ಲೋಕದರ್ಶನ ವರದಿ
ಬೈಲಹೊಂಗಲ 18: ತಾಲೂಕಿನ ಬೆಳವಡಿ ಗ್ರಾಮದ ಮುಖ್ಯ ವತರ್ುಲದಲ್ಲಿರುವ ವೀರವನಿತೆ ರಾಣಿ ಮಲ್ಲಮ್ಮಳ ಪುತ್ಥಳಿಯನ್ನು ಮೇಲ್ದಜರ್ೆಗೇರಿಸುವಂತೆ ಆಗ್ರಹಿಸಿ, ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ನ ತಾಲೂಕು ಘಟಕದ ನೇತೃತ್ವದಲ್ಲಿ ದಿ.17ರಂದು ಬೆಳಗ್ಗೆ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಗ್ರಾಮದ ಪಿಯು ಮತ್ತು ಪದವಿ ಕಾಲೇಜು ವಿದ್ಯಾಥರ್ಿಗಳು, ನಾನಾ ಸಂಘಟನೆಗಳ ಮುಖಂಡರು ಗ್ರಾಮಸ್ಥರು ಪಕ್ಷಾತೀತವಾಗಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಎಬಿವಿಪಿ ಕಾರ್ಯಕರ್ತರು ದಿಢೀರ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡು ಪರ ಊರಿಗೆ ತೆರಳಬೇಕಾಗಿದ್ದ ಪ್ರಯಾಣಿಕರು, ವಿದ್ಯಾಥರ್ಿಗಳು ಪರದಾಡಿದರು. ಟ್ರಾಫಿಕ್ ತೊಂದರೆ ಉಂಟಾಯಿತು. ಕಾಲೇಜು ವಿದ್ಯಾಥರ್ಿಗಳು ಶೀಘ್ರ ಬೇಡಿಕೆ ಈಡೇರಿಸಬೇಕೆಂದು ಘೋಷಣೆಗಳನ್ನು ಕೂಗಿದರು.
ಬೆಳವಡಿ ಮಲ್ಲಮ್ಮ ಸಾಂಸ್ಕೃತಿಕ ಪ್ರತಿಷ್ಟಾನದ ಅಧ್ಯಕ್ಷ ಡಾ.ಆರ್.ಬಿ.ಪಾಟೀಲ ಮಾತನಾಡಿ, ವಿಶ್ವದಲ್ಲಿಯೇ ಪ್ರಪ್ರಥವಾಗಿ ಮಹಿಳಾ ಸೈನ್ಯ ಕಟ್ಟಿ ಶಿವಾಜಿ ಮಹಾರಾಜನೊಂದಿಗೆ ಹೋರಾಡಿದ ವೀರ ಮಹಿಳೆ ಮಲ್ಲಮ್ಮಳ ಮೂತರ್ಿ ಮೇಲ್ದಜರ್ೆಗೆ ಏರಿಸುವಂತೆ ಒತ್ತಾಯಿಸಿ ಸಾಕಷ್ಟು ಹೋರಾಟಗಳನ್ನು ಮಾಡಿದರು ಸರಕಾರ ಮತ್ತು ಜನಪ್ರತಿನಿಧಿಗಳು ಇಚ್ಛಾಶಕ್ತಿ ತೊರುತ್ತಿಲ್ಲ. ಭವ್ಯ ಪುತ್ಥಳಿ ನಿಮರ್ಾಣ ಮಾಡುವ ಕೆಲಸವಾಗಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವದಾಗಿ ಎಚ್ಚರಿಕೆ ನೀಡಿದರು.
ಆದರ್ಶ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎ.ಬಿ.ಪಾಟೀಲ, ನ್ಯಾಯವಾದಿ ಡಿ.ವೈ.ಗರಗದ, ಸಾಮಾಜಿಕ ಕಾರ್ಯಕರ್ತ ಪ್ರಕಾಶ ಹುಂಬಿ, ಎಬಿವಿಪಿ ಜಿಲ್ಲಾ ಸಂಚಾಲಕ ಸಿದ್ಧಾರೂಢ ಹೊಂಡಪ್ಪನವರ, ಈಶಪ್ರಭು ಶಿಕ್ಷಣ ಸಂಸ್ಥೆ ಕಾರ್ಯದಶರ್ಿ ಎಮ್.ಎಮ್.ಕಾಡೇಶನವರ, ಮಲ್ಲಮ್ಮಳ ಹೆಸರಿನಲ್ಲಿ ಪ್ರಾಧಿಕಾರ ರಚನೆ, ಹೋರಾಟದ ಇತಿಹಾಸ ನೆನಪಿಸುವ ಪರಿಕರ, ವಸ್ತು ಸಂಗ್ರಹಾಲಯ, ರಾಕ್ ಗಾರ್ಡನ್ ನಿಮರ್ಾಣ, ಉತ್ಸವಕ್ಕೆ ಶಾಶ್ವತ ಜಾಗ ಗುರುತಿಸುವಿಕೆ ಮುಂದಾಗಬೇಕು. ಮಂತ್ರಿ ಮಹೋದಯರು, ಕೇವಲ ಉತ್ಸವದಲ್ಲಿ ಚಪ್ಪಾಳೆ ಗಿಟ್ಟಿಸುವಗೋಸ್ಕರ ಘೋಷಣೆ ಮಾಡುತ್ತಾರೆ ವಿನ: ಮತ್ತೆ ಅದರತ್ತ ತಿರುಗಿ ನೋಡದಿರುವದು ವಿಪಯರ್ಾಸ ಸಂಗತಿಯಾಗಿದೆ ಎಂದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಮಲ್ಲಮ್ಮನ ಮೂತರ್ಿ ಮೇಲ್ದಜರ್ೆಗೆ ಏರಿಸಲು ಸರಕಾರದ ಗಮನಕ್ಕೆ ತಂದು ವೀರವನಿತೆಯ ಸ್ಮಾರಕಗಳನ್ನು ಅಭಿವೃದ್ದಿಪಡಿಸಲು ಒತ್ತಡ ಹೇರಲಾಗುವದು ಎಂದರು.
ಸ್ಥಳಕ್ಕಾಗಮಿಸಿದ ತಹಶೀಲ್ದಾರ ಡಾ.ದೊಡ್ಡಪ್ಪ ಹೂಗಾರ ಮನವಿ ಸ್ವೀಕರಿಸಿ ತಮ್ಮ ಬೇಡಿಕೆಯನ್ನು ಸರಕಾರದ ಗಮನಕ್ಕೆ ತರುವದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಹೋರಾಟ ಹಿಂಪಡೆಯಲಾಯಿತು.
ಪ್ರಾಚಾರ್ಯ ಸಂತೋಷ ಕಾರಿಮನಿ, ಎಬಿವಿಪಿ ತಾಲೂಕು ಸಂಚಾಲಕ ಅಪ್ಪಣ್ಣ ಹಡಪದ, ವಿಶ್ವನಾಥ ಪೂಜೇರ ಬಸವರಾಜ ಮಲಕಾಜನವರ,, ಮಂಜು ಕಿಂದರಿ, ಗಂಗಾಧರ ತಿರಕನ್ನವರ ಮತ್ತಿತರರು ಉಪಸ್ಥಿತರಿದ್ದರು.