ಬೆಂಗಳೂರು, ಸೆ 18 ರಸ್ತೆ ಗುಂಡಿಗಳನ್ನು ಅವೈಜ್ಞಾನಿಕವಾಗಿ ದುರಸ್ತಿ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆದೇಶದಂತೆ 10 ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಬಿಬಿಎಂಪಿ ದಂಡ ವಿಧಿಸಿ ಚಾಟಿ ಬೀಸಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅಧ್ಯಕ್ಷತೆಯಲ್ಲಿ ಸೆ 13 ರಂದು ನಡೆದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ನಗರದ ರಸ್ತೆಗಳಲ್ಲಿ ಅತಿಹೆಚ್ಚು ರಸ್ತೆಗುಂಡಿಗಳು ಕಂಡುಬಂದಿದ್ದು, ವೈಜ್ಞಾನಿಕವಾಗಿ ರಸ್ತೆಗುಂಡಿಗಳನ್ನು ದುರಸ್ತಿ ಮಾಡದೆ ಇರುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗಿರುವುದಕ್ಕೆ ಕಾರ್ಯದರ್ಶಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.
ಆಟರ್ಿಯಲ್ ಮತ್ತು ಸಬ್- ಆಟರ್ಿಯಲ್ ರಸ್ತೆಗಳಾದ ದಕ್ಷಿಣ ವಿಭಾಗದ ಲಾಲ್ ಬಾಗ್ ಮುಖ್ಯರಸ್ತೆ, ಪೂರ್ವ ವಿಭಾಗದಲ್ಲಿ ಎಂ.ಜಿ.ರಸ್ತೆ, ಹಳೆ ಮದ್ರಾಸ್ ರಸ್ತೆ ಎರಡು ಕಡೆಗಳಲ್ಲಿ, ಮಹದೇವಪುರ ವಿಭಾಗದಲ್ಲಿ ಬೆಳ್ಳಂದೂರು ರಸ್ತೆ ಎರಡುಕಡೆ, ಪಶ್ಚಿಮ ವಿಭಾಗದ ಡಾ.ರಾಜ್ ಕುಮಾರ್ ರಸ್ತೆ, ಯಲಹಂಕ ಟಾಟಾನಗರ ಮುಖ್ಯರಸ್ತೆ, ಬೊಮ್ಮನಹಳ್ಳಿ ಉತ್ತರಹಳ್ಳಿ ಮುಖ್ಯರಸ್ತೆ ಎರಡು ಕಡೆ ಗುಂಡಿಗಳನ್ನು ಅವೈಜ್ಞಾನಿಕವಾಗಿ ದುರಸ್ತಿ ಮಾಡಿರುವುದು ಕಂಡುಬಂದಿದೆ.
ಹೀಗಾಗಿ 10 ಇಂಜಿನಿಯರ್ ಗಳಿಗೆ 1 ರಿಂದ 3 ಸಾವಿರ ರೂ.ವರೆಗೆ ದಂಡ ವಿಧಿಸಿದ್ದು, ಅವರ ಸಂಬಳದಿಂದ ದಂಡವನ್ನು ಕಡಿತ ಮಾಡುವುದಾಗಿ ಬಿಬಿಎಂಪಿ ಆದೇಶದಲ್ಲಿ ಹೇಳಿದೆ.