ಯುವನಿಧಿ ಯೋಜನೆಯಡಿ 1,45,978 ಮಂದಿಗೆ ನಿರುದ್ಯೋಗ ಭತ್ಯೆ : ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್

Unemployment allowance for 1,45,978 people under Youth Fund Scheme: Minister Dr. Sharan Prakash Pati

ಯುವನಿಧಿ ಯೋಜನೆಯಡಿ 1,45,978 ಮಂದಿಗೆ  ನಿರುದ್ಯೋಗ ಭತ್ಯೆ : ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ 

ಬೆಳಗಾವಿ ಸುವರ್ಣಸೌಧ ಡಿ.09: ರಾಜ್ಯದಲ್ಲಿ ಈವರೆಗೂ 1,81,699 ಪದವೀಧರರು ಯುವನಿಧಿ ಯೋಜನೆ ಅಡಿ ನೋಂದಣಿ ಮಾಡಿಕೊಂಡಿದ್ದು, ನೋಂದಣಿ ಮಾಡಿಕೊಂಡವರಲ್ಲಿ ಈವರೆವಿಗೂ 1,45,978 ಪದವೀಧರರಿಗೆ ನೇರ ನಗದು ವರ್ಗಾವಣೆ ಮೂಲಕ ನಿರುದ್ಯೋಗ ಭತ್ಯೆ ಪಾವತಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು. 

ಅವರು ಇಂದು ವಿಧಾನ ಪರಿಷತ್ ನಲ್ಲಿ ಸದಸ್ಯ ಕೆ.ಎಸ್‌.ನವೀನ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು. 

ಯುವನಿಧಿ ಯೋಜನೆ ಅಡಿ ನೋಂದಾಯಿಸಿದ ಅರ್ಹ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ ಈ ಯೋಜನೆ ತಲುಪುತ್ತಿದೆ ಎಂದರು. 

ಯುವನಿಧಿ ಯೋಜನೆ ಅಡಿಯಲ್ಲಿ ನೋಂದಾಯಿಸಿದ ಅಭ್ಯರ್ಥಿಗಳು ಪ್ರತಿ ತಿಂಗಳು ಡಿಕ್ಲರೇಶನ್ ನೀಡುವುದು ಕಡ್ಡಾಯವಾಗಿದ್ದು, ಇದನ್ನು ನೀಡದೆ ಇದ್ದಲ್ಲಿ ಭತ್ಯೆ ಸ್ಥಗಿತಗೊಳ್ಳಲಿದೆ ಎಂದರು.