ತದ್ದೇವಾಡಿ ವಿ ಎಸ್ ಎಸ್ ಸಂಘಕ್ಕೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆ
Unopposed election of President and Vice President for Taddevadi VSS Sangh
ಇಂಡಿ 13: ಚಡಚಣ ತಾಲ್ಲೂಕಿನ ತದ್ದೇವಾಡಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಜಗನ್ನಾಥ ಮಾದೇವಪ್ಪ ಬಿರಾದಾರ ಹಾಗೂ ಉಪಾಧ್ಯಕ್ಷರಾಗಿ ಧಸಗೀರ ಊಟಗಿಕರ ಅವರು ಅವಿರೋದವಾಗಿ ಆಯ್ಕೆ ಆಗಿದ್ದಾರೆ ಎಂದು ನಿಯೋಜಿತ ಚುನಾವಣಾ ಅಧಿಕಾರಿ ಎಸ್ ಎಸ್ ಸದ್ದಲಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಉಪಾಧ್ಯಕ್ಷರು ಹಾಗೂ ಚಡಚಣ ಮಂಡಲ ರೈತ ಮೋರ್ಚ ಅಧ್ಯಕ್ಷರು ಹಾಗೂ ಚಡಚಣ ತಾಲೂಕು ಪಂಚಮಸಾಲಿ ಹೋರಾಟ ಸಮಿತಿಯ ಅಧ್ಯಕ್ಷರಾದ ನಾಗನಾಥಗೌಡ ಬಿರಾದಾರ ಹಾಗೂ ಉಮರಾಣಿ ಬೈರಗೊಂಡ ಬೈರನಾಥ್ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಮಾದೇವಸಾಹುಕಾರ ಬೈರಗೊಂಡ, ವಿವಿಧೋದ್ದೇಶ ಪ್ರಾಥಮಿಕ್ ಕೃಷಿ ಪತ್ತಿನ ಸಹಕಾರಿ ಸಂಘ ತದ್ದೇವಾಡಿ ಅಡಿಯಲ್ಲಿ ಬರುವ ತಾಡ್ದೆವಾಡಿ, ಕೆರೂರ, ಮರಗೂರ ಗ್ರಾಮಗಳು ಒಳಪಡುತ್ತವೆ.ಈ ಸಂದರ್ಭದಲ್ಲಿ ಜಗದೇವಪ್ಪ ಬಿರಾದಾರ ತುಕಾರಾಂ ಮಡಗಾವ, ಸುನಿಲ್ ಗೌಡನೂರ, ಅಶೋಕ ಗೌಡನೂರ, ಬಾಪೂರಾಯೇಗೌಡ ಬಿರಾದರ, ಸಂಗನಗೌಡ ಬಿರಾದಾರ, ಶಿವನಗೌಡ ಬಿರಾದಾರ, ಸುರೇಶ್ ವಡಗಾವ, ಶ್ರೀಶೈಲ ಕೋಲೋರಗಿ ಶಶಿಧರ್ ಕೊಳರಗಿ ಮಲ್ಕನಗೌಡ ಬಿರಾದಾರ ಸಿದ್ದರಾಮ ಬಿರಾದಾರ ಹಾಗೂ ತದ್ದೇವಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ವ್ಯವಸ್ಥಾಪಕರಾದ ಚಂದ್ರಕಾಂತ ಹಾಗೂ ಮರಗೂರ ಕೆರೂರ ತದ್ದೇವಾಡಿ ಗ್ರಾಮಸ್ಥರ ಸಮ್ಮುಖದಲ್ಲಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 