ನ್ಯಾನ್ (ಸ್ವಿಜರ್ಲೆಂಡ್), ಮಾ 24, ಕೊರೊನಾ ವೈರಸ್ ಭೀತಿಯಿಂದಾಗಿ ಮೇನಲ್ಲಿ ನಡೆಯಬೇಕಿದ್ದ ಚಾಂಪಿಯನ್ಸ್ ಲೀಗ್ ಫೈನಲ್ ಹಣಾಹಣಿಯನ್ನು ಯುರೋಪಿಯನ್ ಯೂನಿಯನ್ ಫುಟ್ಟಾಲ್ ಅಸೋಸಿಯೇಷನ್ (ಯುಇಎಫ್ ಎ) ಮುಂದೂಡಿದೆ.) ಇಸ್ತಾನ್ ಬುಲ್ ನಲ್ಲಿ ಮೇ 30ರಂದು ಫೈನಲ್ ಪಂದ್ಯ ನಿಗದಿಯಾಗಿತ್ತು. ಇದಕ್ಕೂ ಮುನ್ನ ಕೋವಿಡ್-19 ಆತಂಕದಿಂದಾಗಿ ಮಾರ್ಚ್ 17ರಿಂದ 18ರವರೆಗೆ ನಡೆಯಬೇಕಿದ್ದ ದ್ವಿತೀಯ ಚರಣದ ನಾಲ್ಕು ಪಂದ್ಯಗಳು ಸಹ ವಿಳಂಬಗೊಂಡಿದ್ದವು.ಈ ಕುರಿತು ತನ್ನ ಹೇಳಿಕೆಯಲ್ಲಿ ತಿಳಿಸಿರುವ ಯುಇಎಫ್ಎ, ಪುರುಷರ ಫೈನಲ್ ಅಲ್ಲದೆ, ಮಹಿಳಾ ಚಾಂಪಿಯನ್ಸ್ ಲೀಗ್ ಫೈನಲ್ (ಆಸ್ಟ್ರೀಲಿಯಾದ ವೀಯನ್ನಾ ಮೇ 24) ಮತ್ತು ಯುರೋಪಾ ಲೀಗ್ ಫೈನಲ್ (ಪೋಲೆಂಡ್ ನ ಗ್ದಾಂಸ್ಕಾ ಮೇ 27)) ಅನ್ನು ಸಹೋ ಮುಂದೂಡಲಾಗಿದೆ ಎಂದು ಹೇಳಿದೆ. ಆದಾಗ್ಯೂ ಫೈನಲ್ ನಡೆಯುವ ನೂತನ ದಿನಾಂಕವನ್ನು ಕುರಿತು ಯಾವುದೇ ನಿರ್ಧಾರ ಪ್ರಕಟಿಸಿಲ್ಲ.