ಲಕ್ನೋ, ಮಾರ್ಚ್ 30 (ಯುಎನ್‌ಐ) ರಾಜ್ಯದಲ್ಲಿ 17 ಹೊಸ ಪ್ರಕರಣಗಳು ಪತ್ತೆಯಾದ ನಂತರ ಉತ್ತರಪ್ರದೇಶದಲ್ಲಿ ಕರೋನ ಸೋಂಕಿನ ಖಚಿತ ಪ್ರಕರಣಗಳ ಸಂಖ್ಯೆ ಭಾನುವಾರ ತಡರಾತ್ರಿ 82 ಕ್ಕೆ ತಲುಪಿದೆ.ಅಧಿಕಾರಿಗಳ ಪ್ರಕಾರ, ಮೀರತ್‌ನಲ್ಲಿ ಭಾನುವಾರ ಒಂದೇ ದಿನ ಅತಿ ಹೆಚ್ಚು 8 ಪ್ರಕರಣಗಳು ಪತ್ತೆಯಾಗಿದ್ದು, ನಂತರ ನೋಯ್ಡಾದಲ್ಲಿ 5, ಗಾಜಿಯಾಬಾದ್‌ನಲ್ಲಿ 2 ಮತ್ತು ಬರೇಲಿ ಮತ್ತು ಆಗ್ರಾದಲ್ಲಿ ತಲಾ ಒಂದು ಹೊಸ ಪ್ರಕರಣಗಳು ದಾಖಲಾಗಿವೆ.ನೋಯ್ಡಾದಲ್ಲಿ, ಒಟ್ಟು ಪ್ರಕರಣಗಳ ಸಂಖ್ಯೆ 32 ಕ್ಕೆ ತಲುಪಿದೆ, ಇದರಲ್ಲಿ ಹೆಚ್ಚಿನ ಪ್ರಕರಣಗಳು ಕಂಪನಿಗೆ ಸಂಬಂಧಿಸಿವೆ ಎಂದು ಹೇಳಿದ್ದಾರೆ .ನೋಯ್ಡಾದಲ್ಲಿ ವೈರಸ್ ಹರಡುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಮತ್ತು ಲಕ್ನೋದಿಂದ ಹಿರಿಯ ಆರೋಗ್ಯ ಅಧಿಕಾರಿಯನ್ನು ಕಳಿಸಿದ್ದು ಲಾಕ್‌ಡೌನ್ ಜಾರಿಗೊಳಿಸಲು ಮತ್ತು ಶಂಕಿತ ಜನರನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲು ಆರ್‌ಎಎಫ್ ಮತ್ತು ಪಿಎಸಿಯ ಒಂದು ಕಂಪನಿಯನ್ನು ಸಹ ನೋಯ್ಡಾದಲ್ಲಿ ನಿಯೋಜಿಸಲಾಗಿದೆ.ಆದಾರೂ ಸಹ 82 ರೋಗಿಗಳಲ್ಲಿ ಈವರೆಗೆ 14 ಮಂದಿ ಪೂರ್ಣವಾಗಿ ಚೇತರಿಸಿಕೊಂಡಿದ್ದು ಅವರನ್ನು ಮನೆಗಳಿಗೆ ಕಳುಹಿಸಲಾಗಿದೆ