ಕರೋನವೈರಸ್ ತಡೆಗಟ್ಟುವ ಚೀನಾ ಪ್ರಯತ್ನಗಳಿಗೆ ವಿಶ್ವಸಂಸ್ಥೆ ಮುಖ್ಯಸ್ಥರ ಶ್ಲಾಘನೆ

ಇಸ್ಲಾಮಾಬಾದ್, ಫೆ 17, ಕೊರೊನಾವೈರಸ್ (ಕೊವಿದ್-19) ಸೋಂಕು ಎದುರಿಸುವ ಚೀನಾದ ಮಹತ್ತರ ಪ್ರಯತ್ನಗಳ ಬಗ್ಗೆ ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಭಾನುವಾರ ಇಲ್ಲಿಗೆ ಆಗಮಿಸಿರುವ ಅವರು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡುತ್ತಾ, ಚೀನಾದ ಸರ್ಕಾರ ಜಾರಿಗೆ ತಂದಿರುವ ಕ್ರಮಗಳು ದೊಡ್ಡ ಮಟ್ಟದ ಪ್ರಯತ್ನಗಳಾಗಿದ್ದು, ಇವು ರೋಗ ಹರಡುವುದನ್ನು ತಡೆಯುತ್ತವೆ ಎಂಬ ಬಗ್ಗೆ  ತುಂಬಾ ವಿಶ್ವಾಸವಿದೆ ಎಂದು ಹೇಳಿದ್ದಾರೆ.      

ಕರೋನವೈರಸ್ ಸೋಂಕು ಎದುರಿಸುವ ದೊಡ್ಡ ಸವಾಲನ್ನು ಪ್ರಸ್ತಾಪಿಸಿದ ಅವರು,  ತ್ವರಿತ ಪರಿಹಾರವನ್ನು ಪಡೆಯುವುದು ಯಾವಾಗಲೂ ಕಷ್ಟ.  ಆದರೆ ಚೀನಾ ಸರ್ಕಾರ  ಮಾರಕ ಸೋಂಕು ತಡೆಗೆ ತುಂಬಾ ಪರಿಣಾಮಕಾರಿಯಾಗಿ ಸ್ಪಂದಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.   2017ರ ಜನವರಿ 1ರಂದು ಅಧಿಕಾರ ವಹಿಸಿಕೊಂಡ ನಂತರ ಗುಟೆರೆಸ್ ಅವರು ಪಾಕಿಸ್ತಾನಕ್ಕೆ ಮೊದಲ ಭಾರಿಗೆ ಅಧಿಕೃತ ಭೇಟಿ ನೀಡಿದ್ದಾರೆ. ನಾಲ್ಕು ದಿನಗಳ ಭೇಟಿಯ ವೇಳೆ ಗುಟೇರಸ್ ಅವರು ಆಫ್ಘನ್ ನಿರಾಶ್ರಿತರ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.