‘ಪಿಎಂ ಕೇರ್ಸ್’ ನಿಧಿಗೆ ಯುನಿಒನ್ ಫೌಂಡೇಷನ್ ದೇಣಿಗೆ

ಬೆಂಗಳೂರು, ಏ.10,ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ಯುನಿಒನ್ ಫೌಂಡೇಷನ್ ‘ಪಿಎಂ ಕೇರ್ಸ್’ ಫಂಡ್ ಗೆ 2.5 ಲಕ್ಷ ರೂ ದೇಣಿಗೆ ನೀಡಿದೆ. ಸಮಾಜ ಸೇವೆ ಮಾಡಲು ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರ್ವಾಹಕ ಅಧಿಕಾರಿಗಳ ಪತ್ನಿಯರು ಯುನಿಒನ್ ಫೌಂಡೇಷನ್ ಅನ್ನು ಸ್ಥಾಪಿಸಿದ್ದಾರೆ. ನಿರ್ಗತಿಕ ಮತ್ತು ಬಡವರ ಉನ್ನತಿಗೆ ಸಂಬಂಧಿಸಿದ ಸಾಮಾಜಿಕ ಚಟುವಟಿಕೆಗಳನ್ನು ನಡೆಸುವಲ್ಲಿ ಯುನಿಒನ್ ಫೌಂಡೇಶನ್ ಯಾವಾಗಲೂ ಮುಂಚೂಣಿಯಲ್ಲಿದೆ. "ವಾಸ್ತವವಾಗಿ ಇದು ಈ ಪ್ರಮಾಣದ ವಿಪತ್ತಿನ ಕಡೆಗೆ ಸಹಾಯ ಹಸ್ತ ಚಾಚುವ ಮಾರ್ಗವಾಗಿದೆ" ಎಂದು ಯುನಿಒನ್ ಫೌಂಡೇಶನ್‌ ನ ಅಧ್ಯಕ್ಷರಾದ ಸತ್ಯವತಿ ರೈ ತಿಳಿಸಿದ್ದಾರೆ.