ಕೇಂದ್ರ ಸಚಿವ ಜೋಶಿ ಸಣ್ಣ ಸಣ್ಣ ಸಮಾಜ ಮುಖ್ಯವಾಹಿನಿಗೆ ತರುವ ಸಂಕಲ್ಪ : ಮ್ಯಾಗೇರಿ
Union Minister Joshi is determined to bring small communities into the mainstream: Mageri
ಶಿಗ್ಗಾವಿ 21: ನಂಬಿಕೆಗೆ ಅರ್ಹವಾದ ಯಾವುದಾದರೂ ಸಮಾಜವಿದ್ದರೆ ಅದು ದೈವಜ್ಞ ಸಮಾಜ ಎಂದು ಮಾಜಿ ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು. ತಾಲೂಕಿನ ಚಾಕಾಪೂರ ಗ್ರಾಮದ ಆಸ್ತಿ ಸಂಖ್ಯೆ 41/1 ರಲ್ಲಿ 25-26 ನೇ ಸಾಲಿನ ಸಂಸತ್ತ ಸದಸ್ಯರಾದ ಪ್ರಲ್ಹಾದ ಜೋಶಿಯವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ 5 ಲಕ್ಷ ಮೊತ್ತದ ದೈವಜ್ಞ ಸಮಾಜದ ಸಮುದಾಯ ಭವನ ನಿರ್ಮಾಣ ಭೂಮಿ ಪೂಜಾ ಕಾರ್ಯಕ್ರಮ ನೇರವೇರಿಸಿ ಮಾತನಾಡಿದ ಅವರು ಸಣ್ಣ ಸಣ್ಣ ಸಮಾಜವು ಮುಖ್ಯವಾಹಿನಿಗೆ ತರಬೇಕು ಅವರು ಎಲ್ಲ ಸಮಾಜದವರಂತೆ ಆರ್ಥಿಕವಾಗಿ ಮುಂದೆ ಬರಲು ಅನುಕೂಲವಾಗುವಂತೆ ಪ್ರತಿ ಗ್ರಾಮಗಳಿಗೆ ಅವಶ್ಯಕತೆ ಗನುಗುಣವಾಗಿ 5, 10,15 ಲಕ್ಷದವರೆಗೂ ಅನುಧಾನ ಮಂಜೂರು ಮಾಡಿದ ಕೀರ್ತಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರಿಗೆ ಸಲ್ಲುತ್ತದೆ ಎಂದರು.
ಭಾಜಪ ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ ಮಾತನಾಡಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಲೋಕಸಭೆ ಸದಸ್ಯ ಬಸವರಾಜ ಬೊಮ್ಮಾಯಿ ಹತ್ತಿರ ದೈವಜ್ಞ ಸಮಾಜದ ಹಲವು ಬೇಡಿಕೆಗಳ ಬಗ್ಗೆ ನಮಗೆ ತಿಳಿಸಿದ್ದಾರೆ ಕಾರಣ ನಾವುಗಳು ಆದಷ್ಟು ಬೇಗ ಅವುಗಳ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು. ದೈವಜ್ಞ ಸಮಾಜ ಅಧ್ಯಕ್ಷ ಸುಧಾಕರ ದೈವಜ್ಞ ಮಾತನಾಡಿ ನಮ್ಮ ಸಮಾಜದ ಸಂಕಲ್ಪ ಮೊದಲಿಗೆ ದೇವಸ್ಥಾನ ಕಟ್ಟುವುದು ಅದಕ್ಕೆ ಇನ್ನೂ ಹೆಚ್ಚಿನ ಅನುಧಾನದ ಅವಶ್ಯಕತೆ ಇದೆ ಆದ್ದರಿಂದ ಅವರಿವರ ಎನ್ನದೇ ತಾಲೂಕಿನ ರಾಜಕಾರಣಿಗಳು, ನಾಯಕರು, ಮುಖಂಡರ ಹಾಗೂ ಕೊಡುಗೈ ದಾನಿಗಳ ಬೇಟಿ ಮಾಡಿ ಹಣ ಕ್ರೂಡ್ರೀಕರಿಸಿ ದೇವಾಲಯ ಕಟ್ಟುವ ಉದ್ದೇಶ ನಮ್ಮದಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡ ನರಹರಿ ಕಟ್ಟಿ, ಭೂದಾನಿ ವಾಸುದೇವ ರಾಯ್ಕರ್, ಉಪಾಧ್ಯಕ್ಷ ಸಂಕೇತ ರಾಯ್ಕರ, ಕಾರ್ಯದರ್ಶಿ ರಾಯೇಶ್ವರ ರಾಯ್ಕರ್, ಹಿರಿಯರಾದ ಚಂದ್ರಕಾಂತ ಪಾಲನಕರ, ದತ್ತಣ್ಣಾ ವೇರ್ಣೇಕರ, ಪ್ರಕಾಶ ಪಾಲನಕರ, ನಾಗರಾಜ ಪಾಲನಕರ, ನಾಗರಾಜ ಶೇಜವಾಡಕರ, ಗಜಾನನ ಶೇಜವಾಡಕರ, ಜಗದೀಶ ಶೇಜವಾಡಕರ, ಆನಂದ ವೇರ್ಣೇಕರ, ನಾಗೇಶ ರಾಯ್ಕರ್, ಗಣೇಶ ಕೂಡತರಕರ, ಭೂಷಣ ರೇವಣಕರ, ನಾಗರಾಜ ರಾಯ್ಕರ್, ಸುರೇಶ ಪಾಲನಕರ, ಮಹೇಶ ದೈವಜ್ಞ, ಆನಂದ ದೈವಜ್ಞ, ಸಂತೋಷ ಸುಭೇದಾರ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 