ಶ್ರೀಮಂತ ಪಾಟೀಲ ನೇತೃತ್ವದಲ್ಲಿ ಭವ್ಯ ಎತ್ತಿನ ಗಾಡಿ ಶರ್ಯತ್ತುಗಳ ಆಯೋಜನೆ; ಬೈಜಾನ ಎತ್ತುಗಳು ಪ್ರಥಮ..!

Under the leadership of Srimant Patil, the arrangement of grand bullock carriages; Baijan bulls are

ಕಾಗವಾಡ  10 : ಅಥಣಿ ಶುಗರ್ಸ್‌ ಉದ್ಯೋಗ ಸಮೂಹದ ಸಂಸ್ಥಾಪಕ ಅಧ್ಯಕ್ಷ ಶ್ರೀಮಂತ ಪಾಟೀಲ ಅವರ ಜನ್ಮದಿನದ ಪ್ರಯುಕ್ತ ರವಿವಾರ ದಿ.09 ರಂದು ಚಂದ್ರಪ್ಪವಾಡಿ ಗ್ರಾಮದ ಮೈದಾನದಲ್ಲಿ ಆಯೋಜಿಸಿದ್ದ ಶಿವನೇರಿ ಕಿತಾಬ್ ಭವ್ಯ ಎತ್ತಿನ ಗಾಡಿ ಶರ್ಯತ್ತಿನಲ್ಲಿ ಶಿರೂರ ಗ್ರಾಮದ ಬಾಳು ಹಜಾರೆಯವರ ಹೆಲಿಕ್ಯಾಪ್ಟರ್ ಖ್ಯಾತಿಯ ಬೈಜಾನಯೆಂಬ ಜೋಡೆತ್ತುಗಳು ಪ್ರಥಮ ಸ್ಥಾನ ಪಡೆದುಕೊಂಡವು. 

ದಕ್ಷಿಣ ಭಾರತೀಯ ಸಕ್ಕರೆ ಸಂಸ್ಥೆಗಳ ಕರ್ನಾಟಕದ ಅಧ್ಯಕ್ಷ ಯೋಗೇಶ ಶ್ರೀಮಂತ ಪಾಟೀಲ ಅವರು ಗಣ್ಯರೊಂದಿಗೆ ಶರ್ಯತ್ತುಗಳನ್ನು ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಡಬಲ್ ಮಹಾರಾಷ್ಟ್ರ ಕೇಸರಿ ಪೈಲ್ವಾನ್ ಚಂದ್ರಹಾರ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಿ, ಮಾತನಾಡಿದರು.  

ಕಾರ್ಯಕ್ರಮದ ಉಸ್ತುವಾರಿಯನ್ನು ದಾದಾ ಶಿಂಧೆ ಮಾತನಾಡಿ, ಶ್ರೀಮಂತ ಪಾಟೀಲ ಅವರ ಜನ್ಮದಿನದ ಪ್ರಯುಕ್ತ ಗಡಿ ಭಾಗದಲ್ಲಿ ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ನಾವು ಬೈಲ್ ಗಾಡಿ ಶರ್ಯತ್ತು ಆಯೋಜನೆ ಮಾಡಿದ್ದು, ಅದಕ್ಕೆ ಅವರು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ ಎಂದರು.  

ಈ ವೇಳೆ ಶಿವಾನಂದ ಪಾಟೀಲ, ಅಭಯ ಅಕಿವಾಟೆ, ಬಸಗೌಡ ಪಾಟೀಲ, ಭಮ್ಮಣ್ಣಾ ಚೌಗುಲೆ, ನಿಂಗಪ್ಪಾ ಮಾಲಗಾವೆ, ಮುರಗೆಪ್ಪಾ ಮಗದುಮ, ತಮ್ಮಣ್ಣಾ ಪಾರಶೆಟ್ಟಿ, ರೇವಣ್ಣಾ ಪಾಟೀಲ, ಅಪ್ಪಾದಾದಾ ಹಜಾರೆ, ನಾನಾಸಾಬ ಅವತಾಡೆ, ಶಂಕರ ದೊಡ್ದನವರ, ಸಿದರಾಯ ಕಾಳೆಲಿ, ವಿಜಯ ಖನ್ನಿಕುಡೆ, ಸುಭಾಸ ಅಥಣಿ, ರವಿ ನಾಗ್ಗೋಳ, ಅಪ್ಪಾಸಾಬ ಮಳಮಳಸಿ, ಬೊಮ್ಮಣ್ಣಾ ಚೌಗುಲೆ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಲಕ್ಷಾಂತರ ಸಾರ್ವಜನಿಕರು ಉಪಸ್ಥಿತರಿದ್ದರು.