ಬೆಂಗಳೂರು, ಸೆ 17 ಚಂದನವನದ ಬುದ್ಧಿವಂತ ನಟ, ನಿರ್ದೇಶಕ ಉಪೇಂದ್ರ ಬುಧವಾರ 52ನೇ ವರ್ಷಕ್ಕೆ ಕಾಲಿಡಲಿದ್ದಾರೆ ಸದ್ಗುರು ಜಗ್ಗಿ ವಾಸುದೇವ್ ಅವರ ಕಾವೇರಿ ಕೂಗು ಅಭಿಯಾನಕ್ಕೆ ಬೆಂಬಲ ನೀಡಿರುವ ಉಪ್ಪಿ, ಈ ಬಾರಿಯ ಜನ್ಮದಿನಕ್ಕೆ ಯಾರೂ ಯಾವುದೇ ಗಿಫ್ಟ್ ತರಬೇಡಿ ಎಂದು ಮೂರು ದಿನ ಮೊದಲೇ ಮನವಿ ಮಾಡಿದ್ದಾರೆ
ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ... ಸೆಪ್ಟೆಂಬರ್ 18 "ಅಭಿಮಾನಿಗಳ ದಿನ", ಅಂದು ದಯವಿಟ್ಟು ತಾವುಗಳು ಯಾರೂ ಕೇಕ್, ಹೂವಿನ ಹಾರ ಹೂಗುಚ್ಛ ಮತ್ತು ಉಡುಗೊರೆಗಳನ್ನು ತರಬೇಡಿ.. ತರಲೇ ಬೇಕು ಎಂದೆನಿಸಿದರೆ ಗಿಡಗಳನ್ನು ತನ್ನಿ. ಮುಂದೆ ಅದನ್ನು ಪೋಷಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ
ಉಪೇಂದ್ರ ಅವರಿಗೆ ಟ್ವಿಟರ್ ಮೂಲಕ ಈಗಾಗಲೇ ಜನ್ಮದಿನದ ಶುಭಾಶಯ ಸಲ್ಲಿಕೆಯಾಗುತ್ತಿದ್ದು, ಅಭಿಮಾನಿಯೋರ್ವ ಅಭಿಮಾನಿಗಳ ದಿನದಂದು ತಮ್ಮ ಮಾತುಗಳನ್ನು ಕೇಳಲು ಕಾತರದಿಂದ ಕಾಯುತ್ತಿರುವೆ ವಿಳಾಸ ತಿಳಿಸಿ ಎಂದು ಬರೆದುಕೊಂಡಿದ್ದಾರೆ ಜತೆಗೆ ಪೆನ್ಸಿಲ್ ನಲ್ಲಿ ಬರೆದಿರುವ ಉಪ್ಪಿಯ ಚಿತ್ರವನ್ನು ಶೇರ್ ಮಾಡಿದ್ದಾರೆ
ಅಂದ ಹಾಗೆ ಸೆಪ್ಟೆಂಬರ್ 18 ರಂದು ಉಪೇಂದ್ರ ಹುಟ್ಟುಹಬ್ಬ ಮಾತ್ರವಲ್ಲ, ದಿವಂಗತ ನಟ ವಿಷ್ಣುವರ್ಧನ್ ಜನ್ಮದಿನವೂ ಹೌದು ನಟಿ ಶ್ರುತಿ ಕೂಡ ತಮ್ಮ 45ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ.