಾಯಕರಿಂದ ಆಗುತ್ತಿದೆ.ಅದನ್ನು ನಾವು ತಡೆಯಬೇಕಿದೆ. ಅಸಲಿ ದೇಶದ ಜಿಡಿಪಿ ಶೇ.2.5 ಕ್ಕೆ ಬಂದಿದೆ.ಮನ ಮೋಹನ್ ಸಿಂಗ್ ಪ್ರಧಾನಿ ಯಾಗಿದ್ದಾಗ ಜಿಡಿಪಿ ಶೇ.8-9 ರವರೆಗೆ ಇತ್ತು.ಉದ್ಯೋಗ ಸೃಷ್ಟಿಸಲಿಲ್ಲ. ಇದ್ದ ಕೆಲಸ ಹೋಗುತ್ತಿದೆ. ಖಾಸಗಿ ಕ್ಷೇತ್ರದ ಕಂಪನಿ,ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಕಡಿಮೆ ಆಗುತ್ತಿದೆ.ನಿಮ್ಮ ಆರ್ಥಿಕ ನೀತಿ ಏನು ಮೋದಿ ಯವರೇ? ಯುವಕರು ಕೆಲಸ ಕೇಳಿದರೆ ಪಕೋಡಾ ಮಾರಿ ಎನ್ನುತ್ತಾರೆ.ಇಂತ ಬಿಜೆಪಿ ಯನ್ನು ಕಿತ್ತೊಗೆಯಬೇಕಿದೆ.ಅದು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ.ಕಳೆದ ಒಂದು ವರ್ಷದಲ್ಲಿ ಐದು ತಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ.ಜನ ಬಿಜೆಪಿ ಮುಕ್ತ ಭಾರತ ಮಾಡಲು ಜನ ತಯಾರಾಗು ತ್ತಿದ್ದಾರೆ.ನಾವು ಸಜ್ಜಾಗಬೇಕು. ರಾಜ್ಯದಲ್ಲಿ ಕೂಡ ಜನಾದೇಶದಿಂದ ಅಧಿಕಾರಕ್ಕೆ ಬಂದಿಲ್ಲ. ಹಿಂದೆಯೂ ಬಹುಮತ ಇರಲಿಲ್ಲ.ಈಗ ಲಜ್ಜೆಗೆಟ್ಟು ನಮ್ಮ ಹಾಗೂ ಜೆಡಿಎಸ್ ಶಾಸಕರ ಸೆಳೆದುಕೊಂಡು ಅಧಿಕಾರಕ್ಕೆ ಬಂದಿದ್ದಾರೆ.ಯಡಿಯೂರಪ್ಪ ಯಾವತ್ತೂ ಮುಂಬಾಗಿಲಿನಿಂದ ಬಂದಿಲ್ಲ. ಹಿಂಬಾಗಿಲಿನಿಂದ ಬಂದ ಗಿರಾಕಿ. ನಾವು ಮತ್ತೆ ಅಧಿ ಕಾರಕ್ಕೆ ಬರುವುದು ಶತಸಿದ್ಧ. ಯುವಕರು ಮೋದಿ ಮರಳುಮಾತಿಗೆ ಬಲಿಯಾಗಿದ್ದಾರೆ.ಇವರಿಗೆ ಮೋದಿ ತಿರುಪತಿ ನಾಮ ಹಾಕಿದ್ದಾರೆ.ಇಂದು ಎನ್ ಆರ್ ಸಿ ವಿರುದ್ಧ ಯುವಕರು ನಡೆಸುತ್ತಿರುವ ಹೋರಾಟ ಇದಕ್ಕೆ ಸಾಕ್ಷಿ.ಜನರಿಗಾಗಿ ಕಾಂಗ್ರೆಸ್ ಬಲಿಷ್ಠ ಆಗಲೇಬೇಕು.ಕಟ್ಟುವ ಸಂಕಲ್ಪ ನಾವು ಮಾಡಬೇಕು.ಅದಕ್ಕಾಗಿ ಸಂಕಲ್ಪ,ನಿರ್ಣಯ ಕೈಗೊಳ್ಳಬೇಕಿದೆ ಎಂದು ಅವರು ತಿಳಿಸಿದರು.ಸಭೆಯನ್ನುದ್ದೇಶಿಸಿ ಆಶಯವ ಭಾಷಣ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ,ದೇಶದಲ್ಲಿ ಯಾವುದೇ ಮಕ್ಕಳು, ಮಹಿಳೆಯರು ಸುರಕ್ಷಿತವಾಗಿ ಲ್ಲ.ದೇಶ ಸುಭದ್ರವಾಗಿಲ್ಲ.ಇವರು ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ.ಸರ್ಕಾರಿ ಪ್ರಾಯೋಜಿತ ಹೋರಾಟಗಳಲ್ಲಿ ಬಲಿಪಶುಗಳ ಹೆಣಗಳ ರಾಶಿ ಮೇಲೆ ಆಡಳಿತ ನೀಡುವ ಸರ್ಕಾರ ಇದ್ದರೆ ಅದು ಬಿಜೆಪಿ ಸರ್ಕಾರ.ಜನಸ್ನೇಹಿ ಸರ್ಕಾರ ಇದಲ್ಲ. ಜನರಿಗೆ ರಕ್ಷಣೆ ಸಿಗುತ್ತಿಲ್ಲ.ಕಾಂಗ್ರೆಸ್ ಮುಕ್ತ ಭಾರತ ಆಗಲ್ಲ.ಜನ ಮಾನಸದಲ್ಲಿ ಕಾಂಗ್ರೆಸ್ ಇದೆ.ಮುಂದೆ ದೇಶ‌ ಬಿಜೆಪಿ ಮುಕ್ತವಾಗಲಿದೆ ಎಂದು ಅವರು ಲೇವಡಿ ಮಾಡಿದರು. ನಿಮ್ಮ ದಾಖಲೆ‌ಕೊಡಿ,ನಿಮ್ಮ ಪೌರತ್ವದ ನಿರ್ಧಾರ ನಾವು ಮಾಡುತ್ತೇವೆ.ಕೇವಲ ಜನರ ಮರಳು ಮಾಡುವ ಮಾತಾಡುವುದಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಸೀಮಿತ ಆಗಿದೆ.ಇಂತಹ ಸರ್ಕಾರದ ಪತನ ಮಾಡಬೇಕಾಗಿದೆ.ಬಿಜೆಪಿಯವರು ಸರ್ಕಾರ ಮಾಡಲು ನಾಲಾಯಕ್ .ರಾಜ್ಯ, ರಾಷ್ಟ್ರದಲ್ಲಿ ಕೋಮುವಾದಿ ಸರ್ಕಾರ ನಡೆಯುತ್ತಿದೆ.ಇಂತ ಸರ್ಕಾರ ಕಿತ್ತು ಹಾಕಬೇಕು.ಜನ,ಯುವಕರು ಸಿಡಿದೆದ್ದರೆ ಜನ ವಿರೋಧಿಗಳನ್ನು ಕಿತ್ತು ಹಾಕುತ್ತಾರೆ.ಇಂತ ಕೆಲಸ ಜನ ಮಾಡುತ್ತಾರೆ.ನಾವು ಜನಜಾಗೃತಿ ಮೂಡಿಸುವ ಕೆಲಸವನ್ನು ಪ್ರತಿನಿತ್ಯ ಮಾಡೋಣ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಅವರು ಕರೆ ಕೊಟ್ಟರು.    ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮಾತನಾಡಿ, ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವ ಕೆಲಸ ಕಾಂಗ್ರೆಸ್ ಮಾಡಿದೆ. ಆರು ವರ್ಷದ ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದಿದೆ.ನಿಮ್ಮ ಆದ್ಯತೆ ಏನು ಎನ್ನುವುದು ಗೊತ್ತಾಗುತ್ತಿಲ್ಲ.ಯುವಕರಿಗೆ ಉದ್ಯೋಗ ಕೊಡ್ತೀರಾ? ಜಾತಿ ವ್ಯವಸ್ಥೆ ದೂರ ಮಾಡ್ತೀರಾ? ಬಡತನ ನಿರ್ಮೂಲನೆ ಮಾಡುತ್ತೀರಾ? ನೀವು ಭ್ರಮೆಯಲ್ಲಿ ಜೀವನ ಆಡಳಿತ ಮಾಡುತ್ತಿದ್ದೀರಾ.ನಿಮ್ಮ ಆದ್ಯತೆ ಮರೆತು ಹೋಗಿದ್ದಾರೆ.ಜನ ಯಾವ ಆಶಯ ದಿಂದ ನಿಮಗೆ ಮತ ನೀಡಿದರೋ,ಇಷ್ಟು ದಿನ ದೇಶ ಹೇಗೆ ಬೆಳೆದು ಬಂತೋ ಅದಕ್ಕೆ ವಿರುದ್ಧವಾಗಿ ಆಡಳಿತ ಮಾಡುತ್ತಿದ್ದೀರಾ.ಜನಪರ ಆಡಳಿತ ನೀಡುವುದನ್ನು ಮೋದಿ ಮರೆತಿದ್ದಾರೆ.ಬಿಜೆಪಿ ದೇಶವನ್ನು ಹಿಂದೂರಾಷ್ಟ್ರ ಮಾಡಲು ಹೊರಟಿದ್ದಾರೆ.ಇದನ್ನು ವಿರೋಧಿಸಿದ ವಿದ್ಯಾರ್ಥಿಗಳಿಗೆ ಹೊಡೆ ದದ್ದು, ಸಾಯಿಸಿದ್ದನ್ನುಇಡೀ ವಿಶ್ವ ನೋಡುತ್ತಿದೆ.ವಿಶ್ವದ ವಿವಿಧ ರಾಷ್ಟ್ರದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಖಂಡಿಸುತ್ತಿದ್ದಾರೆ. ದೇಶ ಬಡತನಕ್ಕೆ ಬಂದಿದೆ.ರೈತ, ಬಡವ ಸಾಯುತ್ತಿದ್ದಾನೆ.ದೇಶವನ್ನು ಅಶಾಂತಿಗೆ ದೂಡಲಾಗುತ್ತಿದೆ.ಜನರ ಆಶಯದಂತೆ ಕಾಂಗ್ರೆಸ್ ಮತ್ತೆ ದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ಧ. ಕೆಲವೇ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ರಾಜ್ಯದಲ್ಲಿ ಇರುವ ಅಧಿಕಾರವೂ ಅಲ್ಲಾಡುತ್ತಿದೆ.ನಮ್ಮ ಮುಕ್ತ ಮಾಡಲು ಹೊರಟು ನೀವೇ ಮುಕ್ತ ಆಗುತ್ತಿದ್ದೀರಿ.ಕಾಂಗ್ರೆಸ್ ಸದೃಢವಾಗಿದೆ. ಪುಟಿದೇಳುವ ಶಕ್ತಿ ಇದೆ. ತಾಳ್ಮೆಯಿಂದ ಇರಬೇಕಾಗಿದ್ದು, ನಮ್ಮಲ್ಲಿ ಅಪಸ್ವರ ಇಲ್ಲದೇ ಪಕ್ಷ ಕಟ್ಟುವ ಕೆಲಸ ಆಗಬೇಕಿದ್ದು, ಅದಕ್ಕೆ ಚಾಲನೆ ಸಿಕ್ಕಿದೆ ಎಂದರು.  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ನಮ್ಮ ಹೋರಾಟದಿಂದ ಪ್ರಜಾಪ್ರಭುತ್ವ ಉಳಿದಿದೆ. ಸ್ವಾತಂತ್ರ್ಯ ಸಿಕ್ಕಿದ್ದೇ ನಮ್ಮಿಂದ.ಇಂದು ಬಿಜೆಪಿ ಜನರನ್ನು ಗೊಂದಲಕ್ಕೆ ಬೀಳಿಸುವ ಕೆಲಸ ಮಾಡುತ್ತಾರೆ.ಐತಿಹಾಸಿಕ ಪುರುಷರ ಪರ ವಿರೋಧ ಮಾತು ಕೇಳಿಬರುತ್ತಿದೆ.ಆದರೆ ಇವರ ಬಳಿ ಹೇಳಿಕೊಳ್ಳುವ ನಾಯಕರಿಲ್ಲ.ಕಾಂಗ್ರೆಸ್ ನಾಯಕರನ್ನು ಹೈಜಾಕ್ ಮಾಡುತ್ತಿದ್ದಾರೆ.ಹಿಂಬಾಗಿಲಿ ನಿಂದ ಅಧಿಕಾರಕ್ಕೆ ಬರುತ್ತಿದ್ದಾರೆ.ಸಂವಿಧಾನ ಉಳಿಸುವ ನಮ್ಮ ಹೋರಾಟ ಬಲಗೊಳ್ಳುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಹೆಸರಲ್ಲಿ ಜನರ,ದೇಶದ ದಿಕ್ಕು ತಪ್ಪಿಸುವ ಕಾರ್ಯ ಮಾಡಲಿದೆ.ಸಂವಿಧಾನ ವಿರೋಧಿ ಕಾನೂನು ಎಂದು ಸುಪ್ರೀಂ ಕೋರ್ಟ್ ಇದನ್ನು ರದ್ದುಮಾಡಬೇಕು,ಮಾಡಲಿದೆ ಎಂಬ ವಿಶ್ವಾಸವಿದೆ. ಇದಾಗದಿದ್ದರೆ ಸಂವಿಧಾನದ ಆಶಯಕ್ಕೆ ಬೆಲೆ ಇರಲಿಲ್ಲ.ಜನರಿಗೆ ನಂಬಿಕೆ ದೂರಾಗಿದೆ.ಕೇಂದ್ರ ಸರ್ಕಾರದ ಮೈತ್ರಿ ಪಕ್ಷಗಳೇ ಎನ್ ಆರ್ ಸಿ ವಿರೋಧಿ ಸುತ್ತಿದ್ದಾರೆ.ದೇಶದಲ್ಲಿ ಹಿಂಸಾಚಾರ ನಡೆಯುತ್ತಿದೆ.ಇದಕ್ಕೆ ಕಾರಣ ಏನು? ನಾಲ್ಕಾರು ವರ್ಷದಿಂದ ಜನ ಹಿಂಸೆ ಅನುಭವಿ ಸುತ್ತಿದ್ದಾರೆ.19 ಲಕ್ಷ ಜನ ಪೌರತ್ವ ಕಳೆದುಕೊಳ್ಳುತ್ತಿದ್ದಾರೆ.ಇದರಲ್ಲಿ ಹೆಚ್ಚಿನವರು ಮುಸಲ್ಮಾನರು ಎಂದು ಕೊಂಡಿದ್ದರು.ಆದರೆ 15 ಕೋಟಿ ಜನ ಹಿಂದುಗಳು ಇದ್ದಾರೆ ಎಂಬ ಮಾಹಿತಿ ಇದೆ. 25 ಮಂದಿ ಸಾವನ್ನಪ್ಪಿದ್ದಾರೆ. ಜನ ಬೀದಿಗೆ ಬಂದಿದ್ದಾರೆ. ಮಂಗಳೂರಿನ ಲ್ಲಿ 200 ಮಂದಿ ಪ್ರತಿಭಟನೆ ನಡೆಸಿದ್ದನ್ನು ತಡೆಯದೇ ಹಿಂಸೆಗೆ ದೂಡಿ ಇಬ್ಬರು ಅಮಾಯಕರನ್ನು ಸಾಯಿ ಸಿದ್ದೀರಿ.ಇದರಿಂದ ಲಾಭ ಪಡೆಯಲು ಮುಂದಾದರೆ, ಇದೇ ತಿರುಗಿ ಬೀಳಲಿದೆ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಮುಕ್ತ ಭಾರತ ಆಗಲಿದೆ. ಸಂವಿಧಾನ ಉಳಿಸುವ ಸಂಕಲ್ಪ ಮಾಡಿದ್ದೇವೆ. ಈ ಮೂಲಕ ದೇಶ ಉಳಿಸುವ ಕಾರ್ಯ ಮಾಡಲಿದ್ದೇವೆ ಎಂದರು. ವೇದಿಕೆಯ ಮೇಲೆ ಇರುವವರಿಗೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸಂವಿಧಾನದ ಪೀಠಿಕೆ ಬೋಧಿಸಿದರು. ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ , ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಡಾ ಜಿ ಪರಮೇಶ್ವರ್, ಡಿಕೆ ಶಿವಕುಮಾರ್, ರಾಮಲಿಂಗ ರೆಡ್ಡಿ, ಸುದರ್ಶನ್, ಉಗ್ರಪ್ಪ, ಮಹದೇವಪ್ಪ, ಸೌಮ್ಯ ರೆಡ್ಡಿ, ರಿಜ್ವಾನ್ ಅರ್ಷದ್, ಜಿ.ಸಿ. ಚಂದ್ರಶೇಖರ್, ರಾಜೀವ್ ಗೌಡ, ಬಿ.ಎಲ್. ಶಂಕರ್, ರೆಹಮಾನ್ ಖಾನ್, ಎಚ್.ಎಂ. ರೇವಣ್ಣ, ಬೈರತಿ ಸುರೇಶ್, ಎಐಸಿಸಿ ನಾಯಕ ವಿಷ್ಣುನಾಥನ್, ಕಾಂಗ್ರೆಸ್ ನ  ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರುಗಳು ಭಾಗಿಯಾಗಿದ್ದರು.