ಉಪ್ಪಾರಹಳ್ಳಿ: 45 ಕುಟುಂಬಗಳಿಗೆ ಮನೆ ಹಕ್ಕು ಪತ್ರ ವಿತರಣೆ
Upparahalli: Distribution of house title deeds to 45 families
ಕಂಪ್ಲಿ 02: ತಾಲೂಕಿನ ಮೆಟ್ರಿ ಗ್ರಾಪಂಯ ಉಪ್ಪಾರಹಳ್ಳಿ ಗ್ರಾಮದ ಎಚ್‌ಎಲ್‌ಸಿ ಕಾಲುವೆ ಬಳಿಯ ಕಮಲಾಪುರ ರಸ್ತೆಯಲ್ಲಿರುವ ನೂತನ ಬಡಾವಣೆಯಲ್ಲಿ ನೆಲೆಸಿರುವ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ಬುಧವಾರ ಶಾಸಕ ಜೆ.ಎನ್.ಗಣೇಶ ಸಮ್ಮುಖದಲ್ಲಿ ವಿತರಿಸಲಾಯಿತು. ನಂತರ ಶಾಸಕ ಜೆ.ಎನ್.ಗಣೇಶ ಮಾತನಾಡಿ, ಹಲವು ವರ್ಷಗಳಿಂದ ಹಕ್ಕು ಪತ್ರದ ಸಮಸ್ಯೆ ಇಲ್ಲಿನ ಕುಟುಂಬಗಳಿಗೆ ಕಾಡುತ್ತಿತ್ತು. ಆದರೆ, ಈಗ ಕಾಲ ಕೂಡಿ ಬಂದಿದ್ದು, ಇಲ್ಲಿನ 75 ಕುಟುಂಬಗಳ ಪೈಕಿ, ಈಗ 45 ಕುಟುಂಬಗಳಿಗೆ ಹಕ್ಕು ಪತ್ರ ನೀಡಿದ್ದು, ಇನ್ನೂಳಿದ ಹಕ್ಕುಪತ್ರಗಳನ್ನು ಕೆಲವೇ ದಿನದಲ್ಲಿ ವಿತರಿಸಲಾಗುವುದು. ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ಸುಂದರವಾಗಿರಬೇಕು.
ಈ ನಿಟ್ಟಿನಲ್ಲಿ ಹಲವು ವರ್ಷಗಳ ಕನಸು ನನಸಾದಂತಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ನಾಗಮ್ಮ, ಪಿಡಿಒ ಬೀರಲಿಂಗ, ಕಾರ್ಯದರ್ಶಿ ಹುಲುಗಪ್ಪ, ಮುಖಂಡರಾದ ಹನುಮಗೌಡ, ಎಂ.ಜಡೆಪ್ಪ, ಜಗದೀಶ, ಕುಮಾರಸ್ವಾಮಿ, ಎನ್.ಗೀರೀಶ್, ದೇವೇಂದ್ರ್ಪ, ಹೊನ್ನಳ್ಳಿ ಗಂಗಾಧರ, ಯು.ತಿಮ್ಮಪ್ಪ, ಹನುಮಮ್ಮ, ಜಯಲಕ್ಷ್ಮೀ, ಸಿ.ಡಿ.ಗುಂಡಮ್ಮ ಸೇರಿದಂತೆ ಅನೇಕರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 