ಸಮುದಾಯದ ಸದೀಚ್ಛೆಯಿಂದಲೇ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ ಎಂದು ಕುನ್ನಾಳ ಪಿಎಂಶ್ರೀ ಸರ್ಕಾರಿ ಶಾಲೆಯ ಶಿಕ್ಷಕ ಉಮೇಶ್ವರ ಮರಗಾಲ ಅಭಿ

Umeshwara Maragala Abhi, a teacher at PM Shri Government School in Kunnal, said that the development

ಸಮುದಾಯದ ಸದೀಚ್ಛೆಯಿಂದಲೇ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ ಎಂದು ಕುನ್ನಾಳ ಪಿಎಂಶ್ರೀ ಸರ್ಕಾರಿ ಶಾಲೆಯ ಶಿಕ್ಷಕ ಉಮೇಶ್ವರ ಮರಗಾಲ ಅಭಿಪ್ರಾಯ ಪಟ್ಟರು  

ಯರಗಟ್ಟಿ 28 : ಸಮುದಾಯದ ಸದೀಚ್ಛೆಯಿಂದಲೇ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ ಎಂದು ಕುನ್ನಾಳ ಪಿಎಂಶ್ರೀ ಸರ್ಕಾರಿ ಶಾಲೆಯ ಶಿಕ್ಷಕ ಉಮೇಶ್ವರ ಮರಗಾಲ ಅಭಿಪ್ರಾಯ ಪಟ್ಟರು.ಅವರು ತಾಲೂಕಿನ ದಾಸನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಮಾತನಾಡಿದರು ಇಂದು ಸರ್ಕಾರ ನನ್ನ ಶಾಲೆ ನನ್ನ ಶಾಲೆ ನನ್ನ ಕೊಡುಗೆ ಎಂಬ ಯೋಜನೆಯ ಅಡಿಯಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿಗಳು ಅವಶ್ಯಕ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಬೇಕು ಎಂದರು.ಭಾಗೋಜಿಕೊಪ್ಪದ ಶಿವಲಿಂಗ ಮುರಾಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿ ಸರ್ಕಾರಿ ಶಾಲೆಗಳು ಬಡ ವಿದ್ಯಾರ್ಥಿಗಳಿಗೆ ಸಂಜೀವಿನಿ ಇದ್ದಂತೆ ಇವುಗಳನ್ನು ಉಳಿಸಿ ಬೆಳೆಸುವುದು ಎಲ್ಲರೂ ಕರ್ತವ್ಯ ಎಂದರು.ಎಸ್‌.ಡಿ.ಎಂ.ಸಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಸತ್ತಿಗೇರಿ ಸಿ ಆರ್ ಪಿ ಬಾಳೇಶ ಸಿದ್ದಬಸಣ್ಣವರ, ಹುಲುಕುಂದ ಸಿ ಆರ್ ಪಿ ವಿಠ್ಠಲ ದಳವಾಯಿ ಸಿ. ಬಿ. ಇಂಗಳಿ ಎಸ್ ಡಿ ಎಮ್ ಸಿ ಸದಸ್ಯರು, ಊರಿನ ಹಿರಿಯರು, ಯುವಕರು ಇದ್ದರು. ಮುಖ್ಯ ಶಿಕ್ಷಕ ಜಿ ಎಸ್ ನೆಲಗುಡ್ಡ ಪ್ರಾಸ್ತಾವಿಕ ಮಾತುಗಳನ್ನಾಡಿದರುಶಿಕ್ಷಕಿ ಲಕ್ಷ್ಮೀ ಕುರುಬೇಟ ನಿರೂಪಿಸಿದರು. ಶಿಕ್ಷಕ ಎಸ್‌. ಬಿ. ಬಾಳೋಜಿ ಸ್ವಾಗತಿಸಿದರು. ವಿದ್ಯಾ ಅಂಗಡಿ ವರದಿ ವಾಚಿಸಿದರು. ಲಕ್ಷ್ಮಣ ತಳವಾರ ವಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.