ಅಹಿಂಸೆ ಮತ್ತು ಶಾಂತಿಯ ಸಂದೇಶಗಳ ಪಾಲನೆ ಅತ್ಯಂತ ಅಗತ್ಯ : ಜವೇರಿಲಾಲ್ ಬಾಗ್ರೇಚಾ

ಅಹಿಂಸೆ ಮತ್ತು ಶಾಂತಿಯ ಸಂದೇಶಗಳ ಪಾಲನೆ ಅತ್ಯಂತ ಅಗತ್ಯ :  ಜವೇರಿಲಾಲ್ ಬಾಗ್ರೇಚಾ Upholding the messages of non-violence and peace is very important: Javerilal Bagrecha

ಲೋಕದರ್ಶನ ವರದಿ

ಕಂಪ್ಲಿ 01:  ಭಗವಾನ್ ಮಹಾವೀರರ ಅಹಿಂಸೆ ಮತ್ತು ಶಾಂತಿಯ ಸಂದೇಶಗಳ ಪಾಲನೆ ಪ್ರಸ್ತುತ ದಿನಮಾನಗಳಲ್ಲಿ ಅತ್ಯಂತ ಅಗತ್ಯವಾಗಿವೆ ಎಂದು ಕಂಪ್ಲಿ ಶ್ರೀ ಮುನಿಸುವ್ರತ್ ಸ್ವಾಮಿ ಶ್ವೇತಾಂಬರ ಸಂಘದ ಅಧ್ಯಕ್ಷ ಜವೇರಿಲಾಲ್ ಬಾಗ್ರೇಚಾ ತಿಳಿಸಿದರು. ಪಟ್ಟಣದ ಶ್ರೀಮುನಿಸ್ರುವತ್ ಸ್ವಾಮಿ ಜೈನ್ ಮಂದಿರದಲ್ಲಿ ಭಗವಾನ್ ಮಹಾವೀರರ ಜಯಂತಿ ಆಚರಣೆ ಅಂಗವಾಗಿ ಅದ್ದುರಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಮಹಾವೀರರ ಆದರ್ಶಗಳು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿವೆ ಎಂದರು. ಜೈನ್ ಸಮಾಜದ ಉಪಾಧ್ಯಕ್ಷ ಶಾಂತಿ ಲಾಲ್ ಬಾಲಾರ್ ಹಾಗೂ ಶಾಂತಿ ಲಾಲ್ ಸಿಂಘ್ವಿ ಮಾತನಾಡಿ, ಭಗವಾನ್ ಮಹಾವೀರರು ಜಗತ್ತಿಗೇ ಸಾರಿದ ಅಹಿಂಸೆ,ಶಾಂತಿ, ತ್ಯಾಗದ ತತ್ವಗಳು ಪ್ರತಿಯೊಬ್ಬರ ಜೀವನಕ್ಕೂ ದಾರೀದೀಪವಾಗಿವೆ. ಸತ್ಯವೇ ಮೋಕ್ಷಕ್ಕೆ ದಾರಿ, ಅಹಿಂಸೆಯೇ ಧರ್ಮದ ಮಾರ್ಗ, ಭಗವಾನ್ ಮಹಾವೀರರ ಬೋಧನೆಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಸಿಕೊಳ್ಳಬೇಕು ಎಂದು ತಿಳಿಸಿದರು.

ನಂತರ ಭಗವಾನ್ ಮಹಾವೀರರ ಪಲ್ಲಕ್ಕಿ ಉತ್ಸವ ಮತ್ತು ಭಗವಾನ್ ಮಹಾವೀರರ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ವಿವಿದ ಜಾನಪದ ಕಲಾ ತಂಡಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.  ಮೆರವಣಿಗೆಯಲ್ಲಿ ಜೈನ್ ಸಮಾಜದ ಮುಖಂಡರಾದ ಶಾಂತಿಲಾಲ್ ಸಿಂಘ್ವಿ, ಮನೋಹರ್ ಬಾಗ್ರೇಚಾ, ರಾಕೇಶ್ ಬಾಗ್ರೇಚಾ,ಫತೇಕುಮಾರ್ ಭಾಫಣಾ, ಶಾಂತಿಲಾಲ್ ಬಾಲಾರ್,ಆಮೃತ್ ಲಾಲ್ ದಂತೇವಾಡಿಯಾ, ರಾಜು ಜೈನ್,ಜೈನ್ ಸಮಾಜದ ಯುವಕ,ಯುವತಿಯರ ಸಂಘದ ಪದಾಧಿಕಾರಿಗಳು ಸಮಾಜದ ಮುಖಂಡರು ಭಾಗವಹಿಸಿದ್ದರು.