ಔರಂಗಾಬಾದ್, ಅ 23: ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ನಂತರ, ಕೇಂದ್ರ ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ ಅವರು ತಮ್ಮ ಭಾಷಣವನ್ನು ಕೆಲವು ವಾಹಿನಿಗಳು ತಿರುಚಿವೆ ಎಂದು ಬುಧವಾರ ಹೇಳಿದ್ದಾರೆ.
ಮರಾಠವಾಡ ಪ್ರದೇಶದ ಜಲ್ನಾದ ಬಿಜೆಪಿ ಸಂಸದರೂ ಆಗಿರುವ ದಾನ್ವೆ ಅವರ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಅವರು ನಾನು ಇಲ್ಲಿರುವವರೆಗೂ ಬಕ್ರೀದ್ ಹಬ್ಬದಂದು ಯಾರೂ ಹಸು ವಧೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ವೀಡಿಯೋ ವೈರಲ್ ಆಗುತ್ತಿದ್ದಂತೆ ದಾನ್ವೆ ಅವರು ಈ ಬಗ್ಗೆ ಮಾಧ್ಯಮಗಳಿಗೆ ಈಮೇಲ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆಯೂ ದಾನ್ವೆ ಅವರು ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.