ವಿಶ್ವಸಂಸ್ಥೆ, ಮಾ 7, ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್ ನಲ್ಲಿ 31 ಜನರನ್ನು ಬಲಿಪಡೆದ ದಾಳಿಯನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗ್ಯುಟೆರಸ್ ಖಂಡಿಸಿದ್ದಾರೆ. ರಾಜಕಾರಣಿ ಅಬ್ದುಲ್ ಅಲಿ ಮಜಾರಿ ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ನಡೆದ ದಾಳಿಯಲ್ಲಿ 29 ನಾಗರಿಕರು ಸೇರಿದಂತೆ ಕನಿಷ್ಠ 31 ಜನರು ಮೃತಪಟ್ಟಿದ್ದು 55 ಜನರು ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ಜನತೆಗೆ ಗ್ಯುಟೆರಸ್ ಸಾಂತ್ವನ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾಗರಿಕರ ಮೇಲಿನ ದಾಳಿಯನ್ನು ಸಹಿಸಲಾಗುವುದು ಮತ್ತು ಇಂತಹ ಅಪರಾಧ ಎಸಗುವವರನ್ನು ಹೊಣೆಗಾರರನ್ನಾಗಿಸಬೇಕು. ಅಫ್ಘಾನಿಸ್ತಾನದ ಶಾಂತಿ ಪ್ರಕ್ರಿಯೆಗೆ ಅಫ್ಘನ್ ಜನರೊಂದಿಗೆ ವಿಶ್ವಸಂಸ್ಥೆ ಇರಲಿದೆ ಎಂದು ಅವರು ತಿಳಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿನ ವಿಶ್ವಸಂಸ್ಥೆ ಸಹಾಯಕ ಸಂಸ್ಥೆ ಕೂಡ ದಾಳಿಯನ್ನು ಖಂಡಿಸಿ, ನಾಗರಿಕರ ಮೇಲೆ ದಾಳಿ ನಡೆಸಿದ ಸಂಘಟನೆಗಳ ವಿರುದ್ಧ ಕ್ರಮಕೈಗೊಂಡು ಜನತೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದೆ.