ಯುನೈಟೆಡ್‌ ವೇ ಬೆಂಗಳೂರು ಸಂಸ್ಥೆಯಿಂದ 15 ಸಾವಿರ ಸುರಕ್ಷತಾ ಸಾಧನ ವಿತರಣೆ

ಬೆಂಗಳೂರು,‌ ಏ 9,ಕೋವಿಡ್‌-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಯುನೈಟೆಡ್ ವೇ ಬೆಂಗಳೂರು ಸಂಸ್ಥೆ ವತಿಯಿಂದ‌ ಸುಮಾರು 15 ಸಾವಿರ ಸುರಕ್ಷತಾ ಸಾಧನಗಳನ್ನು ವಿತರಿಸಲಾಯಿತು.
ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಗೆ ಸುರಕ್ಷಾ ಕಿಟ್ ಗಳನ್ನು ಹಸ್ತಾಂತರಿಸಿದರು.ಈ‌  ಸಂದರ್ಭದಲ್ಲಿ  ಲಾಕ್ ಡೌನ್ ಮುಂದುವರೆಸಬೇಕೇ..ಬೇಡವೇ?  ಎನ್ನುವುದು ಪರಸ್ಥಿತಿಯ ಮೇಲೆ  ಅವಲಂಬಿಸಿದೆ. ಕೊರೊನಾ ವೈರಸ್ ಹೆಚ್ಚಾಗಿ ಹರಡುತ್ತಿರುವ ಪ್ರದೇಶಗಳಲ್ಲಿ ಲಾಕ್ ಡೌನ್  ಇನ್ನಷ್ಟು ಬಿಗಿಯಾಗಲಿದೆ. ಕಡಿಮೆ ಇರುವ ಪ್ರದೇಶಗಳಲ್ಲಿ ಸಡಿಲವಾಗಲಿದೆ ಎನ್ನುವ ಮೂಲಕ‌  ಲಾಕ್ ಡೌನ್ ವಿಸ್ತರಣೆಯಾಗುವ ಸುಳಿವು ಕೊಟ್ಟರು.ಮಾಸ್ಕ್ ಧರಿಸುತ್ತಿರುವುದು  ಇಂದು ನಿನ್ನೆಯಿಂದ ಬಂದದ್ದಲ್ಲ. ಹಿಂದಿನ ಕಾಲದಿಂದಲೂ ಬಂದಂತಹ ರೂಢಿಯಿದು. ವೈರಾಣು  ಹರಡುವುದನ್ನು ತಡೆಗಟ್ಟಲು ಮಾಸ್ಕ್ ಧರಿಸುವುದು ಒಳ್ಳೆಯದು.ಮಾಸ್ಕ್ ಧರಿಸಿ ಸುರಕ್ಷಿತರಾಗಿ ಎಂದು‌‌ ಅಶ್ವತ್ಥ ನಾರಾಯಣ್ ಕರೆ‌ ನೀಡಿದರು.