* ಸದಾನಂದ ಮಜತಿ
ಬೆಳಗಾವಿ: ಎಪಿಎಂಸಿ ಪ್ರಾಂಗಣಕ್ಕೆ ತರಕಾರಿ ಮಾರುಕಟ್ಟೆ ಸ್ಥಳಾಂತರ ವಿವಾದ ತಾರಕಕ್ಕೇರಿದ್ದು, ಸರ್ಕಾ ರಕ್ಕೆ ಸೆಡ್ಡು ಹೊಡೆದು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಗಾಂಧಿ ನಗರದಲ್ಲಿ ಕಟ್ಟಡ ನಿರ್ಮಾ ಣ ಆರಂಭಿಸಿದ್ದ ಖಾಸಗಿ ಹೋಲ್ಸೇಲ್ ತರಕಾರಿ ವ್ಯಾಪಾರಸ್ಥರು ಕಟ್ಟಡಕ್ಕೆ ಪಾಲಿಕೆ ತಡೆ ನೀಡಿದ್ದರಿಂದ ಅತಂತ್ರರಾಗಿದ್ದು, ಹೋರಾಟದ ಹಾದಿ ಹಿಡಿದಿದ್ದಾರೆ.
ಜಾಗದ ಸಮಸ್ಯೆ, ಸಂಚಾರ ದಟ್ಟಣೆ, ಮೂಲ ಸೌಲಭ್ಯಗಳ ಕೊರತೆ ಮತ್ತಿತರ ಕಾರಣಗಳಿಂದ ಹಲವು ವರ್ಷಗಳ ಹಿಂದೆಯೇ ಎಪಿಎಂಸಿ ಪ್ರಾಂಗಣಕ್ಕೆ ತರಕಾರಿ ಮಾರಕಟ್ಟೆ ಸ್ಥಳಾಂತರಕ್ಕೆ ಸರ್ಕಾ ರ ಹಸಿರು ನಿಶಾನೆ ತೋರಿಸಿತ್ತು. ಆದರೆ ಕಾರಣಾಂತರಗಳಿಂದ ನನೆಗುದಿಗೆ ಬಿದ್ದಿತ್ತು. ಕೊನೆಗೆ 2017ರಲ್ಲಿ ಎಪಿಎಂಸಿ ಪ್ರಾಂಗಣದಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ನಿಮರ್ಾಣ ಕಾರ್ಯ ಆರಂಭಿಸಲಾಯಿತು. ಮೊದಲ ಹಂತದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ 138 ಮಳಿಗೆ ಪೂರ್ಣಗೊಂಡು 2018ರ ಎಪ್ರಿಲ್ ನ ಲ್ಲಿ ಉದ್ಘಾಟನೆಯೂ ನೆರವೇರಿತು. ಬಳಿಕ ಟೆಂಡರ್ ಮೂಲಕ ಮೊದಲ ಹಂತದಲ್ಲಿ 102 ಮಳಿಗೆ ವಿತರಿಸಿ 2019ರ ಮೇ 14 ರಿಂದ ದಂಡಮಂಡಳಿ ಪ್ರದೇಶದಲ್ಲಿ ತರಕಾರಿ ಮಾರಾಟ ಬಂದ್ ಮಾಡಿಸಿ ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರ ಆರಂಭಿಸಲಾಯಿತು.
ವರ್ತಕರಲ್ಲಿ ಪರ ವಿರೋಧಿ ಬಣ ನಿರ್ಮಾ ಣ
ಮಾರುಕಟ್ಟೆ ಸ್ಥಳಾಂತರ ಕುರಿತು ವರ್ತಕರಲ್ಲೇ ಎರಡು ಗುಂಪುಗಳು ನಿಮರ್ಾಣಗೊಂಡಿದ್ದವು. ಆಯಕಟ್ಟಿನ ಜಾಗ ಹಿಡಿದುಕೊಂಡು ಇಡೀ ಮಾರುಕಟ್ಟೆ ವ್ಯಾಪಾರ ವಹಿವಾಟು ನಿಯಂತ್ರಿಸುತ್ತಿದ್ದ ವರ್ತಕರ ಒಂದು ಗುಂಪು ಎಪಿಎಂಸಿ ಪ್ರಾಂಗಣಕ್ಕೆ ಮಾರುಕಟ್ಟೆ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದರೆ, ಇವರ ದೊಡ್ಡಣ್ಣನ ವರ್ತನೆಯಿಂದ ಬೇಸರಗೊಂಡಿದ್ದ ಇನ್ನೊಂದು ಗುಂಪು ಸ್ಥಳಾಂತರಕ್ಕೆ ಸಕರ್ಾರದ ಮೇಲೆ ಒತ್ತಡ ತರುತ್ತಿತ್ತು.
ಕೊನೆಗೂ ಸರ್ಕಾ ರ 2017ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಾ ಣ ಕಾರ್ಯ ಆರಂಭಿಸಿತ್ತು. ಮೊದಲ ಹಂತದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ 138 ಮಳಿಗೆಗಳನ್ನು ಹೊಂದಿರುವ ಸುಸಜ್ಜಿತ ಕಟ್ಟಡ ನಿರ್ಮಾ ಣಗೊಂಡು 2018ರ ಎಪ್ರಿಲ್ನಲ್ಲಿ ಉದ್ಘಾಟನೆಯೂ ನಡೆಯಿತು. ಬಳಿಕ ಟೆಂಡರ್ ಪ್ರಕ್ರಿಯೆ ಮುಗಿದು 2019ರ ಮೇ 14ರಿಂದ ತರಕಾರಿ ವ್ಯಾಪಾರ ನಡೆಯುತ್ತಿದೆ.
ಶಾಸಕರ ದುಂಬಾಲು ಬಿದ್ದ ವರ್ತಕರು
ಮಾಡು ಇಲ್ಲವೆ ಮಡಿ ಸ್ಥಿತಿಯಲ್ಲಿರುವ ವರ್ತರು ಖಾಸಗಿ ಮಾರುಕಟ್ಟೆ ಆರಂಭಕ್ಕೆ ಅನುಮತಿ ನೀಡುವಂತೆ ಅಂಗಲಾಚುತ್ತಿದ್ದಾರೆ. ಎಪಿಎಂಸಿ ಬಸ್ ನಿಲ್ದಾಣದಿಂದ ದೂರದಲ್ಲಿದ್ದು ರೈತರಿಗೆ ತೊಂದರೆಯಾಗುತ್ತದೆ ಎಂದು ನೆಪ ಮಾಡಿ ರೈತರನ್ನು ಒಗ್ಗೂಡಿಸಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಜನಪ್ರತಿನಿಧಿಗಳ ಬೆನ್ನು ಬಿದ್ದಿದ್ದು, ಅವರ ಮೂಲಕ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಮಾರುಕಟ್ಟೆ ಆರಂಭಕ್ಕೆ ಅನುಮತಿ ಪಡೆಯಲು ಹೆಣಗಾಡುತ್ತಿದ್ದಾರೆ.