ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಪರಿಸರ ಸ್ನೇಹಿ ಕ್ರೂಸರ್ ಮ್ಯಾಕ್ಸಿ-ಸ್ಕೂಟರ್ ಅನಾವರಣ

ಬೆಂಗಳೂರು,  ಜ.31, ಹೆಸರಾಂತ ಇ-ಸ್ಕೂಟರ್ ತಯಾರಕಾ, ಒಕಿನವಾ ಸಂಸ್ಥೆಯು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಹೊಚ್ಚ ಹೊಸ ಪರಿಸರ ಸ್ನೇಹಿ 'ಕ್ರೂಸರ್' ಮ್ಯಾಕ್ಸಿ ಸ್ಕೂಟರ್ ಅನ್ನು ಫೆಬ್ರವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋ 2020 ರಲ್ಲಿ ಅನಾವರಣಗೊಳಿಸಲು ಸಜ್ಜಾಗಿದೆ. ಒಂದು ಸಲ ಚಾರ್ಜ್ ಮಾಡಿದರೆ 120 ಕಿಲೋಮೀಟರ್ ಮೈಲೆಜ್ ನೀಡುತ್ತದೆ. ಹೈಸ್ಪೀಡ್ ಚಾರ್ಜಿಂಗ್ ವ್ಯವಸ್ಥೆ ಇರುವುದರಿಂದ ಕೇವಲ 2-3 ಗಂಟೆಯಲ್ಲಿ ಬ್ಯಾಟರಿ ಫುಲ್ ಚಾರ್ಜ್ ಆಗುತ್ತದೆ. ಅಷ್ಟೇ ಅಲ್ಲದೆ 100 ಕಿಲೋಮೀಟರ್ ಪ್ರತಿ ಗಂಟೆ ಇದರ ಟಾಪ್ ಸ್ಪೀಡ್ ಆಗಿದೆ. ಆಟೋ ಎಕ್ಸ್ ಪೋ 2020 ಕ್ಕೆ ಮುಂಚಿತವಾಗಿ ಒಕಿನವಾ ತನ್ನ 'ಕ್ರೂಸರ್' ಸ್ಕೂಟರ್ ನ ಟೀಜರ್ ಇಮೇಜ್ ಬಿಡುಗಡೆಮಾಡಿದೆ. ಆರೆಂಜ್ ವರ್ಣವು ಟೀಜರ್ ಇಮೇಜ್ ನಲ್ಲಿ ಎದ್ದು ಕಾಣುತ್ತದೆ. ಫೇಮ್2 (FAME2) ಅನುಮೋದನೆ ಪಡೆದಿರುವ ಭಾರತದ ಮೊದಲ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಒಕಿನವಾ ಸಂಸ್ಥೆ ಪಾತ್ರವಾಗಿದೆ. ಸಂಸ್ಥೆಯು ಲೈಟ್ (LITE) ಎನ್ನುವ ಇ-ಸ್ಕೂಟರ್ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.