ಶಿಕ್ಷಕರ ಸಂಘಕ್ಕೆ ಅವಿರೋಧ ಆಯ್ಕೆ

Unopposed selection for teachers' union

ಕೊಪ್ಪಳ 14: ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್ ಒನ್ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬೆಂಗಳೂರು ಇದರ ಕೊಪ್ಪಳ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ ಜರುಗಿತು. 

ಇತ್ತೀಚೆಗೆ ಕೊಪ್ಪಳ ನಗರದ ಸರಕಾರಿ ನೌಕರರ ಭವನದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಸಂಘದ ಸದಸ್ಯರು ಜಿಲ್ಲಾ ಘಟಕಕ್ಕೆ ಚುನಾವಣೆ ಬೇಡ. ಸಂಘದ ಬಲಿಷ್ಟತೆಗಾಗಿ ಕ್ರೀಯಾಶೀಲ ಸದಸ್ಯರನ್ನ ಒಮ್ಮತದ ಮೂಲಕ ಅಯ್ಕೆ ಮಾಡೋಣ ಎಂಬ ತೀರ್ಮಾನಕ್ಕೆ ಬರಲಾಯಿತು. ಅಂತಿಮವಾಗಿ ಎಲ್ಲ ಸದಸ್ಯರ ಒಮ್ಮತದ ಪದಾಧಿಕಾರಿಗಳಾಗಿ ಅವಿರೋಧವಾಗಿ ಅಧ್ಯಕ್ಷರಾಗಿ ಮಹಾಂತೇಶ್ ಜಾಲಿ ಗಿಡ ಪ್ರಧಾನ ಕಾರ್ಯದರ್ಶಿಯಾಗಿ ಮಾಂತೇಶ್ ಬಳಿಗಾರ ಉಪಾಧ್ಯಕ್ಷರಾಗಿ ಸಿದ್ದಪ್ಪ ಮೇಟಿ ಖಜಾಂಚಿಯಾಗಿ ಸಂಗಪ್ಪ ಗಾಣಿಗೇರ್ ಸಂಘಟನಾ ಕಾರ್ಯದರ್ಶಿಯಾಗಿ ಮುಕುಂದ ಭಗವತಿ ಜಂಟಿ ಕಾರ್ಯದರ್ಶಿಯಾಗಿ ಗಾಯತ್ರಿ ಪವಾರ್ ಆಯ್ಕೆಯಾದರು.  

ತಮ್ಮ ಮೇಲೆ ವಿಸ್ವಾಸವಿಟ್ಟು ತಮ್ಮನ್ನು ಜಿಲ್ಲಾ ಘಟಕಕ್ಕೆ  ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಹಾಗೂ ಬೆಂಬಲಿಸಿದ ಸಮಸ್ತ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕಿನ ಗ್ರೇಡ್ ಒನ್ ದೈಹಿಕ ಶಿಕ್ಷಣ ಶಿಕ್ಷಕ ಬಳಗಕ್ಕೆ ನೂತನ ಪದಾಧಿಕಾರಿಗಳ ತಂಡ ಕೃತಜ್ಞತೆ ಸಲ್ಲಿಸಿತು.  

ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳಾಗಿ ಅಯ್ಕೆಯಾದ ತಂಡಕ್ಕೆ ಜಿಲ್ಲೆಯ ಎಲ್ಲ ದೈಹಿಕ ಶಿಕ್ಷಣ ಶಿಕ್ಷಕರು ಅಭಿನಂದನೆ ಸಲ್ಲಿಸಿ ಸಂಘದ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸುವಂತೆ ಆಶಯ ವ್ಯಕ್ತಪಡಿಸಿದ್ದಾರೆ.