ಫೆ 24 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ

ವಾಷಿಂಗ್ಟನ್, ಫೆಬ್ರವರಿ 11, ಅಮೆರಿಕ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೆ  24-25ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನ ಮಂಗಳವಾರ ದೃಢಪಡಿಸಿದೆ. ಅಧ್ಯಕ್ಷ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರೊಂದಿಗೆ ಆಗಮಿಸಲಿದ್ದಾರೆ .ಟ್ರಂಪ್ ಅವರು ಅಹಮದಾಬಾದಿಗೂ ಸಹ ಭೇಟಿ ನೀಡಲಿದ್ದಾರೆ.ಅಧ್ಯಕ್ಷರು ಮತ್ತು ಅಮೆರಿಕದ ಪ್ರಥಮ ಮಹಿಳೆ ನವದೆಹಲಿ ಮತ್ತು ಅಹಮದಾಬಾದ್‌ಗೆ ಪ್ರಯಾಣಿಸಲಿದ್ದು, ಇದು ಪ್ರಧಾನಿ ಮೋದಿ  ತವರು ರಾಜ್ಯವಾಗಿದೆ. 

ಮೇಲಾಗಿ  ಮಹಾತ್ಮ ಗಾಂಧಿಯವರ ಜೀವನ ಮತ್ತು ಭಾರತೀಯ ಸ್ವಾತಂತ್ರ್ಯ ಚಳವಳಿಯ ನಾಯಕತ್ವದಲ್ಲಿ ಅಂತಹ ಮಹತ್ವದ ಪಾತ್ರವನ್ನು ವಹಿಸಿದೆ ಎಂದೂ  ಶ್ವೇತಭವನ  ತನ್ನ ಹೇಳಿಕೆಯಲ್ಲಿ ತಿಳಿಸಿದೆ.ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್, ವಾರಾಂತ್ಯದಲ್ಲಿ ದೂರವಾಣಿ ಕರೆ ಮಾಡಿ , ಈ ಪ್ರವಾಸ, ಹಾಗೂ ಈ ಭೇಟಿ ಅಮೆರಿಕ –ಭಾರತ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಲಿದೆ ಎಂಬ  ವಿಸ್ವಾಸ ವ್ಯಕ್ತಪಡಿಸಿದ್ದರೂ  ಎಂದೂ  ಹೇಳಿಕೆಯಲ್ಲಿ ಸೇರಿಸಲಾಗಿದೆ.