ಹಳಿಯಾಳ 30: ಉಸುಕು ಅಲಭ್ಯವಾಗಿರುವುದರಿಂದ ಒಟ್ಟಾರೆ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ಈ ಉಸುಕಿನ ಕೊರತೆ
ಸರಿಪಡಿಸದಿದ್ದರೆ ಬೀದಿಗಿಳಿದು ಪ್ರತಿಭಟನೆ ಮಾಡಲಾಗುವುದು ಎಂದು ವಿಧಾನ ಪರಿಷತ್
ಸದಸ್ಯ ಎಸ್.ಎಲ್. ಘೋಟ್ನೇಕರ
ಘೋಷಣೆ ಮಾಡಿದ್ದಾರೆ.
ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಘೋಟ್ನೇಕರ ಮಾತನಾಡುತ್ತಾ ರಾಜ್ಯದಲ್ಲಿ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಆಗುತ್ತಿದ್ದ ಅಭಿವೃದ್ಧಿ ಕಾರ್ಯಗಳು, ಜನಪ್ರತಿನಿಧಿಗಳಿಗೆ ದೊರೆಯುತ್ತಿದ್ದ ಗೌರವ ಮಾನ-ಮಯರ್ಾದೆ
ಈ ಸಕರ್ಾರದಲ್ಲಿ ದೊರೆಯುತ್ತಿಲ್ಲ. ವಿಧಾನ ಪರಿಷತ್ ಸದಸ್ಯರಿಗಂತೂ ಕವಡೆ ಕಾಸಿನ ಕಿಮ್ಮತ್ತಿಲ್ಲ
ಎಂದು ರಾಜ್ಯ ಸಕರ್ಾರದ ಆಡಳಿತ ವೈಖರಿಯ ವಿರುದ್ಧ ಗುಡುಗಿದರು. ಇದೇ ಸಂದರ್ಭದಲ್ಲಿ ಜಿಲ್ಲಾಡಳಿತದ
ವಿರುದ್ಧ ಟೀಕೆಗಳ ಸುರಿಮಳೆಗೈದರು. ಉತ್ತರಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ
ಅಧಿಕಾರಿಗಳದ್ದೇ ದಬರ್ಾರ ನಡೆದಿದೆ. ಜನಪ್ರತಿನಿಧಿಗಳ ಮಾತಿಗೆ ಸ್ಪಂದನೆ ಇಲ್ಲದಂತಾಗಿದೆ. ನಬಾಡರ್್ ಯೋಜನೆಯ ಕಾಮಗಾರಿ ಬಿಲ್ 6 ತಿಂಗಳಾದರೂ ಸಹ ಪಾವತಿಯಾಗಿಲ್ಲ.
ಮರಳಿನ ಕೊರತೆಯಿಂದಾಗಿ ಮನೆ ನಿಮರ್ಾಣ, ಇತರ
ನಿಮರ್ಾಣ ಕಾರ್ಯಗಳು ಸ್ಥಗಿತಗೊಂಡಿವೆ. ಇದರ ಮೇಲೆ ಅವಲಂಬಿಸಿದವರ
ಬಾಳು ಗೋಳಾಗಿದೆ. ಕಾಮಗಾರಿಗಳು ಕುಂಠಿತಗೊಂಡಿರುವುದರಿಂದ ಕಾಮರ್ಿಕರು ಪಕ್ಕದ ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ. ಪ್ರತಿ
ಕಾಮಗಾರಿ ಮುಕ್ತಾಯಕ್ಕೆ ಕಾಲಮಿತಿ ಹಾಕಲಾಗುತ್ತದೆ. ಆದರೆ ಅಗತ್ಯ ಉಸುಕು
ದೊರೆಯದೇ ಇದ್ದರೆ ಕಾಲಮಿತಿಯೊಳಗೆ ಕಾಮಗಾರಿಗಳು ಮುಕ್ತಾಯವಾಗುವುದು ಹೇಗೆ?
ಜೋಯಿಡಾ ತಾಲೂಕಿನ ರಾಮನಗರದಲ್ಲಿ ಉಸುಕಿನ ವಹಿವಾಟು ಉದ್ಯಮದಲ್ಲಿ ತೊಡಗಿದ್ದ ಹಲವಾರು ಜನರು ಉದ್ಯೋಗವಿಲ್ಲದೇ ಕಣ್ಣೀರು
ಹಾಕುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಉಸುಕು
ಮಾಫಿಯಾ ಇಲ್ಲ. ಖಾಸಗಿ ಜಮೀನಿನಲ್ಲಿರುವ ಉಸುಕು ಸರಬರಾಜು ಮಾಡಲಿಕ್ಕಾದರೂ ಕಾನೂನುಬದ್ಧ ಪರವಾನಿಗೆ ನೀಡಬೇಕಾಗಿದೆ.
ಉಸುಕಿನ ಸಮಸ್ಯೆ ಬಗೆಹರಿಸುವುದು, ಕಾಲಮಿತಿಯೊಳಗೆ ಗುತ್ತಿಗೆದಾರರಿಗೆ ಬಿಲ್ ಪಾವತಿಸುವುದು, ಸ್ಥಳೀಯರಿಗೆ
ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ದೊರೆಯುವಂತಾಗಬೇಕು, ಈ-ಸ್ವತ್ತು ವಿನಾಯತಿ
ಅನುಷ್ಠಾನಗೊಳ್ಳುವಂತಾಗಬೇಕು
ಮೊದಲಾದ ಬೇಡಿಕೆಗಳಿಗೆ ಆಗ್ರಹಿಸಿ ಜನಪ್ರತಿನಿಧಿಯಾದ ನಾನು ಬೀದಿಗಳಿದು ಜನಪರ
ಹೋರಾಟ ಮಾಡುತ್ತೇನೆ. ಎಂಎಲ್ಸಿ ಸ್ಥಾನ ಹೋದರೂ ಚಿಂತೆಯಿಲ್ಲ. ಅಧಿಕಾರವೇ ಇಲ್ಲದಿದ್ದರೆ ಎಂಎಲ್ಸಿ ಹುದ್ದೆ ಇದ್ದರೂ ಪ್ರಯೋಜವಿಲ್ಲ ಎಂದು ಎಂಎಲ್ಸಿ ಘೋಟ್ನೇಕರ
ಮಾಮರ್ಿಕವಾಗಿ ನುಡಿದರು.